ಮೈಸೂರು: ಮಾರ್ಚ್ 2ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 2019-20ನೇ ಸಾಲಿನ ಬಜೆಟ್ ಮಂಡನೆ ಯಾಗಲಿದೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ಮುಡಾ ಕಚೇರಿ ಸಭಾಂ ಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಆಯುಕ್ತ ಪಿ.ಎಸ್.ಕಾಂತರಾಜು ಅವರು 2019-20ನೇ ಸಾಲಿನ ಆಯವ್ಯಯ ಮಂಡನೆ ಮಾಡುವರು. ಮುಡಾ ಸದಸ್ಯರಾದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕರಾದ ತನ್ವೀರ್‍ಸೇಠ್, ಎಲ್.ನಾಗೇಂದ್ರ, ರವೀಂದ್ರ ಶ್ರೀಕಂಠಯ್ಯ, ಎಸ್.ಎ.ರಾಮದಾಸ, ಬಿ.ಹರ್ಷವರ್ಧನ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಸಂದೇಶನಾಗರಾಜ್, ಕಾರ್ಪೋ ರೇಟರ್ ಎಸ್‍ಬಿಎಂ ಮಂಜು ಸೇರಿದಂತೆ ಹಲವು ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವರು. ಮುಖ್ಯ ಲೆಕ್ಕಾಧಿಕಾರಿ ಎನ್ ಮುತ್ತು, ಸೂಪರಿಂಟೆಂಡಿಂಗ್ ಇಂಜಿನಿ ಯರ್ ಬಿ.ಕೆ.ಸುರೇಶ ಬಾಬು, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ್ ಸೇರಿದಂತೆ ಹಲವು ಮುಡಾ ಅಧಿಕಾರಿಗಳು ಆಯ-ವ್ಯಯ ಸಭೆಯಲ್ಲಿ ಹಾಜರಿರುವರು.
