ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ
ಮೈಸೂರು

ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ

October 29, 2018

ನವದೆಹಲಿ: ಸರ್ಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಆಧಾರ್ ಇ-ಕೆವೈಸಿ ಬಳಸುವಂತೆ ಬ್ಯಾಂಕ್‍ಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಸ್ಪಷ್ಟಪಡಿಸಿದೆ.

ಸರ್ಕಾರದ ಕಲ್ಯಾಣ ಯೋಜನೆಗಳನ್ನು ಹೊರತುಪಡಿಸಿ ಇತರೆ ಸೌಲಭ್ಯ ಪಡೆ ಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದ ನಂತರ ಬ್ಯಾಂಕ್‍ಗಳು ಕಾನೂನು ಸಲಹೆ ಕೇಳಿ ಯುಐಡಿಎಐಗೆ ಪತ್ರ ಬರೆದಿದ್ದವು. ಈ ಸಂಬಂಧ ಕಳೆದ ವಾರ ಬ್ಯಾಂಕ್‍ಗಳಿಗೆ ಪತ್ರ ಬರೆದಿರುವ ಯುಐಡಿಎಐ, ಯಾವುದಕ್ಕೆ ಮತ್ತು ಯಾವ ಸನ್ನಿವೇಶದಲ್ಲಿ ಆಧಾರ್ ಬಳಸಬಹುದು ಎಂಬುದರ ಬಗ್ಗೆ ವಿವರಣೆ ನೀಡಿದೆ. ಅಲ್ಲದೆ ಇದರ ಪ್ರತಿಯನ್ನು ಆರ್‍ಬಿಐಗೂ ಕಳುಹಿಸಲಾಗಿದೆ ಎಂದು ಯುಐಡಿಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ಸಬ್ಸಿಡಿ ಪಡೆಯಲು ಮತ್ತು ಕಲ್ಯಾಣ ಯೋಜನೆಗಳ ನೇರ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಬಹುದು.

ಹೊಸ ಸಿಮ್‍ಗೆ ಆಧಾರ್ ಅನಗತ್ಯ

ಕೇಂದ್ರ ಸರ್ಕಾರ ಕಳೆದ ಶುಕ್ರವಾರವಷ್ಟೆ ಮೊಬೈಲ್ ನೆಟ್ವರ್ಕ್, ದೂರವಾಣಿ ಸೇವಾ ಸಂಸ್ಥೆಗಳು ಕೂಡಲೇ ಆಧಾರ್ ಆಧಾರಿತ ಇ-ಕೆವೈಸಿಯನ್ನು ಸ್ಥಗಿತ ಗೊಳಿಸುವಂತೆ ಆದೇಶ ಹೊರಡಿಸಿತ್ತು. ಮೊಬೈಲ್ ಸೇವೆಗಾಗಿ ಆಧಾರ್ ಕಡ್ಡಾಯ ಮಾಡದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರ ಮೊದಲ ಹಂತ ಎಂಬಂತೆ ಟೆಲಿಕಾಂ ಸೇವಾ ಸಂಸ್ಥೆ ಗಳಿಗೆ ಸೂಚನೆ ರವಾನಿಸಿದೆ.

ಮೊಬೈಲ್ ನೆಟ್‍ವರ್ಕ್, ದೂರ ವಾಣಿ ಸೇವಾ ಸಂಸ್ಥೆಗಳು ಕೂಡಲೇ ಆಧಾರ್ ಆಧಾರಿತ ಇ-ಕೆವೈಸಿಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಮೊಬೈಲ್ ಸಿಮ್ ಕಾರ್ಡ್‍ಗೆ ಸಂಬಂಧಿಸಿದ ಇ-ಕೆವೈಸಿ ಮತ್ತು ಹೊಸ ಸಿಮ್ ಕಾರ್ಡ್ ಅಥವಾ ಕನೆಕ್ಷನ್‍ಗಾಗಿ ಗ್ರಾಹಕ ಅಥವಾ ಬಳಕೆದಾರರಿಂದ ಆಧಾರ್ ಕಾರ್ಡ್ ಕೇಳದಂತೆ ಸರ್ಕಾರ ಸೂಚಿ ಸಿದೆ. ಸಿಮ್‍ಕಾರ್ಡ್‍ಗಾಗಿ ಅಥವಾ ದೂರವಾಣಿ ಸೇವೆಗಳಿಗಾಗಿ ಟೆಲಿಕಾಂ ಸಂಸ್ಥೆ ಗಳು ಗ್ರಾಹಕರಿಗೆ ಆಧಾರ್ ನೀಡು ವಂತೆ ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

Translate »