ಚಿಣ್ಣರೊಂದಿಗೆ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಸಂವಾದ
ಮೈಸೂರು

ಚಿಣ್ಣರೊಂದಿಗೆ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಸಂವಾದ

April 22, 2019

ಮೈಸೂರು: ನಿಮ್ಮ ಸಾಧನೆಗೆ ಸ್ಫೂರ್ತಿ ಯಾರು?. ಡ್ರೋಣ್ ನೀವೇ ಕಂಡು ಹಿಡಿದರಾ?. ಅದು ಎಷ್ಟು ಹೊತ್ತು ಕೆಲಸ ಮಾಡುತ್ತದೆ ಎಂಬಿತ್ಯಾದಿ ಚಿಣ್ಣರ ಮುಗ್ಧ ಪ್ರಶ್ನೆಗಳಿಗೆ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್, ಡ್ರೋಣ್ ನಿರ್ಮಾಣ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿಸುವ ಜತೆಗೆ ಜೀವನ ಪೂರ್ತಿ ಪ್ರಶ್ನೇ ಯನ್ನೇ ಕೇಳುತ್ತೀರಾ?. ಸಾಧನೆಗೈಯ್ಯುತ್ತೀರಾ? ಎಂದು ಮರುಪ್ರಶ್ನಿಸಿದ್ದಕ್ಕೆ ಸಾಧನೆಗೈಯ್ಯುತ್ತೇವೆ ಎಂಬ ಚಿಣ್ಣರ ಒಕ್ಕೂರಲಿನ ಕೂಗು ಎಲ್ಲರನ್ನು ಒಮ್ಮೆ ಆಶ್ಚರ್ಯಚಕಿತರನ್ನಾಗಿಸಿತು.

ರಂಗಾಯಣದ ಚಿಣ್ಣರ ಮೇಳದಲ್ಲಿ ಭಾನು ವಾರ ಆಯೋಜಿಸಿದ್ದ ಚಿಣ್ಣರೊಂದಿಗೆ ಸಂವಾದ ದಲ್ಲಿ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್‍ಗೆ ಚಿಣ್ಣರು ತಮಗೆ ಅನಿಸಿದ್ದ ಪ್ರಶ್ನೆಗಳ ಸುರಿಮಳೆಗೈದರು. ಈ ವೇಳೆ ಪ್ರತಾಪ್, ಚಿಣ್ಣರಿಗೆ ಅರ್ಥವಾಗುವ ರೀತಿಯಲ್ಲೇ ಡ್ರೋಣ್ ನಿರ್ಮಾಣ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿಸಿದರಲ್ಲದೆ, ನನ್ನ ಸಾಧನೆಗೆ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರೇ ಸ್ಫೂರ್ತಿ ಎಂದು ಸ್ಮರಿಸಿದರು.

ಬಡ ಕುಟುಂಬ: ನಮ್ಮದು ಬಡ ಕುಟುಂಬ. ಬಹಳ ಶ್ರಮಪಟ್ಟು ಅಧ್ಯಯನ ಮಾಡಿದೆ. ವಿದ್ಯಾ ಭ್ಯಾಸದ ನಂತರ ಕಾಲೇಜೊಂದಕ್ಕೆ ಬೋಧನೆ ಮಾಡಲು ಸುಮಾರು 6 ಕಿಮೀ ನಡೆದುಕೊಂಡೇ ಹೋಗುತ್ತಿದ್ದೆ. ಆಗ ನನಗೆ 20 ರೂ. ಸಂಬಳ ನೀಡುತ್ತಿದ್ದರು. ಆ ಹಣವನ್ನು ಕೂಡಿಟ್ಟು, ನನ್ನ ಕನಸಿನ ಡ್ರೋಣ್ ನಿರ್ಮಾಣಕ್ಕೆ 700 ರೂ. ಜೋಡಿಸಿದೆ ಎಂದು ಭಾವುಕರಾಗಿ ನುಡಿದರು.

ಪೋಷಕರು, ಗೆಳೆಯರು, ಸಂಬಂಧಿಕರು ನಮ್ಮ ಕೈ ಬಿಡಬಹುದು. ಆದರೆ, ಯಾವುದೇ ಕೆಲಸವನ್ನು ಮಾಡುವಾಗ ನಮ್ಮ ಸಾಧನೆಯ ಮೇಲೆ ನಂಬಿಕೆ, ಗುರಿಯಿಡಬೇಕು. ಅದನ್ನು ನನಸು ಮಾಡಲು ಶ್ರಮಿಸಬೇಕು. ಯಾರೊಬ್ಬರೂ ಸಹಾಯ ಮಾಡಲಿಲ್ಲ ಎಂದು ದೂಷಿಸಬಾರದು. ಸಾಧಿಸುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಚಿಣ್ಣರಿಗೆ ಸಲಹೆ ನೀಡಿದರು.

ಪ್ರಶ್ನಿಸುತ್ತೀರಾ?. ಸಾಧನೆಗೈಯ್ಯುತ್ತೀರಾ?: ಜೀವನ ಪೂರ್ತಿ ಪ್ರಶ್ನೆಯನ್ನೇ ಕೇಳುತ್ತೀರಾ?. ಅಥವಾ ಸಾಧನೆಗೈಯ್ಯುತ್ತೀರಾ? ಎಂಬ ಮಾತಿಗೆ ಚಿಣ್ಣರು, ಸಾಧನೆಗೈಯ್ಯುತ್ತೇವೆ ಎಂದು ಹೇಳಿದರು. ಆಗ ಪ್ರತಾಪ್, ಹೌದು. ಮಾತು, ಪ್ರಶ್ನೆಗಿಂತ ಪ್ರಾಯೋ ಗಿಕ ಕಾರ್ಯ ಮುಖ್ಯ. ಸಮಸ್ಯೆಗಳನ್ನು ಎದುರಿ ಸುವ ಛಲ, ಆತ್ಮವಿಶ್ವಾಸ ಬೆಳೆಸಿಕೊಂಡು ಸಾಧನೆ ಗೈಯ್ಯಬೇಕು. ಗೆಲುವು ಹೇಗಿರಬೇಕೆಂದರೆ ನಿಮ್ಮನ್ನು ಹೀಯಾಳಿಸಿದವರೂ ತಿರುಗಿ ನೋಡು ವಂತಿರಬೇಕು ಎಂದು ತಿಳಿಸಿದರು.

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ವ್ಯಾಪಕವಾಗಿ ಅಭಿವೃದ್ಧಿ ಯಾಗುತ್ತಿದ್ದು, ಈ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸುತ್ತಿರುವುದರಿಂದ ಕೆಲವು ವಿಷಯಗಳ ಕುರಿತು ಸಲಹೆಗಳನ್ನು ನೀಡಲು ಅನುಕೂಲ ವಾಗಿದೆ. ನಾವು ದೇಶದಲ್ಲಿಯೇ ಇದ್ದು, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಪ್ರತಾಪ್‍ನನ್ನು ಸುತ್ತುವರಿದ ಚಿಣ್ಣರು: ಸಂವಾದ ಮುಗಿದ ನಂತರ ಪ್ರತಾಪ್ ಚಿಣ್ಣರೊಟ್ಟಿಗೆ ಬೆರೆತು ಸಂತಸಪಟ್ಟರು. ಚಿಣ್ಣರು ಪ್ರತಾಪ್‍ನನ್ನು ಸುತ್ತು ವರೆದು ಅಪ್ಪಿಕೊಂಡರು. ಈ ವೇಳೆ ವಿಜ್ಞಾನಿ ಕಣ್ಣಲ್ಲಿ ಆನಂದ ಭಾಷ್ಪ ಜಿನುಗಿತು. ನಂತರ ಚಿಣ್ಣರು ಪೋಷಕ ರೊಡಗೂಡಿ ಪ್ರತಾಪ್‍ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಮಾತನಾಡಿ, ಈಗಾಗಲೇ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್, ತಮ್ಮ ಸಾಧನೆ ಮೂಲಕ ಗುರುತಿಸಿ ಕೊಂಡಿದ್ದು, ಅವರ ಮಾತುಗಳು ಮಕ್ಕಳಿಗೆ ಪ್ರೇರೇಪಣೆ ಯಾಗಲಿ ಎಂಬುದು ನಮ್ಮ ಆಶಯ ಎಂದರು.
ನಾವು ತಿಳಿದುಕೊಳ್ಳಬೇಕಿರುವುದು ಸಾಗರದ ಷ್ಟಿದ್ದು, ಎಲ್ಲವೂ ನಮಗೆ ತಿಳಿದಿದೆ ಎಂದು ಹೇಳ ಲಾಗುವುದಿಲ್ಲ. ತಿಳಿಯದ ಎಷ್ಟೋ ವಿಷಯ ಗಳಿವೆ. ಇಂದು ಪ್ರತಾಪ್ ಅವರನ್ನು ಸ್ಪೂರ್ತಿ ಯಾಗಿ ತೆಗೆದುಕೊಂಡು ಸಾಧನೆಗೈಯ್ಯಬೇಕು ಎಂದು ಹೇಳಿದರು. ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿ ಕಾರ್ಜುನಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಸಂವಾದ: ಏ.25ರಂದು ಪ್ರೇರಣಾ ಆಸ್ಪತ್ರೆ ನಿರ್ದೇ ಶಕರು ಆದ ಮನೋವೈದ್ಯ ಡಾ.ಅಭಿಜಿತ್, ಏ.26ರಂದು ಮಕ್ಕಳ ಸಾಹಿತಿ ಆನಂದ ವ.ಪಾಟೀಲ, ಏ.27ರಂದು ಕ್ರೀಡಾಪಟು ತನ್ವಿ ಜಗದೀಶ್ ಅವರು ಚಿಣ್ಣರೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ.

Translate »