ಕಾಫಿ ಬೆಳೆಗಾರರ ನಿಯೋಗದಿಂದ ಕೇಂದ್ರ ಸಚಿವ ಸುರೇಶ್‍ಪ್ರಭು ಭೇಟಿ   ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ
ಹಾಸನ

ಕಾಫಿ ಬೆಳೆಗಾರರ ನಿಯೋಗದಿಂದ ಕೇಂದ್ರ ಸಚಿವ ಸುರೇಶ್‍ಪ್ರಭು ಭೇಟಿ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ

January 1, 2019

ಹಾಸನ, ಡಿ.31- ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ವಿಶೇಷ ಕಾಳಜಿವಹಿಸಿ ಬಗೆ ಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೇಂದಕ್ಕೆ ನಿಯೋಗ ಕರೆ ದೊಯ್ದು ಸುದೀರ್ಘ ಚರ್ಚೆ ಮಾಡಲು ಅವಕಾಶ ನೀಡಿದ ಕಾರಣಕರ್ತರಾದ ವರಿಗೆ ಕರ್ನಾಟಕ ರಾಜ್ಯ ಕಾಫಿ ಬೆಳೆ ಗಾರರ ಒಕ್ಕೂಟದ ವತಿಯಿಂದ ಅಭಿ ನಂದನೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಬಿ.ಎಸ್.ಜಯರಾಂ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಡಿ.26ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಮತ್ತು ಜಿಲ್ಲೆಯ ಸಂಸದ ಹೆಚ್.ಡಿ.ದೇವೇ ಗೌಡ, ಸಚಿವ ಹೆಚ್.ಡಿ.ರೇವಣ್ಣ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ನೇತೃತ್ವ ದಲ್ಲಿ ಕಾಫಿ ಬೆಳೆಗಾರರೆಲ್ಲರೂ ಒಟ್ಟಿಗೆ ಸೇರಿ ನಿಯೋಗ ತೆರಳಿ ಕೇಂದ್ರ ಸಚಿವರಾದ ಸುರೇಶ್ ಪ್ರಭು, ಕರ್ನಾಟಕ ರಾಜ್ಯ ಸರ ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ರಮಣರೆಡ್ಡಿ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಕಾಫಿ ಬೆಳೆಗಾರರ ಸಮಸ್ಯೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ನಂತರ ಅವರಿಗೆ ಕಾಫಿ ಬೆಳೆಗಾರರ ಸಮಸ್ಯೆ ಗಳ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾ ಗಿದೆ ಎಂದು ಹೇಳಿದರು. ಕಾಫಿ ಬೆಳೆಗಾ ರರ ಜಿಲ್ಲೆಯ 6 ಸಾವಿರ ಕೋಟಿ ರೂ ಸಾಲ ಇದ್ದು, ಈ ಬಗ್ಗೆ ಗಮನ ಸೆಳೆಯಲಾಗಿದೆ.

ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮತ್ತು ಮುಂದಿನ ಎಲ್ಲಾ ಸಾಲವನ್ನು ಶೇಕಡ 3ರ ಬಡ್ಡಿ ದರದಲ್ಲಿ ಮರು ಪಾವತಿ ಸುವ ಬೆಳೆಗಾರರಿಗೆ ಸಾಲವನ್ನು ನೀಡು ವುದು, ವಿದೇಶಿ ಕಾಳುಮೆಣಸು ಆಮ ದನ್ನು ನಿಲ್ಲಿಸುವಂತೆ ಮತ್ತು ಕಾಳಸಂತೆ ಯಲ್ಲಿ ಬರುವ ಮೆಣಸಿಗೆ ಕಡಿವಾಣ ಹಾಕುವುದು ಹಾಗೂ ಕೇಂದ್ರ ಸರಕಾರ ಕೆ.ಜಿ ಮೆಣಸಿನ ನಮ್ಮ ಉತ್ಪಾದನಾ ವೆಚ್ಚದ ಆಧಾರಿತ ರೂ 500 ಎಂದು ನಿರ್ಧರಿಸು ವುದನ್ನು ಸ್ವಾಗತಿಸಲಾಗುವುದು ಎಂದರು. ತೀವ್ರ ಅತಿವೃಷ್ಟಿಯಿಂದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ, ಆಸ್ತಿ ಹಾನಿ ಯಾಗಿದ್ದು, ಸೂಕ್ತ ಪರಿಹಾರ ನೀಡಲು ಕೇಂದ್ರ ಸರಕಾರ ವಿಶೇಷ ಪ್ಯಾಕೇಜು ಘೋಷಣೆ ಮಾಡುವಂತೆ ಆಗ್ರಹಿಸಿದರು. ಕಾಡಾನೆ ಹಾವಳಿಯಿಂದ ಈಗಾಗಲೇ ಕಾಫಿ ಬೆಳೆಗಾರರು ಸಂಪೂರ್ಣ ಸಂಕಷ್ಟ ದಲ್ಲಿದ್ದಾರೆ. ಕೂಡಲೇ ಆನೆ ಕಾರಿಡರ್ ಇಲ್ಲವೇ ಆನೆ ಪಾರ್ಕ್ ರಚಿಸಲು ಕ್ರಮ ಕೈಗೊಳ್ಳಬೇಕು. ಕಾಫಿ ಮತ್ತು ಕಾಳುಮೆಣ ಸಿಗೆ ಬೆಂಬಲ ಬೆಲೆ ಘೋಷಿಸಲು ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಒತ್ತಾಯಿಸಿದರು.

2019 ಜನವರಿ 15 ರಂದು ಚಿಕ್ಕಮಗ ಳೂರಿನ ವಿಜಯಪುರದಲ್ಲಿ ಕಾಫಿ ಸಮ್ಮೇಳನ ಮತ್ತು ಕಾಫಿ ಕೃಷಿ ಮೇಳವನ್ನು ಆಯೋ ಜಿಸಲಾಗಿದ್ದು, ಮುಖ್ಯಮಂತ್ರಿಗಳು ಸೇರಿ ದಂತೆ ಕೇಂದ್ರ ಹಾಗೂ ರಾಜ್ಯದ ಸಚಿವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ತೋ.ಚ.ಅನಂತ ಸುಬ್ಬರಾಯ್, ಕರ್ನಾಟಕ ಕಾಫಿ ಬೆಳೆಗಾ ರರ ಸಂಘದ ಪದಾಧಿಕಾರಿಗಳಾದ ಬಿ.ಎ. ಜಗನ್ನಾಥ್ ಪ್ರಧಾನ ಕಾರ್ಯದರ್ಶಿ ಯು. ಎಂ.ತೀರ್ಥ ಮಲ್ಲೇಶ್, ಇತರರಿದ್ದರು.

Translate »