ಗ್ರಾಮೀಣರ ಆರ್ಥಿಕ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ
ಹಾಸನ

ಗ್ರಾಮೀಣರ ಆರ್ಥಿಕ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ

January 1, 2019

ಅರಸೀಕೆರೆ: ಗ್ರಾಮೀಣ ಜನರ ಅರ್ಥಿಕ ಅಭಿವೃದ್ಧಿಗೆ ಬೆನ್ನುಲುಬಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದ್ದು, ಅದರ ಯೋಜನೆ ಗಳನ್ನು ಸದುಪಯೋಗ ಮಾಡಿಕೊಂಡು ಜೀವನವನ್ನು ಹಸನಾಗಿ ಮಾಡಿಕೊಳ್ಳಬೇಕು ಎಂದು ಯಳನಾಡು ಶ್ರೀ ಜ್ಞಾನಪ್ರಭು ಸಿದ್ದ ರಾಮ ದೇಶಿಕೇಂದ್ರ ಸ್ವಾಮಿ ಹೇಳಿದರು.

ಗ್ರಾಮಾಭಿವೃದ್ಧಿಗಾಗಿ ಅರಸೀಕೆರೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಕಸಬಾ ವಲಯದ ವತಿಯಿಂದ ನಡೆಸಲಾದ ತಾಲೂಕಿನ ಕಡೆಯ ಸಾಮೂಹಿಕ ಸತ್ಯನಾರಾಯಣ ಪೂಜೆಯ ನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವ ಚನ ನೀಡಿದ ಅವರು, ಗ್ರಾಮಗಳ ಅಭಿ ವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ ಎಂಬು ದನ್ನು ಮನಗಂಡ ಧರ್ಮಸ್ಥಳ ಶ್ರೀ ವಿರೇಂದ್ರ ಹೆಗಡೆಯವರು ಬಡಜನರ ಕಳಕಳಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಮುಖ್ಯ ವೇದಿಕೆಯಾಗಿ ಮಾಡಿಕೊಟ್ಟು ಮಹತ್ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರ ಸದುಪಯೋಗವನ್ನು ತಾವೆಲ್ಲಾ ಪಡೆದುಕೊಳ್ಳಬೇಕು ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತ ನಾಡಿ, ಸಾಮಾನ್ಯ ಜನತೆ ಸೇರಿದಂತೆ ಈಗಲೂ ರೈತಾಪಿ ಜನರು ಬ್ಯಾಂಕ್‍ನಿಂದ ಕೇವಲ ಹತ್ತು ಇಪ್ಪತ್ತು ಸಾವಿರ ಸಾಲ ಪಡೆಯು ವುದು ಕಷ್ಟ ಸಾಧ್ಯ. ಇಂತಹ ಪರಿಸ್ಥಿತಿ ಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಲಕ್ಷಗಟ್ಟಲೆ ಸಾಲ ನೀಡಿ ತಾವು ಸ್ವಾವಲಂಬಿಗಳಾಗಿ ಬದುಕಲು ಅವಕಾಶ ನೀಡಿದೆ. ಇದರ ಸದುಪಯೋಗ ದಿಂದ ತಾವು ಆರ್ಥಿಕ, ಶೈಕ್ಷಣಿಕ, ಸಾಮಾ ಜಿಕ ಬೆಳವಣಿಗೆ ಕಾಣಲು ಸಾಧ್ಯ ಎಂದರು.

ಹಾಸನ ಜಿಲ್ಲಾ ಯೋಜನಾಧಿಕಾರಿ ದಯಾಶೀಲಾ ಮಾತನಾಡಿ, ಯೋಜನೆ ಯಿಂದ ಕೇವಲ ಆರ್ಥಿಕ ಸಹಾಯವಷ್ಟೆ ಅಲ್ಲದೆ ಹೊಸ ಹೊಸ ಬೆಳೆಗಳ ಪರಿಚಯ, ಸಸಿ ವಿತರಣೆ ಮತ್ತು ಬೆಳೆಯಲು ಉತ್ತೇಜನ, ಬಾಡಿಗೆ ಆಧಾರಿತ ಕೃಷಿ ಉಪಕರಣಗಳ ಸೇವಾ ಕೇಂದ್ರ, ಕೃಷಿ ಅಧ್ಯಯನ ಪ್ರವಾಸ, ಜ್ಞಾನವಿಕಾಸ ಕಾರ್ಯಕ್ರಮ, ಸುವರ್ಣ ಸುರಕ್ಷಾ, ಮಾಶಾಸನಾ, ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಹೀಗೆ ಎಲ್ಲಾ ಸೌಲಭ್ಯಗಳು ಮಹಿಳೆಯರಿಗಷ್ಟೆ ಅಲ್ಲದೆ ರೈತರನ್ನು ಗಮನದಲ್ಲಿಟ್ಟುಕೊಂಡು ಪುರಷ ರಿಗಾಗಿ “ಪ್ರಗತಿ ಬಂಧು” ಸಂಘಗಳು ಇದ್ದು, ಪ್ರಗತಿ ನಿಧಿ ಯೋಜನೆಯಡಿ ಸಾಲ ಸೌಲಭ್ಯ ವನ್ನು ಕೊಡುತ್ತಾ ಬರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಎಲ್‍ಐಸಿ ವ್ಯವಸ್ಥಾಪಕಿ ಹಾಗೂ ಸಾಹಿತಿ ರಾಜ್ಯಶ್ರೀ ಹಂಪನಾ ಅವರು ಬರೆದಿರುವ “ಧರ್ಮಸ್ಥಳದ ಜೀವನ ಸೆಲೆ ಹೇಮಾವತಿ” ಪುಸ್ತಕವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟ ಗಳ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಸ್ವಾಗ ತಿಸಿದರು. ಕೆಜೆ ಗಣೇಶ್ ವಂದಿಸಿದರು. ಗಾನದುಂಧುಬಿ ತಂಡ ಕುಣಕಟ್ಟೆ ಕುಮಾರ್ ಮತ್ತು ಧೀರೆಂದ್ರ್ರ ತಂಡದಿಂದ ಲಘು ಸಂಗೀತ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಫಾದರ್ ವಿಲಿಯಂ ಪೆರಾರಿ, ಮಾಜಿ ಶಾಸಕ ಎ.ಎಸ್.ಬಸವರಾಜು, ಮನೋಜ್‍ಕುಮಾರ್, ನಾಗರಾಜ್, ಮೇಲ್ವಿ ಚಾರಕರಾದ ಯಶೋಧ, ಗೀತಾ, ಜಯಲಕ್ಷ್ಮಿ, ಮೊಹಮ್ಮದ್, ಆಡಿಟರ್ ಸವಿತ, ಸಾವಿರಾರು ಸದಸ್ಯರು, ಕಾರ್ಯಕರ್ತರು ಮತ್ತಿತರರಿದ್ದರು.

Translate »