ಮೈಸೂರು: ಮೈಸೂರಿನ ಕೌಶ ಲಾಭಿವೃದ್ಧಿ ಇಲಾಖೆಯು ಮೈಸೂರಿ ನಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳ ಪೂರ್ವಭಾವಿ ಸಭೆಯು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳಿಗೆ ಫೆ.24 ಮತ್ತು 25ರಂದು ಮೈಸೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಹಲವಾರು ಕಂಪನಿಗಳು ಭಾಗವಹಿಸಲಿವೆ ಇದನ್ನು ಎಲ್ಲಾ ನಿರುದ್ಯೋಗಿಗಳು ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.
ಬರುವಂತಹ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಸಿಕೊಳ್ಳಲು 10 ಕೌಂಟರ್ ಸ್ಥಾಪಿಸ ಬೇಕು, ಎಲ್ಲಾ ಕಡೆ ಹೆಚ್ಚಿನ ಪ್ರಚಾರ ನೀಡ ಬೇಕು ಮತ್ತು ಬರುವಂತಹ ಕಂಪನಿಗಳು ಪ್ರಾಮಾಣಿಕವಾಗಿವೆಯೋ ಎಂಬುದನ್ನು ತಿಳಿಯಲು ಒಂದು ಸ್ಕ್ರೀನ್ ಕಮಿಟಿ ರಚಿಸಿ ಅವರ ಜೊತೆ ಒಂದು ಸಭೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಸಹಾಯಕ ನಿರ್ದೇ ಶಕರಾದ ಗೀತಾ, ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಉಮಾ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.