ಮ.ಬೆಟ್ಟದಲ್ಲಿ ಇಂದು ಹನೂರು  ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ
ಚಾಮರಾಜನಗರ

ಮ.ಬೆಟ್ಟದಲ್ಲಿ ಇಂದು ಹನೂರು ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ

February 21, 2019

ಕೊಳ್ಳೇಗಾಲ: ಹನೂರು ತಾಲೂಕಾಗಿ ಘೋಷಣೆಗೊಂಡ ಬಳಿಕ ಮಲೆಮಹ ದೇಶ್ವರರ ಸನ್ನಿ ಧಿಯಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.21 ರಂದು ಜರುಗಲಿದ್ದು, ಅದಕ್ಕಾಗಿ ಸಾಹಿತ್ಯ ಪರಿ ಷತ್ ಅಗತ್ಯ ಸಿದ್ದತೆ ಕೈಗೊಂಡಿದೆ.

ಪ್ರಥಮ ಸಮ್ಮೇಳನಕ್ಕೆ ಸರ್ವಾಧ್ಯಕ್ಷ ಡಾ.ಕೇಶವನ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಫೆ.21ರ ಬೆಳಗ್ಗೆ ದ್ವಜಾ ರೋಹಣ ಜರುಗಲಿದ್ದು, ತಹಸಿಲ್ದಾರ್ ನಾಗರಾಜು, ಹನೂರು ಅಧ್ಯಕ್ಷ ಶ್ರೀನಿವಾಸ ನಾಯ್ಡು. ವೃತ್ತ ನಿರೀಕ್ಷಕ ಮಹೇಶ್ ಸಮ್ಮುಖದಲ್ಲಿ ರಾಷ್ಟ್ರದ್ವಜ, ಕನ್ನಡ ಧ್ವಜ ಹಾಗೂ ಪರಿಷತ್ತಿನ ದ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 9 ಗಂಟೆಗೆ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು ಮೆರವಣಿಗೆಗೆ ತಾಪಂ ಅಧ್ಯಕ್ಷ ರಾಜೇಂದ್ರ ಚಾಲನೆ ನೀಡುವರು. ದೇವಾಲಯದ ಆವ ರಣದಿಂದ ಸರ್ವಾಧ್ಯಕ್ಷ ಡಾ.ಕೇಶವನ್ ಪ್ರಸಾದ್ ಅವರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ಕಲಾ ತಂಡಗಳ ಸಮೇತ ಮೆರ ವಣಿಗೆ ನಡೆಸಲಾಗುವುದು.

10-30ಕ್ಕೆ ಕಾರ್ಯಕ್ರಮ ಉದ್ಘಾಟನೆ ಜರುಗಲಿದ್ದು, ಅಂತರ್ ರಾಷ್ಟ್ರೀಯ ಕಲಾ ವಿದರಾದ ಡಾ. ಅಪ್ಪಗೆರೆ ತಿಮ್ಮರಾಜು ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ಸಾಲೂರು ಮಠದ ಗುರುಸ್ವಾಮಿಜಿ, ಹನೂರು ಶಾಸಕರೂ ಆಹಾರ ನಿಗಮದ ಅಧ್ಯಕ್ಷರೂ ಆದ ಆರ್ ನರೇಂದ್ರ. ಜಿಲ್ಲಾ ಧ್ಯಕ್ಷ ಬಿಎಸ್ ವಿನಯ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು. ಮಧ್ಯಾಹ್ನ 12ಗಂಟೆಗೆ ವಿಚಾರಗೋಷ್ಠಿ ಜರುಗಲಿದ್ದು ಗಡಿ ಪ್ರದೇಶದಲ್ಲಿ ಭಾಷೆ ಮತ್ತು ಶಿಕ್ಷಣ ಕುರಿತ ಸಮಸ್ಯೆ, ಸವಾಲುಗಳ ಕುರಿತು ಕನ್ನಡ ಪ್ರಾದ್ಯಾಪಕರಾದ ಸೇಸುನಾಥನ್ ವಿಚಾರ ಮಂಡಿಸುವರು.

ಜನಸಾಮಾನ್ಯರ ದೈವ ಮಹದೇಶ್ವರ ವಿಚಾರ ಕುರಿತು ಗೋಪಿನಾಥಂ ಶಾಲೆಯ ಡಾ.ಮಹೇಂದ್ರ ಪಟೇಲ್ ವಿಚಾರ ಮಂಡಿ ಸುವರು. ಮದ್ಯಾಹ್ನ 2ಗಂಟೆಗೆ ಕವಿಗೋಷ್ಠಿ, 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು ಹೆಸರಾಂತ ಕವಿ ಜಯಪ್ಪ ಹೊನ್ನಾಳಿ ಸಮಾರೋಪ ಬಾಷಣ ಮಂಡಿ ಸಲಿದ್ದಾರೆ. ಸಂಸದ ಆರ್.ಧ್ರುವನಾರಾ ಯಣ್, ಮಾಜಿ ಶಾಸಕಿ ಪರಿಮಳಾ ನಾಗಪ್ಪ. ಗ್ರಾಪಂ ಮಾಜಿ ಅಧ್ಯಕ್ಷ ಮಹ ದೇವಪ್ರಸಾದ್. ಮಾದಯ್ಯ ತಂಬಡಿ ಸೇರಿ ದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳುವರು. ಸಮಾರಂಭದಲ್ಲಿ ಸಾಹಿತಿ ಮಾದಪ್ಪ, ಡಾ.ಭಾರತಿ, ಮೋಹನ್ ಕುಮಾರ್, ಗೋಪಿ ನಾಥಂ ರಂಗಸ್ವಾಮಿ ಸೇರಿದಂತೆ ಹಲವು ಸಾಧಕ ಗಣ್ಯರ ಸನ್ಮಾನಿಸಲಾಗುವುದು ಎಂದು ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.

 

 

Translate »