ತ್ಯಾಗಿ ನಿವಾಸಕ್ಕೆ ಶಾಸಕರ ನಿಧಿಯಿಂದ 5 ಲಕ್ಷ
ಮೈಸೂರು

ತ್ಯಾಗಿ ನಿವಾಸಕ್ಕೆ ಶಾಸಕರ ನಿಧಿಯಿಂದ 5 ಲಕ್ಷ

July 8, 2019

ಮೈಸೂರು,ಜು.7(ಪಿಎಂ)- ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಭಗ ವಾನ್ ಶ್ರೀ ಶಾಂತಿನಾಥಸ್ವಾಮಿ ಜೈನ ಬಸದಿಯ (ಕೋಟೆ ಬಸದಿ) ಶ್ರೀ ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ತ್ಯಾಗಿ ನಿವಾಸಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಮೊದಲ ಹಂತದಲ್ಲಿ ಶೀಘ್ರವೇ 5 ಲಕ್ಷ ರೂ. ನೀಡುವುದಾಗಿ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದರು.

ಭಗವಾನ್ ಶ್ರೀ ಶಾಂತಿನಾಥಸ್ವಾಮಿ ಜೈನ ಬಸದಿಯಲ್ಲಿ 1008 ಭಗವಾನ್ ಶ್ರೀ ಶಾಂತಿ ನಾಥ ತೀರ್ಥಂಕರರ 123ನೇ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಭಾನು ವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ಟ್ರಸ್ಟ್ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಮೊದಲ ಹಂತದಲ್ಲಿ 5 ಲಕ್ಷ ರೂ. ನೀಡುವು ದಾಗಿ ತಮ್ಮ ಭಾಷಣದಲ್ಲಿ ಪ್ರಕಟಿಸಿದರು.

ಮುಂದುವರೆದು ಮಾತನಾಡಿದ ಎಸ್.ಎ.ರಾಮ ದಾಸ್, ನಮ್ಮ ಭಾರತೀಯ ಸಮಾಜದಲ್ಲಿ ಶಾಂತಿ ಸಂದೇಶ ಸಾರಲು ಬಹಳಷ್ಟು ಮಹ ನೀಯರು ಜನ್ಮ ತಾಳಿದ್ದಾರೆ. ಈ ಪೈಕಿ ಶಾಂತಿ ನಾಥಸ್ವಾಮಿಯೂ ಒಬ್ಬರು. ಭಾರತದ ಧಾರ್ಮಿಕ ವಿಚಾರಧಾರೆಗಳ ಶ್ರೇಷ್ಠತೆ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಇಂದು ಭಾರತದಲ್ಲಿ ನೋಡ ತೊಡಗಿದೆ. ಜೈನ ಸಮಾಜದಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಧಾರ್ಮಿಕ ಹಿನ್ನೆಲೆ ಹಾಗೂ ಧಾರ್ಮಿಕ ಗುರುಗಳ ಶ್ರೀಮಂತ ಸಂಸ್ಕøತಿ ಇದೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಭಾರತದ ಭವಿಷ್ಯ ಬರೆಯಲಿರುವ ನಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ನಮ್ಮ ಸಂಸ್ಕಾರದ ಬಗ್ಗೆ ತಿಳಿಸಿಕೊಡುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಕ್ಕಳು ಶಾಲೆಗೆ ಹೋಗುವ ಮುನ್ನ ಜನ್ಮಕೊಟ್ಟ ತಾಯಿಗೆ ನಮಸ್ಕರಿಸುವ ಪರಿಪಾಠ ಬೆಳೆಸಬೇಕಿದೆ. ಮಕ್ಕಳಿದ್ದಾಗ ಅಮ್ಮನಿಗೆ ನಮಸ್ಕರಿಸುವ ಮಕ್ಕಳು ಭವಿಷ್ಯದಲ್ಲಿ ತಾಯಿ ಭಾರತಾಂಬೆಗೆ ಗೌರವ ಸಲ್ಲಿಸುವುದನ್ನು ತಂತಾನೆ ಕಲಿಯಲಿದ್ದಾರೆ. ಹೀಗಾಗಿ ಪೋಷಕರು ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕøತಿಯನ್ನು ಮರೆ ಯದೇ ಮುಂದು ವರೆಸಿಕೊಂಡು ಹೋಗುವ ಮೂಲಕ ಮಕ್ಕಳಿಗೆ ಅದರ ಮಹತ್ವ ತಿಳಿಸಿಕೊಡಲು ಮುಂದಾಗಬೇಕು ಎಂದು ಕೋರಿದರು.

ಇದಕ್ಕೂ ಮುನ್ನ ಭಗವಾನ್ 1008 ಶ್ರೀ ಶಾಂತಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಪೂಜೆ ನೆರವೇರಿಸಲಾಯಿತು. ಅಲ್ಲದೆ, 108 ಕಳಶ ಮಹಾಭಿಷೇಕ ಪೂಜೆಯನ್ನೂ ಶ್ರೀ ಶಾಂತಿ ನಾಥ ತೀರ್ಥಂಕರರಿಗೆ ನೆರವೇರಿಸಲಾಯಿತು. ಕನಕಗಿರಿ ಶ್ರೀ ಕ್ಷೇತ್ರದ ಜೈನಮಠದ ಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಿ ದ್ದರು. ಶ್ರೀ ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಸ್.ಬಿ.ಸುರೇಶ್ ಜೈನ್, ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್, ಪದ್ಮಶ್ರೀ ಜೈನ ಮಹಿಳಾ ಸಮಾಜದ ಶೀಲಾ ಅನಂತ ರಾಜ್ ಮತ್ತಿತರರು ಹಾಜರಿದ್ದರು.

Translate »