ಮೈಸೂರು ರೈಲ್ವೆ ಮ್ಯೂಸಿಯಂಗೆ 5 ಕೋಟಿ ರೂ. ಅನುದಾನ
ಮೈಸೂರು

ಮೈಸೂರು ರೈಲ್ವೆ ಮ್ಯೂಸಿಯಂಗೆ 5 ಕೋಟಿ ರೂ. ಅನುದಾನ

February 6, 2020

ಮೈಸೂರು, ಫೆ. 5- ಮೈಸೂರು ರೈಲ್ವೆ ಮ್ಯೂಸಿಯಂ ನವೀಕರಣ ಹಾಗೂ ಅಭಿವೃದ್ಧಿಗೆ ಐದು ಕೋಟಿ ಅನುದಾನ ಬಿಡುಗಡೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಸಚಿವರನ್ನು ಭೇಟಿಯಾಗಿ, ಹಾಲಿ ಕೈಗೆತ್ತಿಕೊಂಡಿರುವ ರೈಲ್ವೆ ಮ್ಯೂಸಿಯಂ ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಅದನ್ನು ಕೂಡಲೇ ಕಲ್ಪಿಸುವಂತೆ ಸೋಮ ವಾರವಷ್ಟೇ ಮನವಿ ಮಾಡಿದ್ದರು. ಕೂಡಲೇ ಐದು ಕೋಟಿ ರೂ. ಬಿಡುಗಡೆಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಸೂಚನೆ ನೀಡಿದ್ದಾರೆ.

ಬುಧವಾರವೂ ಸಚಿವರ ಭೇಟಿ ಮಾಡಿ, ಬೆಳಗಿನ ವೇಳೆ ಮೈಸೂರು-ಮಂಗಳೂರು ನಡುವೆ ರೈಲು ಸೇವೆ ಕಲ್ಪಿಸುವಂತೆ ಪ್ರತಾಪ್ ಸಿಂಹ ಮನವಿ ಮಾಡಿದರು. ಸಂಸದರ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವರು, ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Translate »