ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವುದು ಅವಶ್ಯಕ  ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಆಚಾರ್
ಹಾಸನ

ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವುದು ಅವಶ್ಯಕ ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಆಚಾರ್

January 6, 2019

ಹಾಸನ: ಭಾರತದ ಜ್ವಲಂತ ಸಮಸ್ಯೆಗಳಾದ ಭಯೋತ್ಪಾದನೆ, ಭ್ರಷ್ಟಾ ಚಾರ, ದಾರಿದ್ರ್ಯ ಗೋಹತ್ಯೆ, ನುಸುಳುವಿಕೆ ನಕ್ಸಲ್‍ವಾದ, ಅಪರಾಧಗಳು ಮತಾಂತರ, ಮೂರ್ತಿ ಭಂಜನೆ, ಲವ್ ಜಿಹಾದ್ ಈ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ವೆಂದರೆ ಭಾರತವನ್ನು ಸಂವಿಧಾನ ಬದ್ಧ ವಾಗಿ ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವುದು ಅವಶ್ಯಕವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಆಚಾರ್ ಅಭಿಪ್ರಾಯಪಟ್ಟರು.

ನಗರದ ವಾಸವಿ ಮಹಲ್ ಕನ್ನಿಕಾಪರ ಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಮಾತನಾಡಿ, ಭಾರತವು ಚಾರಿತ್ರಿಕ ಕಾಲದಿಂದಲೂ ಅನೇಕ ಬಾರಿ ವಿಭಜಿತವಾಗಿದೆ. ಸದ್ಯ ಭಾರತದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ರಾಷ್ಟ್ರ, ಧರ್ಮ ಮತ್ತು ಪರಂಪರೆ ಇವುಗಳ ಮೇಲೆ ಸತತವಾಗಿ ಆಘಾತಗಳು ಆಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವ ಜನಿಕ ಕ್ಷೇತ್ರಗಳಲ್ಲಿ ಪ್ರಜೆಗಳಿಗೆ ಅನ್ಯಾಯ ವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪರಿಹಾರವಾಗಿ ಕಾನೂನು ಮತ್ತು ಸಂವಿಧಾನ ಮಾರ್ಗದಲ್ಲಿ ಹಿಂದೂ ರಾಷ್ಟ್ರವೇ ಅಂತಿಮ ಪರಿಹಾರವಾಗಿದೆ ಎಂದು ಹೇಳಿ ದರು. ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ ಯಲ್ಲಿ ಹಿಂದುಗಳು ಹೇಗೆ ಸಂಘಟಿತರಾಗ ಬೇಕು ಎಂದು ವಿವರಿಸಿದರು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಮ್ಮ ಕೈಲಾದ ಪ್ರಯತ್ನಗಳನ್ನು ಮಾಡುವುದು ಈಗಿನ ಕಾಲದ ಸಾಧನೆಯೇ ಆಗಿದೆ ಎಂದು ತಿಳಿಸಿದರು.

ಸನಾತನ ಸಂಸ್ಥೆಯ ಚೇತನ ಶಂಕರ್ ಅವರು ಮಾತನಾಡಿ, ಸದ್ಯದ ರಾಷ್ಟ್ರ ಮತ್ತು ಧರ್ಮದ ಸ್ಥಿತಿಗೆ ಧರ್ಮಾಚರ ಣೆಯ ಅಭಾವವೇ ಕಾರಣವಾಗಿದೆ, ಏಕೆಂ ದರೆ ಇತರ ಧರ್ಮೀಯರಂತೆ ಹಿಂದೂಗಳಿಗೆ ಎಲ್ಲಿಯೂ ಧರ್ಮ ಶಿಕ್ಷಣ ಸಿಗುತ್ತಿಲ್ಲ. ನಮ್ಮ ಹಿರಿಯರು ಧರ್ಮಾಚರಣೆ ಮಾಡುತ್ತಿದ್ದ ರಿಂದಲೇ, ಅವರು ಆನಂದಿತರಾಗಿದ್ದರು ಎಂದರು. ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ನಾವು ದುಃಖಿತ ರಾಗಿದ್ದೇವೆ. ಗುರುಕೃಪೆಗನುಸಾರ ಸಾಧನೆ ಮಾಡಿದರೆ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಆನಂದವನ್ನು ಹೊಂದಬಹುದು ಎಂದು ಹೇಳಿದರು.

ಚಿಕ್ಕಮಗಳೂರಿನ ಪತಂಜಲಿ ಯೋಗ ಸಮಿತಿಯ ದಿವಾಕರ್ ಭಟ್ ಮಾತನಾಡಿ, ನೈತಿಕ ಮೌಲ್ಯಗಳ ಬಗ್ಗೆ ಹಾಗೂ ಧಾರ್ಮಿಕ ಕೃತಿಗಳ ಬಗ್ಗೆ ಹಾಗೂ ಧಾರ್ಮಿಕ ಕೃತಿಗಳ ಹಿಂದಿನ ವೈಜ್ಞಾನಿಕ ಶಾಸ್ತ್ರವನ್ನು ತಿಳಿಸಿ ದರು. ನಮ್ಮ ಧರ್ಮ ಹಾಗೂ ನಮ್ಮಲ್ಲಿರು ವಂತಹ ಪ್ರತಿಯೊಂದು ಮೌಲ್ಯಗಳ ಪ್ರಾಮುಖ್ಯತೆಯ ವಿಚಾರವನ್ನು ತಿಳಿಸಿದರು. ಇಂದಿನ ಯುವ ಪೀಳಿಗೆಯು ಯಾವ ರೀತಿ ದಾರಿ ತಪ್ಪುತ್ತಿದೆ. ನಡೆ ನುಡಿ ಹಾಗೂ ಪರಿಸರದಿಂದ ಹೇಗೆ ಬೇರಾಗಿ ಬದುಕುತ್ತಿದ್ದಾರೆ ಹಾಗೂ ನಾವು ಯಾವ ರೀತಿ ಬದುಕಬೇಕು ಎಂಬುದರ ವಿಚಾರವನ್ನು ಎಳೆಯಾಗಿ ಬಿಡಿಸುತ್ತಾ ಇಂದಿನ ಯುಗದಲ್ಲಿ ನಮ್ಮ ಋಷಿ ಮುನಿಗಳು ಹಾಕಿಕೊಟ್ಟಿರುವಂತಹ ಹಿಂದಿನ ಎಲ್ಲಾ ಶಾಸ್ತ್ರಗಳು ಕೇವಲ ಶಾಸ್ತ್ರ ಗಳೇ ಆಗಿರದೆ ಅದು ವೈಜ್ಞಾ ನಿಕ ತಳಹ ದಿಯ ಮೇಲೆ ನಿಂತಿದೆ. ಇವತ್ತು ಜಗತ್ತಿ ನಲ್ಲಿನ ಯಾವುದೇ ವೈಜ್ಞಾನಿಕತೆಯು ಆಧ್ಯಾತ್ಮದ ಕೊಡುಗೆಯಿಂದಲೇ ಸಿಕ್ಕಿದೆ ಇದು ನಮಗೆ ನಮ್ಮ ಋಷಿ ಮುನಿಗಳಿಂದ ಸಿಕ್ಕಿರುವಂತಹ ದೇಣಿಗೆ ಆಗಿದೆ ಇವತ್ತು ಯಾವುದೇ ವಿಚಾರದಲ್ಲೂ ಕೂಡ ನಮ್ಮನ್ನು ಮೀರಿಸೋರು ಯಾರೂ ಇಲ್ಲ. ಇವತ್ತು ಪಾಶ್ಚಾತ್ಯರ ಅಂಧಾನುಕರಣೆ ಯನ್ನು ಮಾಡಿ ಇವತ್ತು ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಒಬ್ಬ ವ್ಯಕ್ತಿಯು ಚೈತನ್ಯವನ್ನು ಜಾಗೃತಗೊಳಿ ಸಲು ಭಗವಂತ ನೀಡುವಂತಹ ಕುಂಕು ಮವನ್ನು ಹಚ್ಚಿಕೊಳ್ಳುವ ವಿಧಾನವನ್ನು ಹೇಳಿಕೊಟ್ಟರು ಅದೇ ರೀತಿ ಈ ಒಂದು ಸಂದರ್ಭದಲ್ಲಿ ನಾವು ಹೇಳುವುದಾದರೆ, ಕೇವಲ ಮಾನವರಿಗೆ ಅಷ್ಟೇ ಅಲ್ಲ ಗಿಡ ಮರ ಬಳ್ಳಿ ಪ್ರತಿಯ ಹೊಸತನವನ್ನು ನೋಡುವಂತಹ ದಿನ ಯುಗಾದಿ ಆಗಿ ರುತ್ತದೆ. ಆದರೆ, ಡಿಸೆಂಬರ್ 31ರ ರಾತ್ರಿ ಕುಡಿದು ಪಾನಮತ್ತರಾಗಿ ತಮ್ಮ ಜೀವನ ವನ್ನು ಹಾಳು ಮಾಡಿಕೊಳ್ಳುವಂತಹ ಸ್ಥಿತಿಗೆ ಇಂದಿನ ಯುವ ಜನತೆಯು ಬಂದು ತಲುಪಿದೆ. ಇದನ್ನು ತಪ್ಪಿಸಲು ನಾವು ನಮ್ಮ ಮನೆಯ ಮಕ್ಕಳನ್ನು ಜೋಪಾನ ಮಾಡ ಬೇಕಾಗಿದೆ, ನಾವು ನಮ್ಮ ಸಂಸ್ಕೃತಿಯ ಬಗ್ಗೆ ಅರಿತುಕೊಳ್ಳಬೇಕಾಗಿದೆ. ನಾವು ನಮ್ಮನ್ನು ಸಂಪೂರ್ಣವಾಗಿ ಹಿಂದೂ ಧರ್ಮದಲ್ಲಿ ಹೇಳಿರುವ ಆಚರಣೆಯನ್ನು ಆಚಾರಧರ್ಮ ಪಾಲನೆಯನ್ನು ಮಾಡು ವುದರ ಮುಖಾಂತರ ಕೂಡ ಅತ್ಯಂತ ಸುಲಭ ರೀತಿಯಲ್ಲಿ ನಮ್ಮನ್ನು ನಾವು ಕಂಡು ಕೊಳ್ಳಬಹುದು. ಇವತ್ತು ಪ್ರತಿಯೊಬ್ಬರಿಗೂ ಕೂಡ ಒಂದು ಆಧ್ಯಾತ್ಮಿಕ ಚೇತನಶಕ್ತಿ ಬೇಕಾಗಿದೆ. ಪ್ರತಿಯೊಬ್ಬರೂ ಅದನ್ನು ಬೆಳೆಸಿಕೊಳ್ಳಲು ಪ್ರಯತ್ನ ವನ್ನು ಕೂಡ ಸ್ವತಃ ನಾವೇ ಪಡಬೇಕಾಗಿದೆ ಎಂದರು.

Translate »