ಮೈಸೂರು: ಖಿನ್ನತೆಗೊಳಗಾಗಿದ್ದ 7ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ತನ್ನ ತನ್ನ ಹುಟ್ಟು ಹಬ್ಬದಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಜನತಾನಗರದಲ್ಲಿ ಶನಿ ವಾರ ಮಧ್ಯಾಹ್ನ ಸಂಭವಿಸಿದೆ.
ಜನತಾನಗರ 10ನೇ ಕ್ರಾಸ್ ನಿವಾಸಿ ರವಿ ಎಂಬುವರ ಪುತ್ರ ಗಣೇಶ(13) ನೇಣಿಗೆ ಶರಣಾದ ವಿದ್ಯಾರ್ಥಿ. ಕೆಲ ಸಕ್ಕೆ ಹೋಗಿ ಸಂಜೆ ಹಿಂದಿರುಗಿದಾಗ ಪುತ್ರ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ತಂದೆ-ತಾಯಿಯರಿಗೆ ತಿಳಿಯಿತು.
ಕಳೆದ ಒಂದು ವಾರದಿಂದ ಖಿನ್ನತೆ ಗೊಳಗಾಗಿ ಬಳಲುತ್ತಿದ್ದ ಗಣೇಶ ಶನಿ ವಾರ ಹುಟ್ಟುಹಬ್ಬ ಆಚರಿಸಿಕೊಳ್ಳ ಬೇಕಾಗಿತ್ತು. ಬೈಕ್‍ನಲ್ಲಿ ಬಂದು ರೌಂಡ್ ಓಡಾಡಲು ಸ್ನೇಹಿತರು ಅವಕಾಶ ಕೊಡಲಿಲ್ಲ ಎಂದು ಆತ ಕೆಲವರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶನಿವಾರ ರಾತ್ರಿ ಸ್ಥಳಕ್ಕೆ ಧಾವಿಸಿದ ಸರ ಸ್ವತಿಪುರಂ ಠಾಣೆ ಪೊಲೀಸರು, ಮಹ ಜರು ನಡೆಸಿ ವಿದ್ಯಾರ್ಥಿ ಮೃತದೇಹ ವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾ ಗಾರಕ್ಕೆ ಸ್ಥಳಾಂತರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಂದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಿದರು.