ನಾಗೇನಹಳ್ಳಿಯಲ್ಲಿ 58 ಕುರಿ ಸಾವು  ಶಾಸಕ ಶಿವಲಿಂಗೇಗೌಡರಿಂದ ಪರಿಹಾರ ಭರವಸೆ
ಹಾಸನ

ನಾಗೇನಹಳ್ಳಿಯಲ್ಲಿ 58 ಕುರಿ ಸಾವು ಶಾಸಕ ಶಿವಲಿಂಗೇಗೌಡರಿಂದ ಪರಿಹಾರ ಭರವಸೆ

January 6, 2019

ಅರಸೀಕೆರೆ: ತಾಲೂಕಿನ ಬೆಳಗುಂಬ ಗ್ರಾಮದ ಬಳಿ ಇರುವ ನಾಗೇನಹಳ್ಳಿ ಗೊಲ್ಲರಹಟ್ಟಿಯ ಗಿರಿಯಪ್ಪ ಎನ್ನುವವರು ಸಾಕಿದ್ದ ಸುಮಾರು 58 ಕುರಿಗಳು ಆಕಸ್ಮಿಕ ಸಾವನ್ನಪ್ಪಿದ್ದು, ಸಾವನ್ನಪ್ಪಿದ ಕುರಿಗಳಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡುವುದರ ಮೂಲಕ ನೊಂದ ರೈತನಿಗೆ ಸಾಂತ್ವನ ನೀಡಿ ಮಾತ ನಾಡಿದ ಅವರು, ಕ್ಷೇತ್ರದ ಜನತೆ ಬರ ಗಾಲದಿಂದ ತತ್ತರಿಸುತ್ತಿದ್ದು, ಯಾವುದೇ ಮಳೆ ಬೆಳೆ ಇಲ್ಲದೇ ಆರ್ಥಿಕ ಸಂಕಷ್ಟದಿಂದ ರೈತನು ಬಳಲುತ್ತಿದ್ದಾನೆ. ಕೃಷಿಯೇತರ ಚಟು ವಟಿಕೆಯಾದÀ ಕುರಿ ಸಾಕಣಿಕೆ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿ ರುವ ರೈತನಿಗೆ ಇಂತಹ ಬೆಳವಣಿಗೆ ಗಳಿಂದ ತೀವ್ರ ಆಘಾತಗಳಾಗುತ್ತಿವೆ.ಈ ಘಟನೆಗಳಿಂದ ರೈತಾಪಿ ಜನರು ವಿಚಲಿತರಾಗುವುದು ಬೇಡ. ಸರ್ಕಾರ ದಿಂದ ಸೂಕ್ತ ಪರಿಹಾರವನ್ನು ಕುರಿಗಳನ್ನು ಕಳೆದುಕೊಂಡಿರುವ ರೈತನಿಗೆ ಕೊಡಿಸ ಲಾಗುವುದು ಎಂದರು.

ತಾಲೂಕು ಕುರಿ ಮತ್ತು ಉಣ್ಣೆ ಅಭಿ ವೃದ್ದಿ ಸಂಘದ ಅಧ್ಯಕ್ಷ ಹಾಗೂ ಜಿ.ಪಂ ಸದಸ್ಯ ಬಿಳಿಚೌಡಯ್ಯ ಮಾತನಾಡಿ, ಕುರಿ ಸಾಕಾಣಿಕೆ ಮತ್ತು ಉಣ್ಣೆ ಅಭಿವೃದ್ದಿಗೆಂದು ರಾಜ್ಯ ಸರ್ಕಾರವು ಪ್ರತ್ಯೇಕ ನಿಗಮವನ್ನು ಸ್ಥಾಪಿಸಿದೆ. ಹಾಲಿ ಮೃತಪಟ್ಟಿರುವ 58 ಕುರಿಗಳಿಗೆ ತಲಾ ಐದು ಸಾವಿರದಂತೆ ಪರಿ ಹಾರವನ್ನು ನೀಡಲಾಗುವುದು. ತಾಲೂಕಿ ನಲ್ಲಿರುವ ರೈತಾಪಿ ಜನರು ಕುರಿ ಸಾಗಣಿಕೆ ಯಂತಹ ಉದ್ಯಮದಲ್ಲಿ ಸಾಕಷ್ಟು ಶ್ರಮ ವಹಿಸಿದಲ್ಲಿ ಅರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಬಹುದು. ಪ್ರಕೃತ್ತಿ ವಿಕೋಪ ಗಳಂತಹ ಅವಘಡಗಳಿಗೆ ನಿಗಮವು ಅರ್ಥಿಕ ಸಹಾಯ ಹಸ್ತವನ್ನು ನೀಡುತ್ತಲಿದೆ. ದೃತಿಗೆಡದೇ ಈ ಉದ್ಯಮದಲ್ಲಿ ರೈತಾಪಿ ಜನರು ಪಾಲ್ಗೊಂಡು ಅಭಿವೃದ್ದಿ ಹೊಂದಬೇಕು ಎಂದರು.

ಪಶು ವೈದ್ಯಾಧಿಕಾರಿ ಮಂಜುನಾಥ್ ಮತ್ತು ಸಂತೋಷ ಇವರುಗಳು ಸ್ಥಳದಲ್ಲಿಯೇ ಕುರಿಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿದರು. ವಾಲ್ಮೀಕಿ ಸಮಾಜದ ಹನುಮಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬೆಂಡೆಕೆರೆ ಅಜ್ಜಪ್ಪ, ಜವನಪ್ಪ ಇನ್ನಿತರರು ಉಪಸ್ಥಿತರಿದ್ದರು.

Translate »