ಹಾಸನ: ಸಗಟು ವ್ಯಾಪಾರಿಗಳು ಕೇವಲ ವ್ಯಾಪಾರಿ ಮನೋಭಾವದ ಹಿನ್ನೆಲೆ ಯಲ್ಲಿ ವ್ಯವಹಾರ ನಡೆಸದೆ ರೈತರು ಹಾಗೂ ಗ್ರಾಹಕರನ್ನು ಹಿತದೃಷ್ಟಿಯಲ್ಲಿ ಇಟ್ಟುಕೊಂಡು ವ್ಯವಹಾರ ನಡೆಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ಕಿವಿಮಾತು ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಸಗಟು ತರಕಾರಿ ವರ್ತಕರ ಸಂಘ ಹಾಗೂ ಕಟ್ಟಿನಕೆರೆ ಮಾರುಕಟ್ಟೆ ತರಕಾರಿ ವರ್ತಕರ ಸಂಘ ಜಂಟಿಯಾಗಿ ಏರ್ಪಡಿಸಿದ್ದ 4ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ 2019ರ ಕಾಲೆಂಡರ್ ಬಿಡುಗಡೆ ಮಾಡಿ ಮಾತ ನಾಡುತ್ತಿದ್ದ ಅವರು, ರೈತರು ಈ ದೇಶದ ಬೆನ್ನೆಲುಬು, ಅಲ್ಲದೆ ಎಲ್ಲರಿಗೂ ಬದುಕಲು ಅಗತ್ಯವಾದ ಆಹಾರ ಉತ್ಪಾದನೆ ಮಾಡಿ ಸ್ವಾವಲಂಬಿ ಬದುಕನ್ನು ನಡೆಸುತ್ತಿರುವ ಅವನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಉದಯಕುಮಾರ್ ಮಾತನಾಡಿ, ಸಗಟು ವ್ಯಾಪಾರಿಗಳು ಬೆಲೆ ನಿಗದಿ ವಿಷಯದಲ್ಲಿ ರೈತರನ್ನು ಶೋಷಿಸು ವುದು ತರವಲ್ಲ, ವ್ಯಾಪಾರಸ್ಥರು ಹಾಗು ಗ್ರಾಹಕರು ರೈತನ ಎರಡು ಕಣ್ಣುಗಳಿದ್ದಂತೆ ಎಂದರು. ಸಗಟು ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್.ಆನಂದ್ ಮಾತ ನಾಡಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಎಪಿಎಂಸಿ ಅಧ್ಯಕ್ಷ, ಮಂಜೇಗೌಡ, ಮಾಜಿ ಅಧ್ಯಕ್ಷರಾದ ಗೋಪಾಲ್ ಹಾಗೂ ಲಕ್ಷ್ಮಣಗೌಡ ಮಾತ ನಾಡಿದರು. ಪದಾಧಿಕಾರಿಗಳಾದ ದೊಡ್ಡೇಗೌಡ, ಬಿ.ಆರ್.ಶ್ರೀಹರಿ ಮತ್ತು ಹೆಚ್.ಸಿ. ದೇವರಾಜ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಎಸ್ಪಿ ಕೇಕ್ ಕತ್ತರಿಸುವ ಮುಖೇನ ಕಾರ್ಯಕ್ರಮ ಉದ್ಘಾಟನೆ ಮಾಡಿದರು.