ಬಿಳಿಗಿರಿರಂಗನ ಬೆಟ್ಟದ ಹುಂಡಿಯಲ್ಲಿ 17.29 ಲಕ್ಷ ರೂ. ಸಂಗ್ರಹ
ಚಾಮರಾಜನಗರ

ಬಿಳಿಗಿರಿರಂಗನ ಬೆಟ್ಟದ ಹುಂಡಿಯಲ್ಲಿ 17.29 ಲಕ್ಷ ರೂ. ಸಂಗ್ರಹ

December 11, 2018

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ಗೋಲಕದಲ್ಲಿ ಸಂಗ್ರಹವಾಗಿದ್ದ ಹಣವನ್ನು ಇತ್ತೀಚೆಗೆ ಎಣಿಕೆ ಮಾಡ ಲಾಯಿತು. ಒಟ್ಟು 17,29,037 ರೂ. ಹಾಗೂ ಚಿನ್ನ ಮತ್ತು ಬೆಳ್ಳಿ ಪದಾರ್ಥ ಗಳು ಇದ್ದವು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಸಂಗ್ರಹವಾಗಿದ್ದ ಹಣವನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಬ್ಯಾಂಕಿನ ಉಳಿತಾಯ ಖಾತೆಗೆ ಜಮಾ ಮಾಡಲಾಯಿತು. ಚಿನ್ನ ಮತ್ತು ಬೆಳ್ಳಿ ಪದಾರ್ಥಗಳು ಕಡಿಮೆ ಸಂಗ್ರಹವಾಗಿದ್ದ ಕಾರಣ ವೀಡಿಯೋ ಮಾಡಿ ಚೀಲದಲ್ಲಿ ಹಾಕಿ ಹುಂಡಿಯಲ್ಲಿ ಹಾಕಲಾಯಿತು. ಆರ್ಥಿಕ ವರ್ಷದ ಕೊನೆಯಲ್ಲಿ ಶೇಖರಣೆ ಆಗುವ ಚಿನ್ನ, ಬೆಳ್ಳಿ ಪದಾರ್ಥಗಳನ್ನು ಅಕ್ಕಸಾಲಿಗರಿಂದ ಪರಿಶೀಲಿಸಿ ದೃಢೀಕರಿಸಿಕೊಂಡು ಯಳಂದೂರಿನ ಉಪಖಜಾನೆಯಲ್ಲಿ ಇಡಲಾಯಿತು ಎಂದು ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್‍ಪ್ರಸಾದ್ ತಿಳಿಸಿದ್ದಾರೆ.

ತಹಶೀಲ್ದಾರ್ ಗೀತಾ ಹುಡೇದರ್, ದೇವಸ್ಥಾನದ ಕಾರ್ಯನಿವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್, ದೇವಸ್ಥಾನದ ವ್ಯವಸ್ಥಾನಪಾ ಸಮಿತಿ ಅಧ್ಯಕ್ಷ ಆಲ್ದೂರು ರಾಜಶೇಖರ್, ಸದಸ್ಯರಾದ ಪದ್ಮಚಂದ್ರು, ಶಿವಮ್ಮ, ಮರಿಸ್ವಾಮಿ, ಅರ್ಚಕ ರವಿ ಇತರರು ಈ ವೇಳೆ ಹಾಜರಿದ್ದರು.

Translate »