ಮಡಿಕೇರಿ: ವಿರಾಜಪೇಟೆ ಅರ ಮೇರಿ ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪ್ರಕರಣ ಬೆಳಕಿಗೆ ಬಂದ 3 ದಿನದಲ್ಲಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ. ಅರ ಮೇರಿ ಬಳಿಯ ಮಲ್ಲಮಟ್ಟಿ ಗ್ರಾಮದಲ್ಲಿ ಕೊಲೆಯಾದ ಮಹಿಳೆಯನ್ನು ಅಸ್ಸಾಂ ಮೂಲದ ಮರ್ಜೀನಾ ಖಾತುನ್(20) ಎಂದು ಗುರುತಿಸಲಾಗಿದ್ದು, ಮೃತೆಯ ಪತಿ ಅಸ್ಸಾಂ ಮೂಲದ ಉಸ್ಮಾನ್ ಅಲಿ (40) ಎಂಬಾತನೇ ಕೊಲೆಗೈದ ಆರೋಪಿಯಾಗಿದ್ದಾನೆ.
ಘಟನೆ ವಿವರ: ಅಸ್ಸಾಂ ರಾಜ್ಯದ ಬಾಯ್ಬೆ ರಿಬೀಲ್ ಗ್ರಾಮದ ದೋರಾಂಗ್ ಜಿಲ್ಲೆಯ ಉಸ್ಮಾನ್ ಅಲಿ ಮತ್ತು ಆಕೆಯ 2ನೇ ಹೆಂಡತಿ ಮರ್ಜೀನಾ ಖಾತುನ್ ಕಳೆದ 2018ರ ಅಕ್ಟೋಬರ್‍ನಲ್ಲಿ ಕರ್ನಾಟಕಕ್ಕೆ ಬಂದಿ ದ್ದರು. ಆ ಬಳಿಕ ವಿರಾಜಪೇಟೆ ಹೆಗ್ಗಳ ಗ್ರಾಮದ ಎಸ್ ಎಂಡ್ ಎಸ್ ಕಾಫಿ ತೋಟ ದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ದಂಪತಿ ನಡುವೆ ಪ್ರತಿನಿತ್ಯ ಮೊದಲನೆ ಹೆಂಡತಿ ವಿಚಾ ರವಾಗಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಇದರಿಂದ ಬೇಸತ್ತಿದ್ದ 2ನೇ ಹೆಂಡತಿ ಮರ್ಜೀನಾ ಖಾತುನ್ ಹೆಣ್ಣು ಮಗುವನ್ನು ಮೊದಲನೆಯ ಹೆಂಡತಿಯ ಮನೆಯಲ್ಲಿ ಬಿಟ್ಟು ಬೇರೆ ಎಸ್ಟೇಟ್‍ನಲ್ಲಿ ಕೊಲೆಯಾ ಗುವ 15 ದಿನದ ಮೊದಲು ಕೆಲಸಕ್ಕೆ ಸೇರಿ ಕೊಂಡಿದ್ದಳು. ಅಲ್ಲದೆ, ಮೊದಲನೇ ಪತ್ನಿ ಯನ್ನು ತೊರೆದು ತನ್ನೊಂದಿಗೆ ಬದುಕು ಸಾಗಿಸುವಂತೆ ಪತಿ ಉಸ್ಮಾನ್ ಅಲಿಯ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಳೆನ್ನ ಲಾಗಿದೆ. ಆದರೆ ಮೊದಲನೇ ಪತ್ನಿಯನ್ನು ತೊರೆಯಲು ಹಿಂದೇಟು ಹಾಕಿದ್ದ ಉಸ್ಮಾನ್ ಅಲಿ 2ನೇ ಪತ್ನಿಯನ್ನು ಕೊಲೆ ಮಾಡಲು ಪೂರ್ವ ಸಿದ್ಧತೆ ನಡೆಸಿದ್ದ. ಅದರಂತೆ ಜ.3 ರಂದು 2ನೇ ಪತ್ನಿಯನ್ನು ಪುಸಲಾಯಿಸಿ ಮಲ್ಲಮಟ್ಟಿ ಎಸ್ಟೇಟ್‍ಗೆ ಕರೆತಂದು ಆಕೆಯ ಕುತ್ತಿಗೆಗೆ ವೇಲ್ ಬಿಗಿದು ಕೊಲೆಗೈದು ಪೊದೆಯೊಳಗೆ ಬಿಸಾಡಿ ಪರಾರಿಯಾಗಿದ್ದ.
ಮಲ್ಲಮಟ್ಟಿ ಎಸ್ಟೇಟ್‍ನ ವ್ಯವಸ್ಥಾಪಕ ಜ.26 ರಂದು ತೋಟಕ್ಕೆ ತೆರಳಿದ ಸಂದರ್ಭ ಕೊಳತೆ ವಾಸನೆ ಬರುತ್ತಿರುವುದನ್ನು ಗಮನಿ ಸಿದ್ದರು. ಯಾವುದೋ ಕಾಡು ಪ್ರಾಣಿ ಸತ್ತಿರ ಬಹುದೆಂದು ಶಂಕಿಸಿ, ದುರ್ನಾತ ಬರುತ್ತಿರುವು ದನ್ನು ಪರಿಶೀಲಿಸಲು ಕಾರ್ಮಿಕರಿಗೆ ತಿಳಿಸಿ ದ್ದರು. ಅದರಂತೆ ಕಾರ್ಮಿಕರು ಹುಡುಕಾಟ ನಡೆಸುತ್ತಿದ್ದಾಗ ಕಾಫಿ ತೋಟದ ಪಕ್ಕದಲ್ಲಿದ್ದ ಗದ್ದೆ ಬದಿಯ ಪೊದೆಯೊಳಗೆ ರುಂಡ ಮತ್ತು ಕೈ ತುಂಡರಿಸಿದ ಸ್ಥಿತಿಯಲ್ಲಿ ಮಹಿಳೆಯೋ ರ್ವಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು. ಬಳಿಕ ತೋಟದ ವ್ಯವಸ್ಥಾಪ ಕರು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖ ಲಿಸಿದ್ದರು.
ಮೊ.ಸಂ.4/2019 ಕಲಂ 302, 201 ಐಪಿಸಿ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡ ವಿರಾಜಪೇಟೆ ಗ್ರಾಮಾಂ ತರ ಪೊಲೀಸರು ತನಿಖೆ ಕೈಗೊಂಡಿದ್ದರು. ಮಹಿಳೆಯ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಪ್ರಕರಣ ತನಿ ಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ, ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ನೇತೃತ್ವದಲ್ಲಿ 2 ತನಿಖಾ ತಂಡ ರಚಿಸಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ತನಿಖಾ ತಂಡಗಳು ಅಸ್ಸಾಂ ಮೂಲದ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ದ್ದರು. ಈ ಸಂದರ್ಭ ಮೃತೆಯ ಗಂಡ ಉಸ್ಮಾನ್ ಅಲಿಯ ಮೇಲೆ ಸಂಶಯಗೊಂಡು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾ ರಣೆ ನಡೆಸಿದ್ದರು. ಈ ಸಂದರ್ಭ ಮೊದ ಲನೆಯ ಪತ್ನಿಯನ್ನು ತೊರೆಯುವಂತೆ 2ನೇ ಪತ್ನಿ ಮರ್ಜೀನಾ ಖಾತುನ್ ಒತ್ತಡ ಹೇರುತ್ತಿದ್ದುದರಿಂದ ಕೊಲೆ ಮಾಡಿರುವು ದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಪಿ. ಸುಮನ ತಿಳಿಸಿದ್ದಾರೆ. ಕಾಡು ಪ್ರಾಣಿಗಳು ಮೃತದೇಹವನ್ನು ಎಳೆದಾಡಿರುವುದರಿಂದ ಮೃತೆಯ ರುಂಡ ಮತ್ತು ಕೈ ದೇಹದಿಂದ ಬೇರ್ಪಟ್ಟಿರುವ ಸಾಧ್ಯತೆಯಿದೆ ಎಂದು ಅವರು ಶಂಕಿಸಿದ್ದಾರೆ. ಕೊಲೆ ಆರೋಪಿಯನ್ನು ವಿರಾಜಪೇಟೆ ನ್ಯಾಯಾಲಯಕ್ಕೆ ಹಾಜ ರುಪಡಿಸಿದ ಬಳಿಕ ನ್ಯಾಯಾಂಗ ಬಂಧ ನಕ್ಕೆ ಒಳಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಎಂ.ಎ.ಮಹೇಶ್, ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್‍ಐ ಸುರೇಶ್ ಬೋಪಣ್ಣ, ಸಿಬ್ಬಂದಿಗ ಳಾದ ಎಎಸ್‍ಐ ಹಮೀದ್, ಯೋಗೇಶ್ ಕುಮಾರ್, ನಿರಂಜನ್, ಅನಿಲ್ ಕುಮಾರ್, ವೆಂಕಟೇಶ್, ವಸಂತ್, ಬೆಳ್ಳಿಯಪ್ಪ, ಶಶಿಕು ಮಾರ್, ಗೋಪಿನಾಥ್, ಸಿಡಿಆರ್ ಶೆಲ್‍ನ ಗಿರೀಶ್, ಸಿ.ಕೆ.ರಾಜೇಶ್ ಪಾಲ್ಗೊಂಡಿದ್ದರು.
ಪ್ರಕರಣವನ್ನು ಪತ್ತೆ ಹಚ್ಚಿದ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ, ನಗದು ಬಹುಮಾನ ಘೋಷಿಸಿದ್ದಾರೆ.