ಬೆಂಗಳೂರು: 2 ಸಾವಿರ ಕೋಟಿ ರೂ. ಮೌಲ್ಯದ ಬೃಹತ್  ಜಿಎಸ್‍ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ
ಮೈಸೂರು

ಬೆಂಗಳೂರು: 2 ಸಾವಿರ ಕೋಟಿ ರೂ. ಮೌಲ್ಯದ ಬೃಹತ್  ಜಿಎಸ್‍ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ

September 27, 2018

ಬೆಂಗಳೂರು: ದೇಶದಲ್ಲೇ ಬೃಹತ್ ಜಿಎಸ್‍ಟಿ ಹಗರಣವೊಂದು ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ 2000 ಕೋಟಿ ರೂ. ಮೌಲ್ಯದ ಹಗರಣವನ್ನು ಬೆಂಗಳೂರಿನ ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದು ವಂಚಕ ವಿಕ್ರಮ್ ದುಗಾಲ್ ಎನ್ನುವವನನ್ನು ಬಂಧಿಸಿದ್ದಾರೆ. ದುಗಾಲ್ ನಕಲಿ ಬಿಲ್‍ಗಳನ್ನು ಸೃಷ್ಟಿಸುವ ಮೂಲಕ ಸುಮಾರು 2 ಸಾವಿರ ಕೋಟಿ ಮೊತ್ತದ ಸರಕು ಸೇವಾ ತೆರಿಗೆಗಳನ್ನು ವಂಚಿಸಿದ್ದನೆನ್ನ ಲಾಗಿದೆ. ಬೆಂಗಳೂರಿನ ಟಿ.ದಾಸರಹಳ್ಳಿ, ಚಿಕ್ಕ ಬಾಣಾವಾರ ಸೇರಿ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿರುವ ವಾಣಿಜ್ಯ ತೆರಿಗೆ ಅಧಿಕಾರಿಗಳು ಹಲವು ದಾಖಲೆ, ಕಡತ ಹಾಗೂ ಲ್ಯಾಪ್ ಟಾಪ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಸಮಯದಲ್ಲಿ ಸುಮಾರು 203 ಕೋಟಿ ರು. ಮೊತ್ತದ ತೆರಿಗೆ ವಂಚನೆ ಮಾಡಿರುವ ನಕಲಿ ಬಿಲ್ ಸಹ ಪತ್ತೆಯಾಗಿದೆ.

ಬಂಧಿತ ಆರೋಪಿಯಾದ ದುಗಾಲ್ ಎರಡು ಸಂಸ್ಥೆಗಳನ್ನು ನಡೆಸುತ್ತಿದ್ದು ಈತನ ಕಛೇರಿ ಹಾಗೂ ಮನೆಯಲ್ಲಿ ಒಟ್ಟು 14 ಸಂಸ್ಥೆಗಳಿಗೆ ಸೇರಿದ ನಕಲಿ ಬಿಲ್‍ಗಳು ಪತ್ತೆಯಾ ಗಿದೆ. ಎಂದರೆ ದುಗಾಲ್ ಬೇರೆಯವರ ಹೆಸರಲ್ಲಿ ಬರೋಬ್ಬರಿ 12 ಸಂಸ್ಸ್ಥೆಗಳನ್ನು ನಡೆಸು ತ್ತಿದ್ದರೆನ್ನುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ದೇಶದಲ್ಲಿ ಕಳೆದ ವರ್ಷದಿಂದ ಜಾರಿಗೆ ಬಂದಿರುವ ನೂತನ ಸರಕು ಸೇವಾ ತೆರಿಗೆ ಪದ್ಧತಿಯಿಂದ ದೇಶದ ಯಾವುದೇ ಮೂಲೆಯಲ್ಲಿದ್ದು ಒಮ್ಮೆ ತೆರಿಗೆ ಫಾವತಿಸಿದರೆ ಆ ವಸ್ತುಗಳನ್ನು ದೇಶದ ಇನ್ನಾವುದೇ ಮೂಲೆಗೆ ಸಾಗಿಸಲು ಅವಕಾಶವಿದೆ. ಆದರೆ ವ್ಯಾಪಾರಸ್ಥರು, ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಇಂತಹಾ ತೆರಿಗೆ ಪದ್ದತಿಯನ್ನು ದುರುಪಯೋಗಪಡಿಸಿ ಕೊಳ್ಳುತ್ತಿರುವುದು ಇದೀಗ ಬೆಳಕಿಗೆ ಬಂದಿದ್ದು ದೇಶದಲ್ಲಿ ಇದು ಭಾರೀ ದೊಡ್ಡ ಜಿಎಸ್‍ಟಿ ವಂಚನೆ ಪ್ರಕರಣ ಆಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Translate »