ತಮಿಳುನಾಡು ಫೋಟೋಗ್ರಾಫರ್‍ಗೆ ಹನಿಟ್ರ್ಯಾಪ್
ಮೈಸೂರು

ತಮಿಳುನಾಡು ಫೋಟೋಗ್ರಾಫರ್‍ಗೆ ಹನಿಟ್ರ್ಯಾಪ್

January 1, 2019

ಅರಸೀಕೆರೆ,ಡಿ.31-ತಮಿಳುನಾಡು ವ್ಯಕ್ತಿಯೋರ್ವನನ್ನು ಹನಿಟ್ರ್ಯಾಪ್ ಮೂಲಕ ಅಪಹರಿಸಿ, 1.07 ಲಕ್ಷ ಸುಲಿಗೆ ಮಾಡಿದ ಘಟನೆ ತಡವಾಗಿ ವರದಿಯಾಗಿದೆ.

ತಮಿಳುನಾಡಿನ ಹೊಸೂರು ತಾಲೂಕು ನಾವಡಿ ಗ್ರಾಮದ ನವೀನ್ ಕುಮಾರ್ ಹನಿಟ್ರ್ಯಾಪ್‍ಗೆ ಸಿಲುಕಿ ಹಣ ಕಳೆದು ಕೊಂಡವರಾಗಿದ್ದು, ಇವರು ತಮಿಳುನಾಡಿನವರಾದರೂ ಬೆಂಗಳೂರಿನಲ್ಲಿ ಫೋಟೋಗ್ರಾಫರ್ ಕೆಲಸ ಮಾಡುತ್ತಿದ್ದಾರೆ. ಇವರನ್ನು ಯುವತಿಯೋರ್ವಳು ಬೆಂಗಳೂರಿನಿಂದ ಹಾಸನಕ್ಕೆ ಕರೆತಂದು ವಾಪಸ್ ಹೋಗುವಾಗ ಅವಳದೇ ತಂಡದ ಮೂವರು ಈ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ, ಹಣ ಸುಲಿಗೆ ಮಾಡಿದ್ದಾರೆ.

ವಿವರ: ಬೆಂಗಳೂರಿನಲ್ಲಿ ಫೋಟೋಗ್ರಾಫರ್ ಆಗಿದ್ದ ನವೀನ್‍ಕುಮಾರ್‍ಗೆ ಮೊಬೈಲ್ ಸಂಪರ್ಕದ ಮೂಲಕ ಅರ್ಪಿತಾ ಎಂಬ ಯುವತಿ ಪರಿಚಯವಾಗಿದ್ದಾಳೆ. ಈಕೆ ನವೀನ್‍ಕುಮಾರ್‍ನ ಪಲ್ಸರ್ ಬೈಕ್‍ನಲ್ಲಿ(ಕೆಎ05-ಕೆಎನ್ 5035) ಹಾಸನದ ಪುರದಮ್ಮ ದೇವಸ್ಥಾನಕ್ಕೆ ಡಿಸೆಂಬರ್ 3ರಂದು ಕರೆ ತಂದಿದ್ದಾಳೆ. ಅಂದು ರಾತ್ರಿ ವಾಪಸ್ ಬೆಂಗ ಳೂರಿಗೆ ಹೋಗುವಾಗ 8.45ರ ಸುಮಾರಿನಲ್ಲಿ ಅರಸೀ ಕೆರೆಗೆ 5 ಕಿ.ಮೀ. ದೂರವಿದ್ದಾಗ ಸ್ವಿಫ್ಟ್ ಕಾರಿನಲ್ಲಿ ಬಂದ ಆಕೆಯ ಕಡೆಯವರೇ ಆದ ಪವನ್, ಕಿರಣ್ ಮತ್ತು ದೊರೆ ಎಂಬುವರು ಬೈಕ್ ಅನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ನಂತರ ನಮ್ಮ ಹುಡುಗಿಯ ಜೊತೆ ನೀನು ಓಡಾ ಡುತ್ತಿದ್ದೀಯಾ ಎಂದು ಆಕ್ಷೇಪ ವ್ಯಕ್ತಪಡಿಸಿ ಚಾಕುವಿ ನಿಂದ ಇರಿದು ಕೊಲೆ ಮಾಡುವುದಾಗಿ ಹೆದರಿಸಿ ನವೀನ್ ಬಳಿ ಇದ್ದ 7 ಸಾವಿರ ರೂ ನಗದು, ವಾಚ್ ಮತ್ತು ಬೆಳ್ಳಿ ಕೈಚೈನ್ ಅನ್ನು ಕಸಿದಿದ್ದಲ್ಲದೆ, ಅವರ ಕಾರಿನಲ್ಲೇ ಆತನನ್ನು ಅಪಹರಿಸಿದ್ದಾರೆ. ನಂತರ ಯಾವುದೋ ಬೆಟ್ಟದ ಸಮೀಪವಿರುವ ದೇವಸ್ಥಾನದ ಹತ್ತಿರಕ್ಕೆ ಕರೆದುಕೊಂಡು ಹೋಗಿ ಮರುದಿನ ಡಿ.4ರಂದು ಬೆಳಿಗ್ಗೆ ನವೀನ್ ಕುಮಾರ್‍ನ ಮನೆಗೆ ಫೋನ್ ಮಾಡಿಸಿ ಆತನ ಅಣ್ಣ ನಿಂದ ಒಂದು ಲಕ್ಷ ರೂ ಅನ್ನು ಸುಲಿಗೆ ಮಾಡಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿ ಕಳುಹಿಸಿದ್ದಾರೆ. ಈ ಸಂಬಂಧ ನವೀನ್‍ಕುಮಾರ್ ಅವರು ಭಾನುವಾರ ನೀಡಿದ ದೂರನ್ನು ಅರಸೀಕೆರೆ ಗ್ರಾಮಾಂತರ ಪೊಲೀಸರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ನವೀನ್‍ಕುಮಾರ್ ತನ್ನನ್ನು ಕರೆದುಕೊಂಡು ಬಂದದ್ದು ಅರ್ಪಿತಾ ಎಂಬ ಯುವತಿ ಎಂದು ತಿಳಿಸಿದ್ದಾರೆ. ಅಲ್ಲದೆ ಅವರನ್ನು ಅಪಹರಿಸಿ ಹಣ ಸುಲಿಗೆ ಮಾಡಿರುವುದು ಪವನ್, ಕಿರಣ್ ಮತ್ತು ದೊರೆ ಎಂದು ಹೇಳಿದ್ದಾರೆ. ಇದೊಂದು ಹನಿ ಟ್ರ್ಯಾಪ್ ಪ್ರಕರಣವೆಂದು ಕಂಡುಬಂದಿದ್ದು, ನವೀನ್ ಕುಮಾರ್‍ಗೆ ಯುವತಿ ಹೇಳಿಕೊಂಡಿರುವ ಹೆಸರು ಹಾಗೂ ಹಣ ಸುಲಿಗೆ ಮಾಡಿದ ಮೂವರು ಹೇಳಿಕೊಂಡಿರುವ ಹೆಸರುಗಳು ನೈಜವಾದದ್ದೇ? ಅಥವಾ ಬೇರೆ ಹೆಸರು ಗಳನ್ನು ಹೇಳಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ತಮ್ಮನ್ನು ಸಂಪರ್ಕಿಸಿದ ‘ಮೈಸೂರು ಮಿತ್ರ’ ಜೊತೆ ಮಾತನಾಡಿದ ಪೊಲೀಸ್ ಇನ್‍ಸ್ಪೆಕ್ಟರ್ ಸಿದ್ದರಾ ಮೇಶ್ವರ್ ಅವರು, ಇದೇ ತರಹ ಪ್ರಕರಣ ಈ ಹಿಂದೆಯೂ ಕೂಡ ನಡೆದಿದೆ. ನವೀನ್‍ಕುಮಾರ್ ಅವರು ನೀಡಿರುವ ದೂರಿನಲ್ಲಿ ಹೆಸರುಗಳನ್ನು ತಿಳಿಸಿದ್ದಾರೆ. ಆದರೆ ಅವರು ಗಳ ಬಗ್ಗೆ ಹೆಚ್ಚಿನ ವಿವರಗಳೇನು ಇಲ್ಲ. ಇದೇ ರೀತಿ ಕೃತ್ಯ ಎಸಗುತ್ತಿರುವ ಒಂದು ತಂಡ ಕಾರ್ಯನಿರ್ವ ಹಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖೆ ಮುಂದು ವರೆದಿದ್ದು, ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದರು.

Translate »