ಮಡಿಕೇರಿ: ಲೋಕಸಭಾ ಚುನಾ ಚಣೆಗೆ ಸದ್ಯದಲ್ಲಿಯೇ ದಿನಾಂಕ ಪ್ರಕಟವಾಗ ಲಿದ್ದು, ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಭಾಗವಹಿಸುವುದರಿಂದ ಉತ್ತಮ ಹಾಗೂ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯವಾಗುತ್ತದೆ.
ಈ ಹಿನ್ನೆಲೆಯಲ್ಲಿ ಮತದಾರರು ಕಡ್ಡಾಯ ವಾಗಿ ಮತದಾನ ಮಾಡಲು ಹಾಗೂ ಮತ ದಾನದ ಮಹತ್ವದ ಕುರಿತು ವಿಶೇಷ ಜಾಗೃತಿ ಮೂಡಿಸಲು ಮತದಾರರ ನೋಂದಣಿ ಅಭಿಯಾನ ಹಾಗೂ ಮತದಾನ ಜಾಗೃತಿ ಜಾಥ ವಿಶೇಷ ಅಭಿಯಾನವು ಮಾ.5 ರಿಂದ 12 ರವರೆಗೆ ನಡೆಯಲಿದೆ ಎಂದು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಮಾ.5 ರಂದು ಮಡಿಕೇರಿ, 6 ರಂದು ಸೋಮವಾರಪೇಟೆ, 7 ರಂದು ವಿರಾಜ ಪೇಟೆ ತಾಲೂಕು ಮಟ್ಟದಲ್ಲಿ ಆಯಾಯ ದಿನಗಳಂದು ಬೆಳಗ್ಗೆ 11 ಗಂಟೆಯಿಂದ ಮತ ದಾರರ ನೋಂದಣಿ, ಜಾಗೃತಿ ಜಾಥಾ ಜರು ಗಲಿದೆ. ಹಾಗೆಯೇ ವಿದ್ಯುನ್ಮಾನ ಮತ ಯಂತ್ರ ಕುರಿತಂತೆ ಮಾಹಿತಿ ನೀಡುವುದು ಜೊತೆಗೆ ಅಣಕು ಮತದಾನ ನಡೆಯಲಿದೆ ಎಂದು ಜಿಪಂ ಸಿಇಒ ಹೇಳಿದರು.
ಮಾ.8 ರಂದು ಮಡಿಕೇರಿ, ಮಾ.11 ರಂದು ಸೋಮವಾರಪೇಟೆ ಮತ್ತು ಮಾ.12 ರಂದು ವಿರಾಜಪೇಟೆ ತಾಲೂಕುಗಳ ತಾಪಂ ವ್ಯಾಪ್ತಿಯ ಎಲ್ಲಾ ಗಾಪಂಗಳಲ್ಲಿ ಮತದಾರರ ನೋಂದಣಿ ಮತ್ತು ಜಾಗೃತಿ ಜಾಥಾ ನಡೆಯಲಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದರು. ಮತದಾ ನದ ಮಹತ್ವ ಕುರಿತು ವಿವಿಧ ಜಾಗೃತಿ ಕಾರ್ಯ ಕ್ರಮದಲ್ಲಿ ಗ್ರಾಪಂ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು, ಬಿಎಜಿ ಸದಸ್ಯರು, ಸ್ಥಳೀಯ ಆಶಾ, ಅಂಗನವಾಡಿ ಕಾರ್ಯ ಕರ್ತೆಯರು, ಶಾಲಾ ಮುಖ್ಯೋಪಾಧ್ಯಾ ಯರು ಮತ್ತು ಶಿಕ್ಷಕರು ಹಾಗೂ ಇತರೆ ಕ್ಷೇತ್ರ ಮಟ್ಟದ ಅಧಿಕಾರಿ, ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿ ಪ್ರಿಯ ಅವರು ತಿಳಿಸಿದ್ದಾರೆ.