ವೀರಾಜಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಸ್ವಾಮಿ ಮಧುರೈವೀರನ್ ಆಲಯ ಪ್ರತಿಷ್ಠಾಪನೆ
ಕೊಡಗು

ವೀರಾಜಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಸ್ವಾಮಿ ಮಧುರೈವೀರನ್ ಆಲಯ ಪ್ರತಿಷ್ಠಾಪನೆ

January 1, 2019

ವೀರಾಜಪೇಟೆ, ಡಿ.31- ವೀರಾಜಪೇಟೆ ತೆಲುಗರ ಬೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಧುರೈವೀರನ್ ಸ್ವಾಮಿಯ ಆಲಯದ ಸಮರ್ಪಣಾ ಪ್ರತಿಷ್ಠಾಪನಾ ಮಹೋತ್ಸವವು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.

ಡಿ.24ರಂದು ಪ್ರಾರಂಭಗೊಂಡ ವಿನಾಯಗರ್ ಅನುಷ್ಠಾನಂ, ಕೊಡಿ ಏಟ್ರುವಿಳಾ, ಮಹಾಪೂಜಾ ಸೇವೆ, ಡಿ.25 ರಂದು ಪಂದಲ್ ನೆಡುಂ ವಿಳಾ, 26 ರಂದು ಪುಲಿಯಾಟ್ಟಂ ದೈವ ಆರಾಧನೈ ಉರುಮಿ ಮೇಳಂ, 27 ರಂದು ಕುಮ್ಮಿ ಪಾಟ್ಟು ವಿಳಾ, 28 ರಂದು ರಾತ್ರಿ 8 ಗಂಟೆಗೆ ಸಿಡಿಮದ್ದು ಪ್ರದರ್ಶನದ ಬಳಿಕ ಪೂಜಾ ಸೇವೆ, ಡಿ.29 ಸ್ವಾಮಿ ಮಧುರೈವೀರನ್ ಅಯ್ಯಾವುಕ್ಕು ಅಮ್ಮಾವುಕ್ಕೂ ಸೀರೆ ಸಮರ್ಪಣೆ, ಡಿ.30 ರಂದು ಬೆಳಿಗ್ಗೆ ಮಹಾ ಅಭಿಷೇಕಂ ನಡೆದು ಸಂಜೆ ಪಟ್ಟಣದ ಮುಖ್ಯ ಬೀದಿ ಗಳಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಯ ನಂತರ ರಾತ್ರಿ 8.30ಕ್ಕೆ ಮಹಾ ಪೂಜಾ ಸೇವೆ ನೈವೇದ್ಯದೊಂದಿಗೆ ಪ್ರತಿಷ್ಠಾಪನಾ ಉತ್ಸವಕ್ಕೆ ತೆರೆ ಬಿದ್ದಿತು.

Translate »