ನಾಳೆ ಶ್ರುತಿ ವಿಶ್ವನಾಥ್‍ರ `ವಿಠ್ಠು ಮಾeóÁ’  ವಾರಕರಿ ಅಭಂಗ್ ಹಾಡುಗಳ ಪ್ರಸ್ತುತಿ
ಮೈಸೂರು

ನಾಳೆ ಶ್ರುತಿ ವಿಶ್ವನಾಥ್‍ರ `ವಿಠ್ಠು ಮಾeóÁ’ ವಾರಕರಿ ಅಭಂಗ್ ಹಾಡುಗಳ ಪ್ರಸ್ತುತಿ

March 1, 2019

ಮೈಸೂರು: ಗಾನಭಾರತೀ ಸಂಸ್ಥೆಯು ಇಂಡಿಯನ್ ಫೌಂಡೇ ಷನ್ ಫಾರ್ ಆಟ್ರ್ಸ್ ಸಹಯೋಗದಲ್ಲಿ ಮೈಸೂರಿನಲ್ಲಿ ಮಾ.2ರಂದು ಸಂಜೆ 6 ಗಂಟೆಗೆ ಪ್ರಸಿದ್ಧ ಮರಾಠಿ ವಾರಕರಿ ಕವಯತ್ರಿಯರ ಹಾಡುಗಳನ್ನು ಆಧರಿಸಿದ `ವಿಠ್ಠು ಮಾeóÁ’ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಖ್ಯಾತ ಗಾಯಕಿ ಶ್ರುತಿ ವಿಶ್ವನಾಥ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಅವ ರೊಂದಿಗೆ ಗಿಟಾರ್‍ನಲ್ಲಿ ಹಿತೇಶ್ ದುಟಿಯಾ, ತಬಲಾದಲ್ಲಿ ವಿನಾಯಕ್ ನೇಟ್ಕೆ ಸಾಥ್ ನೀಡಲಿದ್ದಾರೆ. ಗಾನಭಾರತಿಯ ರಮಾಬಾಯಿ ಗೋವಿಂದರಾವ್ ಸಭಾಂಗಣದಲ್ಲಿ ಕಾರ್ಯ ಕ್ರಮ ನಡೆಯಲಿದೆ. ಶ್ರುತಿ ವಿಶ್ವನಾಥ್ ಅವರು ಸಂಗೀತಗಾರ್ತಿ ಹಾಗೂ ಸಂಯೋಜಕಿ. 20 ವರ್ಷಗಳ ಕಾಲ ಸಂಗೀತ ಕಲಾ ಚಾರ್ಯ ಬಿ.ಕೃಷ್ಣಮೂರ್ತಿಯವರಲ್ಲಿ ಹಾಗೂ ಕೋಮಂದೂರಿ ಶೇಷಾದ್ರಿ ಅವರಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದಾರೆ. ಕಬೀರರ ಸಂಗೀತದ ಮೋಡಿಗೆ ಮರುಳಾಗಿ, ಅನುಭಾವ ಕಾವ್ಯದ ಜಗತ್ತಿನತ್ತ ಹೊರಳಿದ ಶ್ರುತಿ ಅಭಂಗ್, ನಿರ್ಗುಣಿ ಪದ್ಯಗಳನ್ನು ಹಾಗೂ ದಾಸರ ಪದಗಳನ್ನು ದೇಶ ವಿದೇಶಗಳಲ್ಲಿ, ಮುಂಬೈಯ ಕಬೀರ್ ಉತ್ಸವ, ವಿಯನ್ನಾದಲ್ಲಿ ಫೋರಂ ಫಾರ್ ಇಂಡಿಯಾ ಹೀಗೆ ಹಲವು ವೇದಿಕೆಗಳಲ್ಲಿ ಹಾಡಿದ್ದಾರೆ. ವಾರಕರಿ ಸಂಪ್ರದಾಯದಲ್ಲಿ ಭಕ್ತಿ ಎನ್ನುವುದು ವಿವಿಧ ರೀತಿಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಸಂಪ್ರದಾಯ ಮೀರಿದ ಜನಾಬಾಯಿಯ ಭಕ್ತಿ, ಅವೂ ಬಾಯಿಯ ವಿರಾಕಾರ ಭಕ್ತಿ, ಕನ್ಲೋಪಾತ್ರಳ ಹೃದಯ ಕರಗಿಸುವ ಮೊರೆ, ಮುಕ್ತಾಬಾಯಿಯ ಒಗಟುಗಳು, ಗೋನಾ ಬಾಯಿ ಆಕ್ಷೇಪಣೆಗಳು ಹೀಗೆ ಈ ಮಹಿಳೆಯರು ತಮ್ಮದೇ ಆದ ರೀತಿಂiÀಲ್ಲಿ ಭಕ್ತಿಯನ್ನು ಅಭಿವ್ಯಕ್ತಿಸಿದ್ದಾರೆ. ಈ ಬಗ್ಗೆ ಆಳವಾದ ಸಂಶೋಧನೆ ಮಾಡಿರುವ ಶ್ರುತಿ ಇದರ ಪ್ರಸ್ತುತಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ.

Translate »