ಕಿರಿಯ ವಕೀಲರಿಗೆ ಪ್ರೋತ್ಸಾಹ ಧನ ಕಲ್ಪಿಸಿ
ಮೈಸೂರು

ಕಿರಿಯ ವಕೀಲರಿಗೆ ಪ್ರೋತ್ಸಾಹ ಧನ ಕಲ್ಪಿಸಿ

April 28, 2019

ಮೈಸೂರು:ಕಾನೂನು ವಿದ್ಯಾಭ್ಯಾಸ ಮುಗಿಸಿ ವಕೀಲ ವೃತ್ತಿ ಆರಂಭಿಸುವ ಕಿರಿಯ ವಕೀಲರಿಗೆ, ಹಿರಿಯ ವಕೀಲರು ಪ್ರೊತ್ಸಾಹ ಧನ ನೀಡ ಬೇಕು ಎಂದು ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುರೇಶ್ ಕೆ.ವಂಟಿ ಗೋಡಿ ಸಲಹೆ ನೀಡಿದರು.

ಮೈಸೂರು ಜಿಲ್ಲಾ ನ್ಯಾಯಾಲಯ ವಕೀಲ ಸಂಘದ ಆವರಣದಲ್ಲಿ ಆಯೋ ಜಿಸಿದ್ದ ವಾರ್ಷಿಕ ಬೇಸಿಗೆ ರಜಾ ದಿನದ ಸಮಾರೋಪ ಸಮಾರಂಭದಲ್ಲಿ ಮಾತ ನಾಡಿದರು. ಉತ್ತರ ಕರ್ನಾಟಕದ ಬೆಳ ಗಾವಿ, ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಹಿರಿಯ ವಕೀಲರ ಬಳಿ ವಕೀಲ ವೃತ್ತಿ ಆರಂಭಿಸುವ ಯುವಕರಿಗೆ ಕಳೆದ 15 ವರ್ಷಗಳ ಹಿಂದೆಯೇ 2 ರಿಂದ 3 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದರು. ಈ ವ್ಯವಸ್ಥೆ ಮೈಸೂರಲ್ಲೂ ಜಾರಿಗೆ ಬಂದರೆ ಉತ್ತಮ ಎಂದರು.

ಕಾನೂನು ಪದವಿ ಮುಗಿಸಿ, ವಕೀಲಿ ವೃತ್ತಿಗೆ ಬರುವ ಯುವಕರಿಗೆ ಪ್ರತಿದಿನದ ನಿರ್ವಹಣೆಗೆ ಮನೆಯಲ್ಲಿ ಹಣ ಕೇಳು ವಂತಾದರೆ, ಆ ವೃತ್ತಿ ಬಗ್ಗೆ ಮನೆಗಳಲ್ಲಿ ಬೇಸರ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಹಿರಿಯ ವಕೀಲರು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯುವ ವಕೀಲರ ನಿತ್ಯದ ವೆಚ್ಚಕ್ಕಾದರೂ ಸ್ವಲ್ಪ ಪ್ರಮಾಣದ ಪ್ರೋತ್ಸಾಹ ಧನ ನೀಡುವಂತೆ ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಯುವ ವಕೀಲ ರಿಗೆ ನ್ಯಾಯಾಲಯದ ಕಾರ್ಯ ಕಲಾ ಪದ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಆಸಕ್ತಿ ತೋರುತ್ತಿಲ್ಲ ಹಾಗೂ ಗ್ರಂಥಾಲಯದಲ್ಲಿ ಹಿಂದಿನ ವಿವಿಧ ಪ್ರಕರಣಗಳ ತೀರ್ಪು ಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿಲ್ಲ. ಆದ್ದರಿಂದ ಜೀವನದಲ್ಲಿ ಉತ್ತಮ ವಕೀಲ ರಾಗಬೇಕಾದರೆ, ಹಿರಿಯರ ಮಾರ್ಗದರ್ಶನ, ಜ್ಞಾನಾರ್ಜನೆ ಅವಶ್ಯಕ ಎಂದರು.

ನ್ಯಾಯಾಲಯದ ಕಲಾಪದ ವೇಳೆ ಬೇಡದ ವಿಷಯಗಳಿಗೆ ಯುವಕರು ಕಾಲ ಹರಣ ಮಾಡುತ್ತ, ಹರಟೆ ಹೊಡೆಯು ತ್ತಾರೆ. ಈ ವೇಳೆಯನ್ನು ತಮ್ಮ ಕಕ್ಷಿದಾ ರರಿಗೆ ನ್ಯಾಯ ಒದಗಿಸಲು ಮೀಸಲಿಟ್ಟರೆ ಒಳ್ಳೆಯದು. ಆದ್ದರಿಂದ ಯುವಕರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ವಕೀಲರಾಗಿ ಬೆಳೆಯ ಬೇಕಾದರೆ, ಸಮಯಕ್ಕೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಕೋರ್ಟ್ ಆವರಣದಲ್ಲಿ ಹಿರಿಯ ವಕೀಲರು, ನ್ಯಾಯಾ ದೀಶರಿಗೆ ಗೌರವ ಕೊಡುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಈ ವೇಳೆ ಮೈಸೂರು ಜಿಲ್ಲಾ ನ್ಯಾಯಾಲಯ ದಿಂದ ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾದ ನ್ಯಾಯಾಧೀಶರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್, ಕರ್ನಾಟಕ ವಕೀಲರ ಪರಿಷತ್ ಸದಸ್ಯ ಬಿ.ಆರ್.ಚಂದ್ರ ಮೌಳಿ, ಕಾರ್ಯದರ್ಶಿ ಬಿ.ಶಿವಣ್ಣ, ಉಪಾಧ್ಯಕ್ಷ ಎಸ್.ಜಿ.ಶಿವಣ್ಣೇಗೌಡ, ಜಂಟಿ ಕಾರ್ಯದರ್ಶಿ ಗಳಾದ ಸಿ.ಕೆ.ರುದ್ರಮೂರ್ತಿ, ಎಂ.ಮನೋನ್ಮಣಿ, ಖಜಾಂಚಿ ಜಿ.ಪಿ.ಚಂದ್ರಶೇಖರ್ ಉಪಸ್ಥಿತರಿದ್ದರು.

Translate »