ನೈಸರ್ಗಿಕ ವಿಕೋಪ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅವಶ್ಯ
ಮೈಸೂರು

ನೈಸರ್ಗಿಕ ವಿಕೋಪ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅವಶ್ಯ

April 28, 2019

ಮೈಸೂರು: ನೈಸರ್ಗಿಕ ವಿಕೋಪ ಸಂಭವಿಸಿದರೆ, ಅದರ ತ್ವರಿತ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅತ್ಯಾವ ಶ್ಯಕ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ತಂತ್ರಜ್ಞಾನ ಬಳಕೆಯಲ್ಲಿ ನಿಪುಣರಾಗಿರ ಬೇಕು ಎಂದು ಎಟಿಐ ವಿಪತ್ತು ನಿರ್ವ ಹಣಾ ತರಬೇತಿ ಕೇಂದ್ರದ ನಿರ್ದೇಶಕ ಡಾ.ಅಶೋಕ ಸಂಗನಾಳ್ ತಿಳಿಸಿದ್ದಾರೆ.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿಕೋಪ ನಿರ್ವಹಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ವಿಕೋಪ ನಿರ್ವ ಹಣಾ ಕ್ರಿಯಾ ಯೋಜನೆಯ ಪರಿಷ್ಕರಣೆ ಮತ್ತು ತಯಾರಿಕೆ’ ಕುರಿತ 3 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತ ನಾಡಿದರು. ಎನ್‍ಡಿಎಂಎ ಮಾರ್ಗ ಸೂಚಿ ಪ್ರಕಾರವೇ ವಿಕೋಪ ನಿರ್ವಹಣಾ ಕ್ರಿಯಾ ಯೋಜನೆ ತಯಾರಿಕೆ ಮತ್ತು ಪರಿಷ್ಕರಣೆ ಮಾಡಬೇಕು. ಡಿಡಿಎಂಪಿ ನಮೂನೆಯನ್ನು ಭರ್ತಿಮಾಡುವ ಮೂಲಕ ವಿಕೋಪ ನಿರ್ವಹಣಾ ಕಾಯ್ದೆ 2005ರ ಪ್ರಾಮುಖ್ಯತೆ ಯನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿಕೊಟ್ಟರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ. ಶಿವಕುಮಾರ್ ಮಾತನಾಡಿ, ನೈಸರ್ಗಿಕ ವಿಕೋಪಗಳಾದ ಬರ, ನೆರೆ ಹಾವಳಿ, ಭೂಕಂಪ, ಭೂ ಕುಸಿತ, ಪ್ರವಾಹ ವಿಷಯಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿ ಮತ್ತು ನೈಸರ್ಗಿಕ ವಿಕೋಪ ನಿರ್ವಹಣೆಗೆ ಅಳವಡಿಸಿಕೊಳ್ಳಬೇಕಾದ ಅತ್ಯಾ ಧುನಿಕ ಉಪಕರಣಗಳ ಮಾಹಿತಿಯನ್ನು ಪವರ್ ಪಾಯಿಂಟ್ ಮೂಲಕ ತಿಳಿಸಿ ಕೊಟ್ಟರು. ಏ.25 ರಿಂದ 27 ರವರೆಗೆ ನಡೆದ 3 ದಿನಗಳ ಜಿಲ್ಲಾ ವಿಕೋಪ ನಿರ್ವ ಹಣಾ ಕ್ರಿಯಾ ಯೋಜನೆಯ ಪರಿಷ್ಕರಣೆ ಹಾಗೂ ತಯಾರಿಕೆ’ ಕಾರ್ಯಾಗಾರದಲ್ಲಿ 13 ಜಿಲ್ಲೆಗಳ ವಿಕೋಪ ನಿರ್ವಹಣಾ ತಜ್ಞರು, ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಈ ಜಿಲ್ಲೆಗಳಿಂದ ಭಾಗವಹಿಸಿದ್ದ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ಗಳು ಜಿಲ್ಲಾವಾರು ಡಿಡಿಎಂಪಿ ಯೋಜ ನೆಯ ಪರಿಷ್ಕರಿಸಿದ ವರದಿಯನ್ನು ಪವರ್ ಪಾಯಿಂಟ್ ಮೂಲಕ ಮಂಡಿಸಿದರಲ್ಲದೆ, ಈ ಹಿಂದೆ ತಯಾರಿಸಿದ ವಿಕೋಪ ನಿರ್ವ ಹಣೆ ಯೋಜನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಕೆಲವು ಬದಲಾವಣೆಗೂ ಶಿಫಾರಸ್ಸು ಮಾಡಲಾಯಿತು.

Translate »