ಮೈಸೂರು: ಪಾದಚಾರಿ ಮಹಿಳೆಯೊಬ್ಬರ ಸರಕಸಿದು ಪರಾರಿ ಯಾಗಿರುವ ಘಟನೆ ಎನ್.ಆರ್.ಠಾಣಾ ವ್ಯಾಪ್ತಿಯ ಕರುಣಾಪುರದಲ್ಲಿ ಶನಿವಾರ ಸಂಜೆ ನಡೆದಿದೆ. ಮಹಿಳೆಯ ಹೆಸರು, ವಿಳಾಸ, ಎಷ್ಟು ತೂಕದ ಸರ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮಹಿಳೆಯೊಬ್ಬರು ಮಗುವಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಖದೀಮರಿಬ್ಬರು ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.