ಚುನಾವಣಾ ವೆಚ್ಚ ಕಣ್ಗಾವಲು ಸಮಿತಿ ಸಭೆ
ಕೊಡಗು

ಚುನಾವಣಾ ವೆಚ್ಚ ಕಣ್ಗಾವಲು ಸಮಿತಿ ಸಭೆ

April 19, 2018

ಮಡಿಕೇರಿ: ಕೇಂದ್ರ ಚುನಾವಣಾ ಆಯೋಗ ದಿಂದ ಜಿಲ್ಲೆಗೆ ಚುನಾವಣಾ ವೆಚ್ಚ ವೀಕ್ಷಕರಾಗಿ ನಿಯೋ ಜನೆಗೊಂಡಿರುವ ಮಹಾರಾಷ್ಟ್ರ .ಆರ್.ಎಸ್. ಅಧಿಕಾರಿ ಜೈಕುಮಾರ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಚುನಾ ವಣಾ ವೆಚ್ಚ ಕಣ್ಗಾವಲು ಸಮಿತಿ ಸಭೆಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧ ವಾರ ನಡೆದ ಸಭೆಯಲ್ಲಿ ಚುನಾವಣೆ ವೆಚ್ಚಕ್ಕೆ ಸಂಬಂಧಿ ಸಿದಂತೆ ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ವಿಧಾನಸಭೆ ಚುನಾವಣೆ ಹಿನ್ನೆಲೆ ವೆಚ್ಚಕ್ಕೆ ಸಂಬಂಧಿಸಿದಂತೆ ನಿಯೋಜಿಸಿರುವ ಅಧಿಕಾರಿ ಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವ ಹಿಸಬೇಕು. ಪ್ರತಿನಿತ್ಯ ಮಾಹಿತಿ ಪಡೆದುಕೊಳ್ಳಬೇಕು. ಹಾಗೆಯೇ ವರದಿ ನೀಡಬೇಕು ಎಂದು ಜೈಕುಮಾರ್ ಅವರು ಸಂಬಂಧಪಟ್ಟ ವೆಚ್ಚ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಧಾನಸಭಾ ಚುನಾವಣೆಯ ಪ್ರಾಮುಖ್ಯತೆ ಮತ್ತು ಮಹತ್ವ ಅರಿತು ಕಾರ್ಯನಿರ್ವಹಿಸಬೇಕು. ಎಲ್ಲಾ ಅಧಿಕಾರಿ ಗಳು ಚುನಾವಣೆ ಸಂದರ್ಭದಲ್ಲಿ ತೃಪ್ತಿದಾಯಕವಾಗಿ ಕೆಲಸ ನಿರ್ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರು ಸ್ಪಷ್ಟ ಸೂಚನೆ ನೀಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರಮೇಶ್ ಪಿ.ಕೊನರೆಡ್ಡಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆ.ರಾಜು ಅವರು ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಚುನಾವಣೆ ವೆಚ್ಚ ನಿರ್ವಹಣಾಧಿಕಾರಿ ನಂದ, ಸಹಾಯಕ ವೆಚ್ಚ ನಿರ್ವಹಣಾಧಿಕಾರಿ ಶ್ರೀಧರಮೂರ್ತಿ, ಆದಾಯ ತೆರಿಗೆ ಇಲಾಕೆ ಅಧಿಕಾರಿ ರಮೇಶ್, ನೋಡಲ್ ಅಧಿಕಾರಿ ಪ್ರಮೋದ್, ಇತರರು ಇದ್ದರು.   

Translate »