ಬೆಂಗಳೂರು-ಮೈಸೂರು ದಶಪಥ  ರಸ್ತೆ ಕಾಮಗಾರಿಗೆ ತಿಂಗಳಲ್ಲಿ ಚಾಲನೆ
ಮೈಸೂರು

ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿಗೆ ತಿಂಗಳಲ್ಲಿ ಚಾಲನೆ

March 4, 2019

ಮೈಸೂರು: ಕೇಂದ್ರ ಸರ್ಕಾರದ ಅನುದಾನದಲ್ಲಿ 7,400 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಬೆಂಗ ಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ದಶಪಥ ರಸ್ತೆ ನಿರ್ಮಾಣ ಕಾಮಗಾರಿಗೆ ತಿಂಗಳ ಬಳಿಕ ಚಾಲನೆ ದೊರೆಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂ ಕಿನ ಗಣಂಗೂರು ಗ್ರಾಮದ ಬಳಿ ದಶಪಥ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಿರ್ಮಿಸಿರುವ ಶಿಬಿರಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಒಟ್ಟು 118 ಕಿ.ಮೀ. ದಶಪಥದ ರಸ್ತೆ ನಿರ್ಮಿಸಲಾಗು ತ್ತಿದ್ದು, ಕಾಮಗಾರಿ ಎರಡು ಪ್ಯಾಕೇಜ್ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಪಂಚಮುಖಿ ದೇವಸ್ಥಾನ ದಿಂದ ಮದ್ದೂರು ತಾಲೂಕಿನ ನಿಡ ಘಟ್ಟ ಗ್ರಾಮದವರೆಗೆ (56.2 ಕಿ.ಮೀ.) 3,900 ಕೋಟಿ ರೂ. ವೆಚ್ಚದಲ್ಲಿ ಮೊದಲ ಪ್ಯಾಕೇಜ್‍ನ ಕಾಮಗಾರಿ ನಡೆಯಲಿದೆ. ಈ ಒಟ್ಟು ವೆಚ್ಚದಲ್ಲಿ 2,300 ಕೋಟಿ ರೂ. ನಲ್ಲಿ ಕಾಮಗಾರಿಗೆ ನಡೆದರೆ, ಉಳಿದ 1,600 ಕೋಟಿ ರೂ. ಮೊತ್ತವನ್ನು ಭೂ ಸ್ವಾದೀನ ಪ್ರಕ್ರಿಯೆಗೆ ಮೀಸಲಿರಿಸಲಾಗಿದೆ. ಅದೇ ರೀತಿ ನಿಡಘಟ್ಟ ಗ್ರಾಮದಿಂದ ಮೈಸೂರಿನ ರಿಂಗ್ ರಸ್ತೆವರೆಗೆ (61.1 ಕಿ.ಮೀ.) ಎರಡು ಪ್ಯಾಕೇಜ್‍ನಲ್ಲಿ ಕಾಮಗಾರಿ ನಡೆಯಲಿದೆ. ಇದಕ್ಕಾಗಿ 3,500 ಕೋಟಿ ರೂ. ವ್ಯಯಿಸ ಬೇಕಿದ್ದು, 2,300 ಕೋಟಿ ರೂ. ಕಾಮ ಗಾರಿಗೆ ಹಾಗೂ 1,121 ಕೋಟಿ ರೂ. ಭೂಸ್ವಾಧೀನ ಪರಿಹಾರಕ್ಕಾಗಿ ಬಳಸಿಕೊಳ್ಳ ಲಾಗುತ್ತಿದೆ ಎಂದು ವಿವರಿಸಿದರು.

90 ನಿಮಿಷ ಪ್ರಯಾಣ: ಮೈಸೂರು-ಬೆಂಗಳೂರು ನಡುವಿನ ಪ್ರಯಾಣಕ್ಕೆ ಈಗ 3ರಿಂದ 4 ಗಂಟೆ ಅವಧಿಯಾಗುತ್ತಿದೆ. ದಶ ಪಥ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿ ಕೇವಲ 90 ನಿಮಿಷಕ್ಕೆ ಇಳಿಕೆಯಾಗಲಿದೆ. 2 ಬದಿಯಲ್ಲಿ ಜೋಡಿ ಸೇವಾ ರಸ್ತೆ ಒಳಗೊಂಡಂತೆ 10 ಪಥದ ರಸ್ತೆ ನಿರ್ಮಿಸಲಾಗುತ್ತಿದೆ. 49 ಕೆಳ ಸೇತುವೆಗಳು, 13 ಮೇಲ್ಸೇತುವೆಗಳು ಹಾಗೂ ಸೇವಾ ರಸ್ತೆಯಲ್ಲಿ 69 ಬಸ್ ನಿಲ್ದಾಣಗಳು ನಿರ್ಮಾಣ ಮಾಡಲಾಗು ತ್ತಿದೆ. ಮೊದಲ ಪ್ಯಾಕೇಜ್‍ನಲ್ಲಿ ಶೇ.80 ರಷ್ಟು ಹಾಗೂ ಎರಡನೇ ಪ್ಯಾಕೇಜ್‍ನಲ್ಲಿ ಶೇ. 60ಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಂಡಿದೆ ಎಂದರು.

ಶ್ರೀರಂಗಪಟ್ಟಣ 8 ಕಿ.ಮೀ., ಮಂಡ್ಯ 10 ಕಿ.ಮೀ., ಮದ್ದೂರು 4 ಕಿ.ಮೀ., ಚನ್ನಪಟ್ಟಣ ಹಾಗೂ ರಾಮನಗರ ಸೇರಿ 22.2 ಕಿ.ಮೀ. ವ್ಯಾಪ್ತಿಯಲ್ಲಿ ಬೈಪಾಸ್ ನಿರ್ಮಿಸ ಲಾಗುವುದು. ಮದ್ದೂರು ಮತ್ತು ಶ್ರೀರಂಗಪಟ್ಟಣದ ಬಳಿ ವಿಶ್ರಾಂತ ತಾಣಗಳನ್ನು ನಿರ್ಮಿಸಲಾಗುವುದು. ಇಲ್ಲಿ ಪೆಟ್ರೋಲ್-ಡಿಸೆಲ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

150 ಕೋಟಿ ವೆಚ್ಚದಲ್ಲಿ ಗ್ರೇಡ್ ಸಪರೇಟರ್: ಬೆಂಗಳೂರಿನ ಪಂಚಮುಖಿ ದೇವಸ್ಥಾನ ದಿಂದ 4.5 ಕಿ.ಮೀ.ವರೆಗೆ ಫ್ಲೈಓವರ್ ನಿರ್ಮಿಸಲಾಗುವುದು. ಅದೇ ರೀತಿ ಮದ್ದೂರು ಅರ್ಥ ಕಿ.ಮೀ. ಹಾಗೂ ಶ್ರೀರಂಗಪಟ್ಟಣ ಬಳಿ 2.5 ಕಿ.ಮೀ.ವರೆಗೆ ಫ್ಲೈಓವರ್ ನಿರ್ಮಿಸ ಲಾಗುತ್ತದೆ. ಇದಲ್ಲದೆ, ಪ್ರತ್ಯೇಕ 150 ಕೋಟಿ ರೂ. ಕೇಂದ್ರ ಸರ್ಕಾರದ ಅನುದಾನದಲ್ಲಿ ಮೈಸೂರಿನ ಕೋಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಗ್ರೇಡ್ ಸಪರೇಟರ್ ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕೆ ಈಗಾಗಲೇ ತಾಂತ್ರಿಕ ಅನುಮೋದನೆ ದೊರೆತಿದೆ. ಸುಮಾರು 6 ತಿಂಗಳ ಬಳಿಕ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿ ಆರಂಭಿಸಿದ ದಿನದಿಂದ 30 ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‍ಹೆಚ್‍ಎಐ) ಸೂಪರಿಂಟೆಂಡೆಂಟ್ ಇಂಜಿನಿಯರ್ ಮತ್ತು ದಶಪಥ ರಸ್ತೆ ಯೋಜನೆಯ ನಿರ್ದೇಶಕರೂ ಆದ ಶ್ರೀಧರ್ ಮತ್ತಿತರರು ಹಾಜರಿದ್ದರು.

Translate »