ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ
ಕೊಡಗು

ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ

January 1, 2019

ಸೋಮವಾರಪೇಟೆ, ಡಿ.31- ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪಟ್ಟಣದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.

ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಎಎಸ್‍ಐ ಪುಟ್ಟಪ್ಪ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಯಲ್ಲಿ ತೆರಳಿದ ವಿದ್ಯಾರ್ಥಿಗಳು ಅಪರಾಧ ತಡೆಯಲು ಸುರಕ್ಷಾ ಸಲಹೆಗಳ ಕರಪತ್ರಗಳನ್ನು ಹಂಚಿದರು.

ಕಳ್ಳರಿಂದ ಬೆಲೆಬಾಳುವ ವಸ್ತುಗಳನ್ನು ಕಾಪಾಡಿಕೊಳ್ಳಲು ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಭದ್ರಪಡಿಸಿಟ್ಟುಕೊಳ್ಳಬೇಕು. ರಾತ್ರಿ ಹೊರಹೋಗುವಾಗ ಮನೆಯೊಳಗಿನ ದೀಪಗಳು ಆರಿಸಬೇಡಿ. ಮನೆ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಪೂರ್ಣವಿಳಾಸ ಮತ್ತು ಭಾವಚಿತ್ರಗಳನ್ನು ಇಟ್ಟುಕೊಳ್ಳಬೇಕು. ಮನೆಯ ಕೆಲಸಗಾರ ರಿಗೆ ಬೆಲೆಬಾಳುವ ವಸ್ತುಗಳ ಮಾಹಿತಿಯನ್ನು ನೀಡಬಾರದು. ಹೆಚ್ಚಿನ ದಿನ ಮನೆಯಿಂದ ಹೊರಹೋಗುವ ಸಂದರ್ಭ ಪಕ್ಕದ ಮನೆಗಳ ನಂಬಿಕಸ್ಥರಿಗೆ ಹೇಳಿ ಹೋಗಬೇಕು. ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇನ್ನು ಅನೇಕ ಮುಂಜಾ ಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಮನೆಗಳ್ಳತನವಾಗುವುದನ್ನು ತಡೆಯಬಹುದು ಎಂದು ಹೇಳಿದರು. ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿ ಪೂರ್ವ ಕಾಲೇಜು, ಸಾಂದೀಪನಿ, ಜ್ಞಾನವಿಕಾಸ ಶಾಲೆಯ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

Translate »