ಪೊಲೀಸರ ಕಿರುಕುಳ ಆರೋಪ; ಶವಾಗಾರದ ಮುಂದೆ ಪ್ರತಿಭಟನೆ
ಮಡಿಕೇರಿ, ಡಿ.31- ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತೈ ಮಾಡಿ ಕೊಂಡ ಘಟನೆ ಪಟ್ಟಣದ ಮಂಗಳಾ ದೇವಿ ನಗರದಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದ ಜಯ ಕುಮಾರ್(24) ಎಂಬಾತನೇ ಸಾವಿಗೆ ಶರಣಾದ ಯುವಕ. ಯುವಕನ ಸಾವಿಗೆ ಪಿರಿಯಾಪಟ್ಟಣ ಪೊಲೀಸರು ನೀಡಿದ ಕಿರುಕುಳವೇ ಕಾರಣವೆಂದು ಆರೋಪಿಸಿದ ಯುವಕನ ಸಂಬಂಧಿಕರು ಮತ್ತು ದಲಿತ ಸಂಘಟನೆಗಳ ಪ್ರಮುಖರು, ಜಿಲ್ಲಾಸ್ಪತ್ರೆಯ ಶವಾಗಾರದ ಮುಂಭಾಗ ಕೆಲಕಾಲ ಪ್ರತಿ ಭಟನೆ ನಡೆಸಿದರು. ಕಿರುಕುಳ ನೀಡಿದ ಪೊಲೀಸರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸದೆ, ಮೃತದೇಹದ ಮರ ಣೋತ್ತರ ಪರೀಕ್ಷೆ ಮತ್ತು ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದ ಘಟನೆಯೂ ನಡೆಯಿತು.
ಘಟನೆ ವಿವರ: ಡಿ.9ರಂದು ಕುಶಾಲ ನಗರದ ಕೊಪ್ಪ ಸಮೀಪ ವೈದ್ಯ ದಿಲೀಪ್ ಎಂಬುವರ ಕುತ್ತಿಗೆ ಬಿಗಿದು ಹತೈ ಮಾಡ ಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಮಂಗಳಾದೇವಿನಗರ ನಿವಾಸಿ ಆಟೋ ಚಾಲಕ ಕೃಷ್ಣ ಎಂಬಾತನನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದರು. ಡಿ.25ರಂದು ಆರೋಪಿ ಕೃಷ್ಣ ಅವರ ಮಕ್ಕಳಾದ ಜಯಕುಮಾರ ಮತ್ತು ಚಂದ್ರ ಕಾಂತ್ ಅವರನ್ನು ಕೂಡ ಪಿರಿಯಾಪಟ್ಟಣ ಪೊಲೀಸರು ವಿಚಾರಣೆಗಾಗಿ ಕೊಪ್ಪ ಸಮೀಪದ ಹೋಂಸ್ಟೇ ಒಂದಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದ್ದಲ್ಲದೇ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆ ಬಳಿಕ ಇಬ್ಬರನ್ನು ಕೂಡ ಪೊಲೀಸರು ಬಿಟ್ಟು ಕಳುಹಿಸಿದ್ದರು.
ತದನಂತರ 6 ಮಂದಿ ಪೊಲೀಸರ ತಂಡ ಆರೋಪಿ ಕೃಷ್ಣನ ಮನೆಗೆ ಆಗಮಿಸಿ ಮನೆ ಮಂದಿಯ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಂಡು ಬೆದರಿಕೆ ಹಾಕಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಜಯ ಕುಮಾರ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಸೀರೆಯಿಂದ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎಂದು ಮೃತನ ಪೋಷಕರು ಮತ್ತು ದಲಿತ ಸಂಘಟನೆ ಗಳು ಆರೋಪಿಸಿ, ಜಿಲ್ಲಾಸ್ಪತ್ರೆಯ ಶವಾಗಾರದ ಮುಂಭಾಗ ಪ್ರತಿಭಟನೆ ನಡೆಸಿದವು.
ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸ್ ಅಧೀಕ್ಷಕ ಸುಂದರ್‍ರಾಜ್, ಮೃತನ ಸಂಬಂಧಿಕರು ಮತ್ತು ದಲಿತ ಸಂಘಟನೆಗಳ ಪ್ರಮುಖರೊಂದಿಗೆ ಸಮಾ ಲೋಚನೆ ನಡೆಸಿದರು. ಪಿರಿಯಾಪಟ್ಟಣ ಪೊಲೀಸರು ಅಮಾಯಕ ಯುವಕರಿಗೆ ವಿಚಾರಣೆ ಹೆಸರಲ್ಲಿ ದೈಹಿಕ ಕಿರುಕುಳ ನೀಡಿದ್ದಾರೆ. ಮಾತ್ರವಲ್ಲದೇ, ಅವರ ಮನೆಗೂ ಅಕ್ರಮ ಪ್ರವೇಶ ಮಾಡಿ ಬೆದರಿಕೆ ಹಾಕಿ ದ್ದಾರೆ. ಪೊಲೀಸರ ದೌರ್ಜನ್ಯ ಮತ್ತು ಬೆದರಿಕೆಗೆ ಹೆದರಿ ಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮಾಯಕ ಯುವಕರ ಮೇಲೆ ವಿಚಾರಣೆ ನೆಪದಲ್ಲಿ ದೈಹಿಕ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಪಿರಿಯಾಪಟ್ಟಣ ಪೊಲೀಸರು ದೈಹಿಕ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಯುವಕರು ವಿಚಾರಣೆಯಿಂದ ನಿರಪರಾಧಿ ಗಳೆಂದು ತಿಳಿದು ಬಂದಿರುವುದರಿಂದ ಪೊಲೀಸರು ಅವರನ್ನು ಬಿಡುಗಡೆ ಮಾಡಿದ್ದಾರೆ. ಆದರೆ ವಿಚಾರಣೆಗೆ ಹೆದರಿ ಆತ್ಮಹತೈಗೆ ಶರಣಾಗಿರುವುದು ದುರ್ದೈವದ ಸಂಗತಿ ಎಂದು ಸಾಂತ್ವನ ಹೇಳಿದರು. ಪ್ರತಿಭಟನೆಯನ್ನು ಕೈಬಿಟ್ಟು ಮೃತದೇಹದ ಮರಣೋತ್ತರ ಪರೀಕ್ಷೆಗೆ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ದಲಿತ ಸಂಘಟನೆಗಳ ಪ್ರಮುಖರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು. ಈ ಕುರಿತು ಮೇಲಾಧಿಕಾರಿ ಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸುಂದರ್ ರಾಜ್ ಪ್ರತಿಭಟನಾ ಕಾರರಿಗೆ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಟ್ಟು ಮರಣೋತ್ತರ ಪರೀಕ್ಷೆಗೆ ಅನುವು ಮಾಡಿ ಕೊಡಲಾಯಿತು. ಈ ಸಂದರ್ಭ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಷಣ್ಮುಗ, ಗ್ರಾಮಾಂತರ ಠಾಣಾಧಿಕಾರಿ ಚೇತನ್, ದಲಿತ ಸಂಘಟನೆಯ ಮೋಹನ್ ಮೌರ್ಯ, ಹೆಚ್.ಪಿ. ಹರೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.