2755 ಅರ್ಜಿ ವಿಲೇವಾರಿ, ತಂತ್ರಾಂಶದ ಪ್ರಯೋಜನ ಪಡೆದ ಕುವೈತ್ ಮಹಿಳೆ
ಹಾಸನ, ಡಿ.31- ಹಾಸನ ಜಿಲ್ಲಾ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗಾಗಿ ‘ಸ್ಪಂದನ’ ತಂತ್ರಾಂಶ ವನ್ನು ಜಿಲ್ಲೆಯಲ್ಲಿ 2018ರ ಜ.1ರಿಂದ ರೂಪಿಸಿದ್ದು, ಒಂದು ವರ್ಷ ಅವಧಿಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ಸಾರ್ವಜನಿಕರಿಂದ 3065 ಅರ್ಜಿಗಳು ಸ್ವೀಕೃತವಾಗಿರುತ್ತದೆ. ಸ್ವೀಕೃತವಾದ ಅರ್ಜಿಗಳಲ್ಲಿ 2755 ಅರ್ಜಿಗಳನ್ನು ವಿಲೇವಾರಿ ಮಾಡ ಲಾಗಿದೆ. ವರ್ಷಾಂತ್ಯಕ್ಕೆ 310 ಅರ್ಜಿಗಳು ಬಾಕಿ ಇದ್ದು, ಇವುಗಳನ್ನು ನಿಗದಿತ ಕಾಲಾವಧಿಯೊಳಗೆ ವಿಲೇವಾರಿಗೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ತಂತ್ರಾಂಶವನ್ನು ರೂಪಿಸಿ ಒಂದು ವರ್ಷ ಅವಧಿ ಯಶಸ್ವಿಯಾಗಿ ಪೂರೈಸಲಾಗಿದೆ. ಈ ತಂತ್ರಾಂಶವನ್ನು ಬಳಸಿ ಜಿಲ್ಲೆಗೆ ಸಂಬಂಧಿಸಿದಂತೆ ದೇಶ ವಿದೇಶದ ಯಾವುದೇ ಮೂಲೆಯಿಂದಾದರೂ ಅರ್ಜಿ ಸಲ್ಲಿಸಬ ಹುದು ಹಾಗೂ ತಾವು ನೀಡಿದ ಅರ್ಜಿ ವಿಲೇವಾರಿ ಯಾಗಿದೆಯೇ? ಅಥವಾ ತಾವು ನೀಡಿದ ಸಮಸ್ಯೆಗೆ ಯಾವ ರೂಪದಲ್ಲಿ ಪರಿ ಹಾರ ದೊರತಿದೆ ಎಂದು ತಿಳಿಯಬಹುದಾಗಿದೆ.
ಈ ಬಗ್ಗೆ ಕುವೈತ್‍ನಿಂ ದಲೂ ಸಹ ಒಬ್ಬ ಮಹಿಳೆ ಹಾಸನದ ಭೂ ಸಮಸ್ಯೆ ಬಗ್ಗೆ ಕರೆ ಮಾಡಿ ಸ್ಪಂದನ ತಂತ್ರಾಂಶದ ಉಪಯೋಗ ಪಡೆದಿರುತ್ತಾರೆ. ಸ್ಪಂದನ ತಂತ್ರಾಂಶದಲ್ಲಿ ದೂರು ದಾಖಲಾದ, ಪರಿಶೀಲನೆ ಮತ್ತು ಇತ್ಯರ್ಥ ವಾಗುವ ಹಂತದ ಮಾಹಿತಿಯು ದೂರುದಾರರ ಮೊಬೈಲ್ ನಂಬರ್‍ಗೆ ಸಂದೇಶ ರವಾನೆಯಾಗುತ್ತದೆ. ಈ ತಂತ್ರಾಂಶಕ್ಕೆ ಸಹಕರಿಸಿದ ಸಾರ್ವಜನಿಕ ಹಾಗೂ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಸ್ಪಂದನ ತಂತ್ರಾಂಶವನ್ನು ಸ್ವೀಕೃತ ಮತ್ತು ವಿಲೇವಾರಿಯಾದ ಅರ್ಜಿಗಳಲ್ಲಿ ಹೆಚ್ಚಿನವು ಕಂದಾಯ, ಪೊಲೀಸ್ ಹಾಗೂ ಜಿಲ್ಲಾ ಪಂಚಾಯಿತಿ ಇಲಾಖೆಗಳಿಗೆ ಸೇರಿದ್ದಾಗಿರುತ್ತದೆ.
ಕಂದಾಯ ಇಲಾಖೆ: ಅರಸೀಕೆರೆ 201, ಅರಕಲಗೂಡು 175, ಆಲೂರು 210, ಬೇಲೂರು 180, ಸಕಲೇಶಪುರ 115, ಚನ್ನರಾಯಪಟ್ಟಣ 201, ಹೊಳೆನರಸೀಪುರ 160, ಹಾಸನ 208 ಸೇರಿದಂತೆ ಒಟ್ಟು 1450. ಆರಕ್ಷಕ ಇಲಾಖೆ 505, ಜಿಲ್ಲಾ ಪಂಚಾಯಿತಿ ಇಲಾಖೆ 630, ನಗರಾಭಿವೃದ್ಧಿ ಇಲಾಖೆ 62, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 73, ಶಿಕ್ಷಣ ಇಲಾಖೆ 82, ಆರೋಗ್ಯ ಇಲಾಖೆ 28, ಇತರೆ ಇಲಾಖೆಗಳು 235 ಅರ್ಜಿಗಳು ಸೇರಿದಂತೆ ಒಟ್ಟು 3065.
ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಳೆದ ಜುಲೈ ಮತ್ತು ಆಗಸ್ಟ್ ಮಾಹೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋ ಜಿಸಿದ್ದು, ಸ್ವೀಕೃತವಾದ ಅರ್ಜಿಗಳನ್ನು ಸ್ಪಂದನ ತಂತ್ರಾಂಶ ದಲ್ಲಿ ಅಳವಡಿಸಿ ಸ್ಥಳದಲ್ಲಿ ಅನೇಕ ಅರ್ಜಿಗಳನ್ನು ವಿಲೇ ವಾರಿ ಮಾಡಲಾಗಿದೆ. ಇಲಾಖಾ ಅಧಿಕಾರಿಗಳ ಸಮಕ್ಷಮ ದಲ್ಲಿ ಸಾರ್ವಜನಿಕ ಕುಂದುಕೊರತೆ ಕಾರ್ಯಕ್ರಮವನ್ನು ಆಯೋಜಿಸಿದ್ದರಿಂದ ಹಾಗೂ ಸ್ಪಂದನ ತಂತ್ರಾಂಶದಲ್ಲಿ ಅಳವಡಿಸಿ ವಿಲೇವಾರಿ ಮಾಡಿದ್ದರಿಂದ ಸಾರ್ವಜನಿಕರಿಗೆ ಸಹಕಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.