ನೋಟ್ ಬ್ಯಾನ್‍ಗೆ 2 ವರ್ಷ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಮೈಸೂರು

ನೋಟ್ ಬ್ಯಾನ್‍ಗೆ 2 ವರ್ಷ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

November 10, 2018

ಬೆಂಗಳೂರು: ನೋಟ್ ಬ್ಯಾನ್ ಮಾಡಿ ಎರಡು ವರ್ಷ ಪೂರ್ಣ ಗೊಂಡರೂ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ನೋಟ್ ಬ್ಯಾನ್‍ನಿಂದಾಗಿ ನೂರಾರು ಜನ ಸಾವ ನ್ನಪ್ಪಿದ್ದಾರೆ. ಸಹಸ್ರಾರು ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ವಿವಾಹಗಳು ಮುರಿದು ಬಿದ್ದಿವೆ, ರೋಗಿಗಳು ಸಾವನ್ನಪ್ಪಿ ದ್ದಾರೆ. ಹಣ ಕಟ್ಟಲಾಗದೆ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಬಿದ್ದಿದ್ದಾರೆ. ವ್ಯಾಪಾರ ನಿಂತು ಹೋಗಿದೆ, ಹಸಿವಿನಿಂದ ಜನ ಕಂಗೆಟ್ಟಿದ್ದಾರೆ. ಅಲ್ಲದೆ ಹಲವರು ಉದ್ಯೋಗವನ್ನೇ ಕಳೆದುಕೊಳ್ಳುವಂತಾಯ್ತು. ರೈತರ ಬದುಕು ಛಿದ್ರವಾಯ್ತು, ಕಣ್ಣೀರು ಸುರಿಸುವಂತಾಯ್ತು. ಇದು ನಿಮ್ಮ ನೋಟ್ ಬ್ಯಾನ್‍ನಿಂದಾದ ಪರಿಣಾಮ ಎಂದು ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Translate »