ಸಾಧ್ಯ ಬಿಇಓ ಮೋಹನ್‍ಕುಮಾರ್ ಅಭಿಮತ
ಅರಸೀಕೆರೆ: ಮನುಷ್ಯ ಜೀವನ ದಲ್ಲಿ ತಾಳ್ಮೆ, ನಂಬಿಕೆ, ಆತ್ಮ ವಿಶ್ವಾಸವನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸನ್ನು ಪಡೆಯಬಹುದು. ಮಹಾತ್ಮ ಗಾಂಧೀಜಿ ಯವರ ಜೀವನದಲ್ಲಿ ಈ ಮೂರು ಅಂಶಗಳು ಹಾಸು ಹೊಕ್ಕಿದ ಪರಿಣಾಮ ಇಂದು ವಿಶ್ವವೇ ಗೌರವಿಸುವಂತಹ ಮಹಾನ್ ದಾರ್ಶನಿಕ ಪುರುಷರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿರುವ ಕಸ್ತೂರಬಾ ಶಿಬಿರ ಗಾಂಧಿ ಸ್ಮಾರಕದಲ್ಲಿ ಹಾಸನದ ವಾಸವಿ ಆಂಗ್ಲ ಮಾಧ್ಯಮ ಶಾಲೆಯವರು ಗಾಂಧಿ-150 ವರ್ಷಾ ಚರಣೆಯ ಹಿನ್ನೆಲೆಯಲ್ಲಿ ‘ಗಾಂಧಿ ಸ್ಮರಣ-ವಾಸವಿ ನಮನ’ ವಿಶೇಷ ಮಾಹಿತಿ ಪ್ರದಾನ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೌವನಾವಸ್ಥೆ ಬರುವ ವೇಳೆಗೆ ತಾಳ್ಮೆ, ನಂಬಿಕೆ ದೃಢವಾ ಗಿದ್ದರೆ ದುಷ್ಕøತ್ಯಗಳನ್ನು ಮಾಡುವ ಮನೋ ಭಾವದಿಂದÀ ದೂರವಿದ್ದು, ಸಮಾಜ ಮುಖಿಯಾಗಿ ಗುರುತಿಸಿಕೊಳ್ಳಬಹುದು. ಶಾಲೆಯೊಂದು ಪಠ್ಯ ವಿಷಯಗಳಿಗೆ ಅನುಗುಣವಾಗಿ ಪರೀಕ್ಷೆಗಾಗಿ ವಿದ್ಯಾರ್ಥಿ ಗಳನ್ನು ಸಿದ್ಧಪಡಿಸುವುದು ಸಹಜವಾದ ಪ್ರಕ್ರಿಯೆ.
ಆದರೆ ಸಾಂದರ್ಭಿಕವಾಗಿ ಒದ ಗುವ ವಿಶೇಷ ಅವಕಾಶಗಳನ್ನು ಬಳಸಿ ಕೊಂಡು ಹೆಚ್ಚಿನ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡುವುದು ವಿದ್ಯಾರ್ಥಿಗಳ ಸರ್ವ ತೋಮುಖ ಅಭಿವೃದ್ಧಿಯ ಹಿತ ಚಿಂತನೆಯ ಆಸಕ್ತಿಯುಳ್ಳವರಿಗೆ ಮಾತ್ರ ಸಾಧ್ಯ ಎಂದರು.
ಸಾಹಿತಿ ಡಿ.ಎಸ್.ರಾಮಸ್ವಾಮಿ ಮಾತ ನಾಡಿ, ಗಾಂಧೀಜಿಯವರ ಸ್ವತಂತ್ರಪೂರ್ವ ಚಿಂತನೆಯ ಹಿಂದ್ ಮತ್ತು ಸ್ವರಾಜ್ ಪದಗಳ ಅರ್ಥವನ್ನು ಪ್ರಸ್ತುತ ಸಮಾಜ ಮಾಡಿಕೊಂಡರೆ, ವಿಶಾಲ ಮನೋಭಾವ, ಸ್ವಾರ್ಥ ರಹಿತ ಚಿಂತನೆಯಿಂದ ಜೀವನ ನಡೆಸಬಹÅದು. ಆಗರ್ಭ ಶ್ರೀಮಂತ ಕುಟುಂಬದಿಂದ ಬಂದ ವಿದೇಶದಲ್ಲೇ ಬೆಳೆದ ಗಾಂಧೀಜಿ, ಅರೆಬೆತ್ತಲೆ ಫಕೀರ£ Áದ ಪ್ರಸಂಗವನ್ನು ಮಕ್ಕಳಿಗೆ ತಿಳಿಸಿ, ಗಾಂಧೀಜಿ ಭರತ ಖಂಡದ ಸಂತರಾಗಿ ದ್ದಾರೆ. ಗಾಂಧಿ ಪ್ರಣೀತ ಸಮಾಜವಾದ ನಮಗೆ ಇಂದು ಪ್ರಸ್ತುತ. ಗಾಂಧಿ ಅಚಲ ಗುರಿಯನ್ನು ಹೆÇಂದಿದ್ದರು. ಆ ಸದೃಢ ಮನೋಭಾವ ನಮಗೆ ಬರಲಿ ಎಂದರು.
ನಗರಸಭಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಆಡಳಿತಾಧಿಕಾರಿ ಮಂಜು ನಾಥ್, ಕಸ್ತೂರಬಾ ಆಶ್ರಮದ ಮುಖ್ಯಸ್ಥೆ ಮೇರಿ, ವಾಸವಿ ಶಾಲೆಯ ಸೋಷಿಯೊ ಕ್ಲಬ್‍ನ ಸುಮಿತ್ರಾ, ಮನೋಹರ್, ಸರಣಿ ಸಂಯೋಜಕಿ ಸಂಧ್ಯಾ ಮಾತನಾಡಿದರು.