ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ
ಕೊಡಗು

ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ

December 11, 2018

ಮಡಿಕೇರಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಿದ್ಧಪಡಿಸಿದ 2019-20 ಆರ್ಥಿಕ ವರ್ಷದ 6,092.02 ಕೋಟಿ ರೂ.ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಶುಕ್ರವಾರ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸತ್ ಸದಸ್ಯ ಪ್ರತಾಪಸಿಂಹ ಬಿಡುಗಡೆ ಮಾಡಿದರು.

ಸಾಲ ಯೋಜನೆಯ ಪ್ರತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರತಾಪ ಸಿಂಹ, ನಬಾರ್ಡಿನಿಂದ ಸಿದ್ಧ್ದಪಡಿಸಿರುವ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯು ಒಂದು ಉತ್ಕೃಷ್ಠ ಸಾಧನವಾಗಿದ್ದು, ಅದರಲ್ಲಿ ವಿವಿಧ ವಲಯಗಳಿಗೆ ಗುರುತಿಸಿ ರುವ ಸಾಲ ವಿತರಣೆಯ ಪ್ರಮಾಣವನ್ನು ಸಂಪೂರ್ಣವಾಗಿ ಜಿಲ್ಲೆಯ ರೈತರಿಗೆ ಹಾಗೂ ಇತರ ಫಲಾನುಭವಿಗಳಿಗೆ ವಿತರಿಸಿದರೆ ಜಿಲ್ಲೆಯು ಸರ್ವತೋಮುಖ ಅಭಿವೃದ್ಧಿ ಹೊಂದು ವುದರಲ್ಲಿ ಯಾವುದೇ ಸಂಶಯವಿಲ್ಲ. ಕೃಷಿಗೆ ಹಾಗೂ ಇತರ ಆದ್ಯತಾವಲಯಗಳಿಗೆ ಒತ್ತು ಕೊಟ್ಟು ಸಿದ್ಧಪಡಿಸಲಾದ ನಬಾರ್ಡಿನ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.

ಜಿಲ್ಲೆಯು ಇತ್ತೀಚಿನ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ ತತ್ತರಿಸಿದ್ದು, ಜಿಲ್ಲೆಯ ಜನರು ವಿಶೇಷವಾಗಿ ರೈತರು ಅತೀವ ಸಂಕಷ್ಟದಲ್ಲಿದ್ದು, ಅವರಿಗೆ ಸಕಾಲ ದಲ್ಲಿ ಆರ್ಥಿಕ ನೆರವು ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾಗಿ ಜಿಲ್ಲೆಯನ್ನು ಅತಿವೃಷ್ಠಿ ಪೀಡಿತ ಪ್ರದೇಶವೆಂದು ಘೋಷಣೆಯಾದ ನಂತರ ರೈತರಿಗೆ ಹಿಂದೆ ವಿತರಿಸಿದ ಬೆಳೆ ಸಾಲದ ಮರು ವರ್ಗೀಕರಣ, ಅವಧಿ ಸಾಲದ ಮರು ಪಾವತಿಯ ಅವಧಿಯ ಮುಂದೂಡಿಕೆ ಹಾಗೂ ಇನ್ನಿತರ ಪರಿಹಾರ ಕ್ರಮವನ್ನು ಆದ್ಯತೆಯ ಮೇಲೆ ಜರುಗಿಸಬೇಕು ಎಂದು ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳಿಗೆ ಸೂಚಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಬಾರ್ಡಿನ ಜಿಲ್ಲಾ ಅಭಿವೃದ್ಧಿಯ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಅವರು ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಯು ಮುಂದಿನ ಆರ್ಥಿಕ ವರ್ಷದ ಸಾಲ ವಿತರಣೆಯ ಗುರಿ ನಿಗದಿಪಡಿಸಲು ಒಂದು ಕೈಪಿಡಿಯಾಗಿದೆ ಎಂದರು.

ಈ ಸಾಲ ಯೋಜನೆ ಆಧಾರದ ಮೇಲೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನಿಂದ ವಾರ್ಷಿಕ ಸಾಲ ವಿತರಣೆಯ ಗುರಿ ನೀಡ ಲಾಗುತ್ತದೆ. ಈ ಸಾಲ ಯೋಜನೆಯು ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ, ಹವಾ ಮಾನ, ರೈತ ಕುಟುಂಬಗಳ ಸಂಖ್ಯೆ, ಬೆಳೆಯುತ್ತಿರುವ ವಿವಿಧ ರೀತಿಯ ಬೆಳೆಗಳು, ಜಲಸಂಪನ್ಮೂಲ ವ್ಯವಸ್ಥೆ, ಯಾಂತ್ರೀಕರಣ, ಭೂ ಅಭಿವೃದ್ಧಿ, ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುತ್ತಿರುವ ಸರ್ಕಾರಿ ಯೋಜನೆ ಗಳು, ಕಿರು ಉದ್ಯಮ ಮತ್ತು ಮಧ್ಯಮ ಉದ್ಯಮಗಳಿಗೆ ಇರುವ ಅವಕಾಶಗಳು, ಶಿಕ್ಷಣ, ಗೃಹ, ರಫ್ತು ಹಾಗೂ ನವೀಕರಣ ಇಂಧನ ಹಾಗೂ ಇತರೇ ಆದ್ಯತಾ ವಲಯ ಗಳಿಗೆ ಇರುವ ಅವಕಾಶಗಳನ್ನು ಗುರುತಿಸಿ ಸಿದ್ಧಪಡಿಸಲಾಗಿದೆ. ಹಾಗೂ ಇದು ಒಂದು ಪರಿಪಕ್ವವಾದ ಸಾಲ ಯೋಜನೆ ಯಾಗಿದ್ದು, ಜಿಲ್ಲೆಯ ಎಲ್ಲಾ ಬ್ಯಾಂಕು ಶಾಖೆ ಗಳು ತಮಗೆ ನೀಡಲಾಗುವ ವಾರ್ಷಿಕ ಗುರಿ ಸ್ವೀಕರಿಸಿ, ಅದರ ಗುರಿಯನ್ನು ಸಂಪೂರ್ಣವಾಗಿ ತಲುಪಿಸಲು ಸಹಕರಿ ಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸಂಭವಿಸಿದ ಇತ್ತೀಚಿನ ದುರಂತ ಜನರ ಜೀವನವನ್ನು ತಲ್ಲಣಗೊಳಿ ಸಿದ್ದು, ಜಿಲ್ಲೆಯ ಜನತೆ ವಿಶೇಷವಾಗಿ ರೈತ ಸಮುದಾಯ ಈ ಆಘಾತದಿಂದ ಚೇತರಿಸಿ ಕೊಳ್ಳಲು ವರ್ಷಗಟ್ಟಲೇ ಬೇಕಾಗಿದೆ. ಈ ಕಷ್ಟಕರ ಸಂದರ್ಭದಲ್ಲಿ ಅವರಿಗೆ ಸಹಾಯ ಹಸ್ತನೀಡಿ, ಸಂತ್ರಸ್ತ ಜನತೆಯು ತಮ್ಮ ಬದುಕನ್ನು ಮತ್ತೊಮ್ಮೆ ಕಟ್ಟಿಕೊಳ್ಳುವಂತಾ ಗಲು ಜಿಲ್ಲೆಯ ಪ್ರತಿಯೊಂದು ಬ್ಯಾಂಕುಗಳು ಶ್ರಮಿಸಬೇಕು ಮತ್ತು ಆ ನಿಟ್ಟಿನಲ್ಲಿ ಅವಿರತವಾಗಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಗುಪ್ತಾಜಿ ಮಾತನಾಡಿ, ಜಿಲ್ಲೆಯಲ್ಲಿ ನಬಾರ್ಡ್ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಯಿಂದ ನಾನು ಬಹಳಷ್ಟು ಪ್ರಭಾವಿತನಾಗಿದ್ದೇನೆ. ಹಾಗೂ ನಬಾರ್ಡ್ ಜಿಲ್ಲಾ ಸಹಾಯಕ ಮಹಾ ಪ್ರಬಂಧಕರ ಸಹಯೋಗದಲ್ಲಿ ಜಿಲ್ಲೆಯ ಇತ್ತೀಚಿನ ದುರಂತದ ಸಂದರ್ಭದಲ್ಲಿ ಮತ್ತು ತದ ನಂತರ ಜಿಲ್ಲೆಯ ಜನತೆಗೆ ಒದಗಿಸ ಬೇಕಾಗಿರುವ ಆರ್ಥಿಕ ಪರಿಹಾರ ಪ್ರಕ್ರಿಯೆ ಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ ಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ರೈತರ ಅಭಿವೃದ್ಧಿಗಾಗಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕು ಮತ್ತು ನಬಾರ್ಡ್ ಜೊತೆಯಾಗಿ ಹಲವು ಕಾರ್ಯಕ್ರಮಗಳೊಂ ದಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ನಬಾರ್ಡಿನಿಂದ ಸಿದ್ಧಪಡಿಸಲಾದ ಸಾಲ ಯೋಜನೆಯನ್ನು ಹೆಚ್ಚು ಕಮ್ಮಿ ಯಥಾವತ್ತಾಗಿ ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಪ್ರತಿನಿಧಿಗಳು ಹಾಗೂ ಇಲಾಖಾ ಮುಖ್ಯಸ್ಥರು ಭಾಗವಹಿಸಿದ್ದರು.

Translate »