ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಅದ್ಧೂರಿ ಸ್ವಾಗತ
ಕೊಡಗು

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಅದ್ಧೂರಿ ಸ್ವಾಗತ

January 6, 2020

ಗೋಣಿಕೊಪ್ಪಲು, ಜ.5- ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪೊನ್ನಂಪೇಟೆಗೆ ಮೊದಲ ಬಾರಿಗೆ ಆಗಮಿಸಿದ ರಂಗಭೂಮಿ ಕಲಾವಿದ ಪೊನ್ನ ಪೇಟೆಯ ಅಡ್ಡಂಡ ಕಾರ್ಯಪ್ಪ ಅವರನ್ನು ಪೊನ್ನಂಪೇಟೆಯ ನಾಗರಿಕರು, ನಿಸರ್ಗ ಯುವತಿ ಮಂಡಳಿ, ಹಿರಿಯ ನಾಗರಿಕ ಸಮಿತಿ ಯಿಂದ ಅದ್ಧೂರಿಯಾಗಿ ಸ್ವಾಗÀತಿಸಲಾಯಿತು.

ಮೊದಲಿಗೆ ಅಡ್ಡಂಡ ಕಾರ್ಯಪ್ಪ ಅವರು ಪೊನ್ನಂಪೇಟೆಯ ಬಸ್ ನಿಲ್ದಾಣ ದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಟೌನ್ ಬ್ಯಾಂಕ್ ಸಹಕಾರ ಸಂಘದ ಸಭಾಂಗಣ ದಲ್ಲಿ ಹಿರಿಯ ವೈದ್ಯ ಡಾ.ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡರು. ಈ ವೇಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಶಾಸಕ ಕೆ.ಜಿ.ಬೋಪಯ್ಯ ಮಾತ ನಾಡಿ, ಅಡ್ಡಂಡ ಕಾರ್ಯಪ್ಪ ಕಲಾವಿದ ರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮುಂದೆಯೂ ಸೇವೆ ಸಲ್ಲಿಸಲಿದ್ದಾರೆ. ಎಲ್ಲಾ ಅರ್ಹತೆ ಇರುವ ವ್ಯಕ್ತಿಗೆ ಗೌರವ ದೊರಕ್ಕಿದ್ದು, ಅವರು ತಮ್ಮ ಅಧಿಕಾರ ವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕೆಲಸ ಮಾಡುವ ಜೊತೆಗೆ, ಕೊಡಗಿನ ಕೀರ್ತಿ ಮತ್ತಷ್ಟು ಹೆಚ್ಚಿಸುವಂತಾಗಲಿ ಎಂದು ಆಶಿಸಿದರು.

ರಾಮಕೃಷ್ಣ ಆಶ್ರಮದ ಬೋಧ ಸ್ವರೂಪಾನಂದಾಜೀ ಮಹರಾಜ್ ಮಾತ ನಾಡಿ, ಪೊನ್ನಂಪೇಟೆ ಮಣ್ಣಿಗೆ ವಿಶೇಷ ಗುಣಗಳಿವೆ. ಕೊಡಗು ಜಿಲ್ಲೆಯಲ್ಲೂ ರಂಗಮಂದಿರ ನಿರ್ಮಾಣವಾಗುವ ಬಗ್ಗೆ ಅಡ್ಡಂಡ ಕಾರ್ಯಪ್ಪ ಅವರು ಗಮನಹರಿಸ ಬೇಕು. ಆ ಮೂಲಕ ಭಾರತಿಯ ಸಂಸ್ಕೃತಿ  ಎತ್ತಿಹಿಡಿಯಲಿ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತ ನಾಡಿ, ಈ ಪುಣ್ಯ ಭೂಮಿಯಲ್ಲಿ ಸನ್ಮಾನ ಸ್ವೀಕರಿಸಿರುವುದು ಹೆಮ್ಮೆ ತಂದಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಶ್ರೀಜಾ ಶಾಜಿ ಅಚ್ಚುತ್ತನ್, ಪೊನ್ನಂಪೇಟೆ ಗ್ರಾಪಂ ಅಧ್ಯಕ್ಷೆ ಸುಮಿತ್ರ ಗಣೇಶ್, ಉಪಾ ಧ್ಯಕ್ಷೆ ಮಂಜುಳಾ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಬಿ.ಪೂಣಚ್ಚ, ಪ್ರಮುಖರಾದ ಚಪ್ಪುಡೀರ ಸೋಮಯ್ಯ, ಆಲೀರ ಎರ್ಮು ಹಾಜಿ, ಎಂ.ಪಿ.ಅಪ್ಪಚ್ಚು, ಐನಂಡ ಬೋಪಣ್ಣ, ಕುಶಾಲಪ್ಪ, ಬಾಲ ಕೃಷ್ಣ ರೈ, ಡಾ.ಚಂದ್ರಶೇಖರ್, ಸಾಜಿ ಅಚ್ಚುತ್ತನ್ ಸೇರಿದಂತೆ ಇತರರು ಹಾಜರಿದ್ದರು.

 

 

 

Translate »