ಖದೀಮನ ಸೆರೆ, 3 ವಾಹನ ವಶ
ಮೈಸೂರು

ಖದೀಮನ ಸೆರೆ, 3 ವಾಹನ ವಶ

January 6, 2019

ಮೈಸೂರು: ಖದೀಮನೋರ್ವನನ್ನು ಬಂಧಿಸಿರುವ ದೇವರಾಜ ಠಾಣೆ ಪೊಲೀಸರು, 1 ಲಕ್ಷ ಬೆಲೆ ಬಾಳುವ 3 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ರಾಜೇಂದ್ರನಗರ ನಿವಾಸಿ ಶೇಖರ ಅಲಿಯಾಸ್ ಚಂದ್ರ(28) ಬಂಧಿತ ಆರೋಪಿ. ಆತನಿಂದ 3 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ದೇವರಾಜ ಮತ್ತು ಕೆ.ಆರ್.ಠಾಣೆ ವ್ಯಾಪ್ತಿಯ ಪಾರ್ಕಿಂಗ್ ಸ್ಥಳದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪುರಭವನದ ಬಳಿ ಶುಕ್ರವಾರ ಬಂಧಿಸಲಾಗಿದೆ.

ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ಸಬ್ ಇನ್ಸ್‍ಪೆಕ್ಟರ್ ಎಸ್.ರಾಜು, ಎಎಸ್‍ಐ ಉದಯಕುಮಾರ್, ಸಿಬ್ಬಂದಿಗಳಾದ ವೇಣುಗೋಪಾಲ, ಸೋಮಶೆಟ್ಟಿ, ಸುರೇಶ, ಉಮೇಶ,
ನಂದೀಶ ಹಾಗೂ ವಸಂತ ಅವರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »