ತಂಬಾಕು ಸೇವನೆ ಅನಾಹುತಗಳ ಅರಿವು
ಮೈಸೂರು

ತಂಬಾಕು ಸೇವನೆ ಅನಾಹುತಗಳ ಅರಿವು

June 1, 2018

ತಿ.ನರಸೀಪುರ:  ವಿದ್ಯಾರ್ಥಿಗಳು ದುಶ್ಚಟಮುಕ್ತರಾಗಿ, ಆರೋಗ್ಯ ದಿಂದ ಬದುಕಲು ಅಗತ್ಯ ಕಾನೂನು ಹಾಗೂ ಆರೋಗ್ಯದ ಬಗ್ಗೆ ತಿಳುವಳಿಕೆ ಪಡೆಯು ವಂತೆ ಹಿರಿಯ ಶ್ರೇಣ ನ್ಯಾಯಾಧೀಶ ಎ. ನಾಗಿರೆಡ್ಡಿ ಕರೆ ನೀಡಿದರು

ಪಟ್ಟಣದ ಸರ್ಕಾರಿ ಪಿಯು ಕಾಲೇಜಿ ನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ, ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯ ದಲ್ಲಿ ಗುರುವಾರ ನಡೆದ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, 18 ವರ್ಷ ವಯೋಮಾನ ದೊಳಗಿನ ಯಾವುದೇ ವ್ಯಕ್ತಿ ಬೀಡಿ, ಸಿಗ ರೇಟು ಕೇಳಿದರೆ ನೀಡಬಾರದು. ಶಾಲಾ ಕಾಲೇಜುಗಳ ಮುಂಭಾಗ ಹಾಗೂ ಆಸು ಪಾಸಿನಲ್ಲಿ ತಂಬಾಕು ನಿಷೇಧದ ಸೂಚನಾ ಫಲಕ ಅಳವಡಿಸಬೇಕು. ಇತ್ತೀಚಿನ ದಿನ ಗಳಲ್ಲಿ ಯುವಕ ಯುವತಿಯರೇ ಹೆಚ್ಚಿನ ರೀತಿಯಲ್ಲಿ ತಂಬಾಕು ಬಳಕೆ ಮಾಡುತ್ತಿರು ವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವ್ಯಸನಮುಕ್ತ ಜೀವನ ನಡೆಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು. ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಿಯಾ ಭಾನು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ದುಶ್ಚಟಗಳ ಬಗ್ಗೆ ಮಾಹಿತಿ ನೀಡಿದರೆ ಅದು ಎಲ್ಲ ಕಡೆ ಜಾಗೃತಿ ಮೂಡಿಸಲು ಅನು ಕೂಲವಾಗುತ್ತದೆ ಎಂಬ ಉದ್ದೇಶದಡಿ ಶಾಲಾ ಕಾಲೇಜುಗಳಲ್ಲಿ ಇಂತಹ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗು ತ್ತಿದೆ. ತಂಬಾಕು ಬಳಕೆಯಿಂದ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂದರು.

ಧೂಮಪಾನಗಳಿಂದಾಗುವ ದುಷ್ಫರಿಣಾಮ ಗಳ ಕುರಿತು ತಲಕಾಡು ಆರೋಗ್ಯ ಕೇಂದ್ರದ ಡಾ. ಕಮಲಮ್ಮ ಧೂಮಪಾನ ನಿಷೇಧ ಕಾಯ್ದೆ ಕುರಿತು ವಕೀಲ ಶಂಭುಲಿಂಗ ಸ್ವಾಮಿ ಹಾಗೂ ಹಿರಿಯ ಬಿಇಓ ಗಂಗಾಧರ್, ವಕೀಲರ ಸಂಘದ ಅಧ್ಯಕ್ಷ ಜಿ. ರವಿಶಂಕರ್ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶು ಪಾಲ ಮೋಹನ್ ಕುಮಾರ್, ಡಾ.ಮಂಗಳ ಮೂರ್ತಿ, ಸೋಮಣ್ಣ, ವಕೀಲರಾದ ನಂಜಪ್ಪ, ಶಾಂತನಾಗರಾಜು, ಸಿದ್ದರಾಜು ಹಾಗೂ ಇತರರು ಇದ್ದರು.

Translate »