ಪಾಲಿಬೆಟ್ಟದಲ್ಲಿ ಔಷಧಿ ಕಿಟ್ ವಿತರಣೆ
ಕೊಡಗು

ಪಾಲಿಬೆಟ್ಟದಲ್ಲಿ ಔಷಧಿ ಕಿಟ್ ವಿತರಣೆ

March 4, 2019

ಗೋಣಿಕೊಪ್ಪಲು: ಅಲೋಪತಿ ವೈದ್ಯರುಗಳು ಬರಲು ನಿರಾಕರಿಸುತ್ತಿದ್ದು, ಹೆಚ್ಚಿನ ಭಾಗದಲ್ಲಿ ಆಯುಷ್ ವೈದ್ಯ ರುಗಳು ಕಾರ್ಯನಿರ್ವಹಿಸುತ್ತಿರುವುದ ರಿಂದ ಸರ್ಕಾರಿ ಆಸ್ಪತ್ರೆಗಳಲ್ಲೂ ಆಯುಷ್ ಔಷಧಿ ವಿತರಣೆ ಮಾಡಿದರೆ ಉತ್ತಮ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್ ಅಭಿಪ್ರಾಯಪಟ್ಟರು.

ಸಮೀಪದ ಪಾಲಿಬೆಟ್ಟ ಸಮುದಾಯ ಭವನದಲ್ಲಿ ಮೈಸೂರು ಸರ್ಕಾರಿ ಅಯು ರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಪಾಲಿ ಬೆಟ್ಟ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಯುಷ್ ವೈದ್ಯರು ಲಭ್ಯವಿರುವ ಕೇಂದ್ರ ಗಳಲ್ಲಿ ಅಲೋಪತಿ ಔಷಧಿಗಳನ್ನೇ ರೋಗಿ ಗಳಿಗೆ ನೀಡಬೇಕಾದ ಅನಿವಾರ್ಯತೆ ಎದು ರಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೂ ಅಗತ್ಯ ಅಯುರ್ವೇದ ಔಷಧಿ ವಿತರಣೆ ಮಾಡು ವಂತಾಗಬೇಕು ಎಂದರು.ಮೈಸೂರು ಅಯುರ್ವೇದ ಕಾಲೇಜಿನ ಡಾ. ಮೈತ್ರಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಪುಲಿಯಂಡ ಬೋಪಣ್ಣ ರೂ.2 ಸಾವಿರ ಮೌಲ್ಯದ ಔಷಧಿ ಕಿಟ್ ಅನ್ನು ಫಲಾನುಭವಿಗಳಿಗೆ ವಿತರಿಸುವ ಮೂಲಕ ಉದ್ಘಾಟಿಸಿದರು. ಮೈಸೂರು ಆಯು ರ್ವೇದ ಕಾಲೇಜಿನ ವೈದ್ಯರಾದ ಡಾ.ರಾಮ ಲಿಂಗ ಹುಗಾರ್, ಡಾ.ಆಶಾ, ಡಾ.ಪ್ರಫುಲ್ಲಾ, ಡಾ.ಉಮಾ, ಡಾ.ಚೈತ್ರ, ಡಾ.ರೋಹಿತ್, ಕಾವ್ಯ, ತಾರಾ, ಹರ್ಷಿತಾ ಪಾಲ್ಗೊಂಡಿದ್ದರು.

Translate »