ಶಿಕ್ಷಣದಿಂದ ಮಾತ್ರ ಮನುಷ್ಯ ಸಂಸ್ಕಾರವಂತನಾಗಲು ಸಾಧ್ಯ
ಹಾಸನ

ಶಿಕ್ಷಣದಿಂದ ಮಾತ್ರ ಮನುಷ್ಯ ಸಂಸ್ಕಾರವಂತನಾಗಲು ಸಾಧ್ಯ

January 1, 2019

ಬೇಲೂರು, ಡಿ.31- ಮನುಷ್ಯ ಪರಿ ಪೂರ್ಣ ಸಂಸ್ಕಾರವಂತನಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾದ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದರು.

ಪಟ್ಟಣದ ನಿಡಗೋಡು ಸಮೀಪದ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೊತ್ಸವದ ಅಂಗ ವಾಗಿ ಏರ್ಪಡಿಸಿದ್ದ ‘ನರ್ತನ – 2018’ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವನಿಗೆ ಮೂಲಭೂತ ಅವಶ್ಯಕತೆಗಳ ಜೊತೆ ಶಿಕ್ಷಣವೂ ಬಹುಮುಖ್ಯವಾಗಿದೆ. ಶಿಕ್ಷಣದ ಮಹತ್ವವನ್ನು ಅರಿತಿರುವ ಸರ್ಕಾರ ಗಳು ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ವನ್ನು ಜಾರಿಗೆ ತಂದಿದೆ. ಹಲವಾರು ಮಠ ಮಾನ್ಯಗಳು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ವನ್ನು ನೀಡುತ್ತಿವೆ. ಆದರೆ ಇತ್ತೀಚಿನ ದಿನ ದಲ್ಲಿ ಶಿಕ್ಷಣ ಎಂಬುದು ವ್ಯಾಪಾರವಾಗಿದ್ದು ಮಕ್ಕಳು ಪುಸ್ತಕದ ಹುಳುಗಳಾಗಿ ಮಾರ್ಪಾ ಡಾಗುತ್ತಿದ್ದು ಅತಿ ಹೆಚ್ಚು ಅಂಕ ಪಡೆಯು ವುದು ಏಕೈಕ ಉದ್ದೇಶವಾಗಿದೆ. ಗುರುಹಿರಿಯ ರನ್ನು ಗೌರವಿಸುವ ಸಂಸ್ಕøತಿ ಕಡಿಮೆಯಾ ಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳು ಜ್ಞಾನಸಂಪಾದನೆಯ ಜೊತೆಗೆ ಹೊರಪ್ರಪಂಚದ ಆಗುಹೋಗುಗಳ ಬಗ್ಗೆಯೂ ಗಮನವನ್ನು ನೀಡಬೇಕಿದೆ. ಮಕ್ಕಳಲ್ಲಿರುವ ಪ್ರತಿಭೆ ಮತ್ತು ಚಿಂತನೆಯನ್ನು ಹೊರತರ ಬೇಕು. ಮಕ್ಕಳಿಗೆ ಪ್ರೀತಿ ವಿಶ್ವಾಸದ ಜೊತೆಗೆ ದೇಶದ ಋಣವನ್ನು ತೀರಿಸುವ ಬಗ್ಗೆ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾ ಗುವ ಬಗ್ಗೆ ಮನವರಿಕೆ ಮಾಡಿಕೊಡ ಬೇಕು. ಪೋಷಕರು ಮಕ್ಕಳಿಗೆ ಶಿಸ್ತು ಹಾಗೂ ಸಂಯಮವನ್ನು ತಿಳಿಸಿಕೊಡಬೇಕು. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ನಾಯಕತ್ವದ ಗುಣವನ್ನು ತುಂಬಬೇಕು ಎಂದರು.

ಕಳಸಾಪುರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ನಾಗರಾಜು ಮಾತನಾಡಿ, ಆತ್ಮವಿಶ್ವಾಸ, ಸಾಧಿಸುವ ಛಲ ಮತ್ತು ತಾನು ಮಾಡುವ ಕೆಲಸದ ಮೇಲೆ ನಂಬಿಕೆ ಇದ್ದಾಗ ಮಾತ್ರ ಎತ್ತರವಾದ ಗುರಿ ಯನ್ನು ಸಾಧಿಸಲು ಸಾದ್ಯ. ಸಮಾಜದಲ್ಲಿನ ಸಮಸ್ಯೆ ಯನ್ನು ನೋಡುವ ದೃಷ್ಠಿಕೋನವನ್ನು ಮಕ್ಕಳಿಗೆ ಶಿಕ್ಷಣ ಕಲಿಸಿಕೊಡುತ್ತದೆ ಎಂದರು.

ಯುನೈಟೆಡ್ ಅಕಾಡೆಮಿ ಆಂಗ್ಲಶಾಲೆಯ ಕಾರ್ಯದರ್ಶಿ ಕೆ.ಎಲ್ ಸುರೇಶ್ ಮಾತ ನಾಡಿ, ನಮ್ಮ ಶಾಲೆಯು ಮಕ್ಕಳಿಗೆ ಪಠ್ಯ ಪುಸ್ತಕ ಶಿಕ್ಷಣ ಜೊತೆಗೆ ಸಾಂಸ್ಕøತಿಕ ಆಟೋಟ ವಿಜ್ಞಾನ ಜೊತೆಗೆ ತಂತ್ರಜ್ಞಾನದ ಬಗ್ಗೆಯೂ ವಿದ್ಯಾರ್ಥಿಗಳ ಆಸಕ್ತಿಗೆ ಅನು ಗುಣವಾಗಿ ಮಾರ್ಗದಶ್ನವನ್ನು ನೀಡಲಾ ಗುತ್ತಿದೆ. ಪ್ರತಿವರ್ಷ ಉತ್ತಮ ಫಲಿತಾಂಶ ವನ್ನು ನೀಡುವ ಮೂಲಕ ನಮ್ಮ ಶಿಕ್ಷಣ ಸಂಸ್ಥೆ ಕೀರ್ತಿಯನ್ನು ತರುತ್ತಿದೆ. ಪೋಷ ಕರು ತಮ್ಮ ಮನೆಯಲ್ಲಿ ಮಕ್ಕಳಿಗೆ ಶಾಲೆ ಮತ್ತು ಶಿಕ್ಷಕರ ಬಗ್ಗೆ ಉತ್ತಮವಾದ ಅಭಿ ಪ್ರಾಯವನ್ನು ಮೂಡಿ9ಸುವ ಕೆಲಸ ವಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯ ದರ್ಶಿ ಲೋಕೇಶ್, ಸದಸ್ಯರಾದ ಎ.ಎಸ್ ಉಮೇಶ್, ದಿನೇಶ್ ಮುಖ್ಯೋಪಾಧ್ಯಾಯ ರೋಹಿತೇಶ್ ಪಾಟೀಲ್, ದೀಪಾ ಎಂ.ಎನ್, ಇತರರು ಇದ್ದರು.

Translate »