ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ರೂಪದರ್ಶಿಗಳ ಆಯ್ಕೆ
ಮೈಸೂರು

ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ರೂಪದರ್ಶಿಗಳ ಆಯ್ಕೆ

August 2, 2019

ಮೈಸೂರು, ಆ.1(ಎಂಟಿವೈ)- ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ರೂಪದರ್ಶಿ ಸ್ಪರ್ಧೆ ಯಲ್ಲಿ 114 ಮಂದಿ ಪಾಲ್ಗೊಂ ಡಿದ್ದು, ಅವರಲ್ಲಿ 4 ವಿಭಾಗ ಗಳಲ್ಲಿ ತಲಾ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ತಿಬ್ಬಾಸ್ ಗ್ರೂಪ್ ಮುಖ್ಯಸ್ಥ ಡಿ.ಸಿ. ನಾಗೇಶ್ ತಿಳಿಸಿದ್ದಾರೆ.

ಕಿಂಗ್ಸ್ ಎಲ್ ಡೆನ್ ರೆಸಾರ್ಟ್ ನಲ್ಲಿ ಮಿಸ್ಟರ್, ಮಿಸ್, ಮಿಸ್ಟ್ರಸ್, ಟೀನ್ ಮತ್ತು ಲಿಟಲ್ ಪ್ರಿನ್ಸ್, ಪ್ರಿನ್ಸಸ್ ರೂಪದರ್ಶಿ ಸ್ಪರ್ಧೆ ನಡೆಸಲಾಗಿತ್ತು. ಒಟ್ಟು 4 ವಿಭಾಗಗಳಿಂದ 114 ಜನರು ಸ್ಪರ್ಧಿಗಳು ಭಾಗವಹಿಸಿ ದ್ದರು. ಮೈಸೂರಿನ ಜ್ಯೋತಿ ಮಿಸ್ಟ್ರಸ್, ಹೈದ್ರಾಬಾದ್‍ನ ನಿತೀಶ್ ಮಿಸ್ಟರ್, ಮಿಸ್ ರೋಷಿಣಿ, ಬೆಳ್ತಂಗಡಿಯ ಸೃಷ್ಟಿ ಟೀನ್ ಆಗಿ, ಮಿಸ್ಟರ್ ಟೀನ್ ಆಗಿ ಸಲ್ಮಾನ್ ಹಾಗೂ ಲಿಟಲ್ ಪ್ರಿನ್ಸ್ ಆಗಿ ಬೆಂಗಳೂರಿನ ನಯನಾ, ಪ್ರಿನ್ಸಸ್ ಆಗಿ ಮಂಗಳೂರಿನ ಸಿಂಚನಾ ಆಯ್ಕೆಯಾದರು. ಈ ವಿಜೇತರು 2019ರ ರಾಷ್ಟ್ರೀಯ ಐಕಾನ್ ವಿನ್ನರ್‍ಗಳಾಗಿದ್ದಾರೆ ಎಂದರು.

ಮಿಸ್ಟರ್ ಆಗಿ ಮಂಡ್ಯದ ಚೇತನ್, ಮಿಸ್ ಆಗಿ ಮೈಸೂರಿನ ಡಯಾನಾ, ಮಿಸ್ಟ್ರಸ್ ಆಗಿ ನಂದಿತಾ, ಟೀನ್ ಆಗಿ ವರ್ಷ, ಅದರಂತೆ ಮಿಸ್ಟರ್ ಟೀನ್ ವಿಭಾಗದಲ್ಲಿ ಸುಹಾಸ್, ಲಿಟಲ್ ಪ್ರಿನ್ಸ್ ವಿಭಾಗದಲ್ಲಿ ಅವಿತ್, ಸನಾ ಇವರುಗಳು ಪ್ರಶಸ್ತಿ ಪಡೆದಿದ್ದಾರೆ. ಇವರೊಂ ದಿಗೆ ಮಿಸ್ ಒಡಿಸ್ಸಾ ಆಗಿ ಜೀವನ್ ಮಯಿ, ಮಿಸೆಸ್ ಕೇರಳ ಆಗಿ ಅಂಜು ಪದ್ಮಕುಮಾರ್, ಮಿಸೆಸ್ ಆಂಧ್ರಪ್ರದೇಶ ಆಗಿ ಸೌಜನ್ಯ ಆಯ್ಕೆಯಾದರು. ಬೆಂಗಳೂರಿನ ಕಾವ್ಯ, ಮುಂಬೈನ ಶ್ವೇತಾ ಹಾಗೂ ಡಿ.ಸಿ.ನಾಗೇಶ್ ತೀರ್ಪುಗಾರರಾಗಿದ್ದರು ಎಂದರು. ಗೋಷ್ಠಿಯಲ್ಲಿ ರೂಪದರ್ಶಿ ಸ್ಪರ್ಧೆಯಲ್ಲಿ ವಿಜೇತರಾದ ಜ್ಯೋತಿ, ಚೇತನ್, ಡಯಾನ, ಸಿಂಚನಾ ಇದ್ದರು.

Translate »