ರಾಜಸ್ಥಾನ ಬಿಜೆಪಿ ಕೈ ತಪ್ಪುವ ಸಾಧ್ಯತೆ
ಮೈಸೂರು

ರಾಜಸ್ಥಾನ ಬಿಜೆಪಿ ಕೈ ತಪ್ಪುವ ಸಾಧ್ಯತೆ

October 9, 2018

ನವದೆಹಲಿ: ಮುಂಬರುವ ಪಂಚರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಗೆ ಶಾಕ್ ಕಾದಿದೆ ಎಂದು ಟೈಮ್ಸ್‍ನೌ ವಾರ್ ರೂಂ ಸ್ಟ್ರಾಟರ್ಜಿಸ್ ಸಮೀಕ್ಷೆ ಹೇಳಿದೆ. ತಾನು ಅಧಿಕಾರದ ಲ್ಲಿರುವ ರಾಜಸ್ಥಾನ ಕೈ ಬಿಡಲಿದೆ ಎಂಬ ಆತಂಕ ಬಿಜೆಪಿಯಲ್ಲಿ ಶುರುವಾಗಿದೆ. ರಾಜಸ್ಥಾನ ವಿಧಾನಸಭೆಯ 200 ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ 75 ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 115 ಸ್ಥಾನ ಪಡೆಯಲಿದೆ. ಇತರರು 10ರಲ್ಲಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಕಳೆದ 2013ರಲ್ಲಿ 163 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ವಸುಂಧರಾ ರಾಜೇ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದರು. ಆಗ ಕಾಂಗ್ರೆಸ್ ಕೇವಲ 21 ಸ್ಥಾನ ಗಳಿಸಿತ್ತು. ಈಗ ಬಿಜೆಪಿ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿ ಯಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನು ಮಧ್ಯಪ್ರದೇಶ ಹಾಗೂ ಛತ್ತೀಸ್‍ಗಢ್‍ದಲ್ಲಿ ಬಿಜೆಪಿ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗಿದೆ. ಮಧ್ಯಪ್ರದೇಶ ವಿಧಾನಸಭೆಯ 230 ಸ್ಥಾನಗಳಲ್ಲಿ ಬಿಜೆಪಿ 142 (2013ರಲ್ಲಿ 165), ಕಾಂಗ್ರೆಸ್ 77 (57) ಹಾಗೂ ಇತರರು 11(8) ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದ್ದು, ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಸಿಎಂ ಜಯಪ್ರಿಯತೆಯಲ್ಲಿ ಮುಂಚೂಣಿಯಲಿದ್ದಾರೆ. ಇನ್ನು ಛತ್ತಿಸ್‍ಗಢ್‍ದ ಹಾಲಿ ಕ್ಷೇತ್ರಗಳಲ್ಲಿ ಬಿಜೆಪಿ ಈ ಬಾರಿ 47 (2013ರಲ್ಲಿ 49), ಕಾಂಗ್ರೆಸ್ 33(39) ಹಾಗೂ ಇತರರು 10(2) ಸ್ಥಾನ ಗಳಿಸುವರು. ಹಾಲಿ ಮುಖ್ಯಮಂತ್ರಿ ರಮಣ ಸಿಂಗ್ ಅವರೇ ಮುಖ್ಯಮಂತ್ರಿಗಾದಿಗೆ ಹಿಡಿಯುವುದು ಖಾತರಿಯಾಗಿದೆ.

Translate »