ಮೈಸೂರಲ್ಲಿ 3 ದಿನಗಳ ಮಹಿಳಾ ಉದ್ಯಮ ಉತ್ಪನ್ನಗಳ ಪ್ರದರ್ಶನ ಆರಂಭ
ಮೈಸೂರು

ಮೈಸೂರಲ್ಲಿ 3 ದಿನಗಳ ಮಹಿಳಾ ಉದ್ಯಮ ಉತ್ಪನ್ನಗಳ ಪ್ರದರ್ಶನ ಆರಂಭ

August 2, 2019

ಮೈಸೂರು, ಆ.1(ಆರ್‍ಕೆ)- ಮಹಿಳಾ ಉದ್ಯಮಿಗಳು ಕೈಯಿಂದ ತಯಾರಿಸಿದ ಉತ್ಪನ್ನಗಳ 3 ದಿನಗಳ ಪ್ರದರ್ಶನ ಇಂದಿನಿಂದ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಎದುರಿನ ಮೈಸೂರು ಗಂಗುರಾಸ್ ಹೋಟೆ ಲಿನಲ್ಲಿ ಆರಂಭವಾಯಿತು. ವುಮೆನ್ ಇನ್ ಸ್ಮಾಲ್ ಎಂಟರ್‍ಪ್ರೈಸ್(WISE) ಮಹಿಳಾ ಘಟಕ ಹಾಗೂ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(MCCI) ಸಂಯುಕ್ತಾಶ್ರಯದಲ್ಲಿ ಏರ್ಪಡಿ ಸಿರುವ ವಸ್ತುಪ್ರದರ್ಶನ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಎಫ್‍ಕೆಸಿಸಿಐ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಉದ್ಘಾಟಿಸಿದರು.

ನಂತರ ಮಹಿಳಾ ಉದ್ಯಮಿಗಳನ್ನುದ್ದೇಶಿಸಿ ಮಾತ ನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಉದ್ಯಮಕ್ಕೆ ಪೂರಕವಾಗಿರುವ ಹಲವು ಸಹಾಯ ಧನ ಯೋಜನೆಗಳನ್ನು ಬಳಸಿಕೊಂಡು ಯುವಕ ಯುವತಿಯರು ಹೊಸ ಉದ್ದಿಮೆ ಆರಂಭಿಸಿ ಸ್ವಂತ ಉದ್ಯೋಗ ಕಲ್ಪಿಸಿಕೊಳ್ಳುವಂತೆ ಕರೆ ನೀಡಿದರು.

ಉದ್ಯಮಿಗಳಾಗಬಯಸುವವರಿಗಾಗಿ ಇರುವ ಯೋಜನೆಗಳಿಗೆ ಸರ್ಕಾರ ಹಾಗೂ ಬ್ಯಾಂಕ್‍ಗಳು ನೆರ ವಾಗಬೇಕು. ಆರ್ಥಿಕ ಸಹಾಯ ಧನ, ಸಬ್ಸಿಡಿ ನೀಡಲು ಮುಂದಾದರೆ ಮಾತ್ರ ಹೊಸ ಉದ್ದಿಮೆಗಳು ಅಸ್ತಿತ್ವಕ್ಕೆ ಬರುತ್ತವೆ ಎಂದ ಅವರು, ಉದ್ಯಮಿಗಳ ಮೇಲಿರುವ ಅಧಿಕಾರಿಗಳ ಮನೋಭಾವ ಬದಲಾಗದಿದ್ದರೆ ಯಾವುದೇ ಉದ್ಯಮ ಅಥವಾ ಕೈಗಾರಿಕೆ ಯಶಸ್ವಿಯಾಗಿ ನಡೆ ಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಧೈರ್ಯ, ಛಲ, ಉದ್ದೇಶವೇ ನಿಮ್ಮ ಬಂಡವಾಳ, ವಿಶ್ವವೇ ಮಾರುಕಟ್ಟೆಯಾಗಿರುವುದರಿಂದ ನೀವು ಕುಳಿತಲ್ಲೇ ಮೊಬೈಲ್‍ನಿಂದ ವ್ಯವಹಾರ-ವ್ಯಾಪಾರ ಮಾಡುವ ಅವಕಾಶವಿರುವುದರಿಂದ. ಹೆದರದೆ ಧೈರ್ಯ ದಿಂದ ಮುಂದೆ ಸಾಗಿದರೆ ನಿಮ್ಮ ಉದ್ದಿಮೆಯಲ್ಲಿ ಯಶಸ್ವಿಯಾಗಬಹುದು ಎಂದು ಸುಧಾಕರ ಎಸ್.ಶೆಟ್ಟಿ, ಯುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆ ನೀಡಿದರು.

ಎನ್‍ಆರ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಅಧ್ಯಕ್ಷ ಆರ್. ಗುರು, ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷ ಆರ್.ರಘು, ಎಂಸಿಸಿಐ ಅಧ್ಯಕ್ಷ ಎ.ಎಸ್ ಸತೀಶ್, ಕಾರ್ಯದರ್ಶಿ ಶ್ರೀ ಶೈಲ ರಾಮಣ್ಣನವರ್, ವೈಸ್ ಅಧ್ಯಕ್ಷೆ ರುಕ್ಮಿಣಿ ಚಂದ್ರನ್, ಉಪಾಧ್ಯಕ್ಷರಾದ ವಸಂತಕುಮಾರ್, ಗೀತಾಶ್ರೀ, ಕಾರ್ಯದರ್ಶಿ ಕಲ್ಪನಾ ಸುರೇಂದ್ರ, ಜಂಟಿ ಕಾರ್ಯದರ್ಶಿ ಪದ್ಮಿನಿ ಶಿವಣ್ಣ, ಖಜಾಂಚಿ ಮಾಲಿನಿ ಶ್ರೀನಿವಾಸನ್, ಕೈಗಾರಿಕೋದ್ಯಮಿಗಳಾದ ವೆಂಕಟೇಶ್ ಚಂದನ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದರು. ವಸ್ತುಪ್ರದರ್ಶನವು ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ತೆರೆದಿರಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಹಳೇ ನ್ಯೂಸ್ ಪೇಪರ್ ನಿಂದ ತಯಾರಿಸಿದ ಬಣ್ಣ ಬಣ್ಣದ ಪೆನ್ಸಿಲ್‍ಗಳು, ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಳಸುವ ಆಹಾರ ಪದಾರ್ಥ, ಆಭರಣಗಳು, ಮನೆಯ ಆವರಣದಲ್ಲಿ ಉದ್ಯಾನ, ರೆಡಿಮೇಡ್ ಆಹಾರ, ಬಟ್ಟೆ ಬ್ಯಾಗ್ ಸೇರಿದಂತೆ ಮಹಿಳಾ ಉದ್ಯಮಿಗಳು ತಯಾರಿಸಿದ ಹ್ಯಾಂಡ್ ಮೇಡ್ ಗೃಹೋಪಯೋಗಿ ಉತ್ಪನ್ನಗಳನ್ನು ಪ್ರದರ್ಶನದಲ್ಲಿರಿಸಲಾಗಿದೆ. ಸೀರೆ, ಎಲ್ಲಾ ಬಗೆಯ ಉಡುಪುಗಳು, ಅಲಂಕಾರಿಕ ವಸ್ತುಗಳೂ ಪ್ರದರ್ಶನದಲ್ಲಿರುವುದರಿಂದ ಯುವ ಉದ್ಯಮಿಗಳಿಗೆ ಅದು ಬಲು ಉಪಯೋಗವಾಗಲಿದೆ.

Translate »