ಇಂದಿನಿಂದ ಸಿಇಟಿ
ಮೈಸೂರು

ಇಂದಿನಿಂದ ಸಿಇಟಿ

April 29, 2019

ಬೆಂಗಳೂರು: ಬೆಂಗಳೂರಿನ 84 ಕೇಂದ್ರ ಸಹಿತ ವಾಗಿ ರಾಜ್ಯದ 431 ಪರೀಕ್ಷಾ ಕೇಂದ್ರಗಳಲ್ಲಿ ಏ.29 ಮತ್ತು 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ. 97,716 ಬಾಲಕರು, 96,585 ಬಾಲಕಿಯರು ಸೇರಿ 1,94,311 ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದಾರೆ.

431 ವೀಕ್ಷಕರು, 862 ವಿಶೇಷ ಜಾಗೃತ ದಳದ ಸದಸ್ಯರು, 431 ಪ್ರಶ್ನೆಪತ್ರಿಕೆ ಪಾಲಕರು, ಸುಮಾರು 9,700 ಕೊಠಡಿ ಮೇಲ್ವಿಚಾರಕರು ಹಾಗೂ ಒಟ್ಟಾರೆ 28,245 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಿಇಟಿ ಪರೀಕ್ಷೆಯ ಮೇಲುಸ್ತುವಾರಿಗಾಗಿ ನೇಮಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಖಜಾನೆಗೆ ಬಿಗಿ ಭದ್ರತೆ: ಪರೀಕ್ಷಾ ದಿನಗಳಂದು ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಮತ್ತು ಪ್ರಶ್ನೆ ಪತ್ರಿಕೆ ಇಟ್ಟಿರುವ ಖಜಾನೆಗಳಿಗೆ ಹೆಚ್ಚಿನ ಪೆÇಲೀಸ್ ಭದ್ರತೆ ನೀಡುವ ಸಂಬಂಧ ಆಯಾ ಜಿಲ್ಲೆಯ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯ ಪೆÇಲೀಸ್ ಮಹಾ ನಿರ್ದೇ ಶಕರಿಗೆ ಪ್ರಾಧಿಕಾರ ಕೋರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪೆÇಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ.

ಕನ್ನಡ, ಇಂಗ್ಲಿಷ್‍ನಲ್ಲಿ ಪ್ರಶ್ನೆ ಮತ್ತು ಉತ್ತರ: ಪ್ರಶ್ನೆಪತ್ರಿಕೆ ಯಲ್ಲಿನ ಪ್ರಶ್ನೆ ಹಾಗೂ ಉತ್ತರಗಳು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುತ್ತವೆ. ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳಲ್ಲಿ ಏನಾದರೂ ಸಂದೇಹ ವಿದ್ದಲ್ಲಿ, ಇಂಗ್ಲಿಷ್ ಭಾಷೆಯಲ್ಲಿರುವ ಪ್ರಶ್ನೆಯನ್ನು ನೋಡಿ ಕೊಳ್ಳಬಹುದು. ಇಂಗ್ಲಿಷ್ ಭಾಷೆಯ ಪ್ರಶ್ನೆಗಳನ್ನು ಅಂತಿಮ ಎಂದು ಪರಿಗಣಿಸಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸ ಲಾಗಿದೆ. ವೇಳಾಪಟ್ಟಿ: ಏ.29ರ ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, ಏ.30ರಂದು ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 1ರಂದು ಬೆಂಗಳೂರು ಕೇಂದ್ರದಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಕನ್ನಡಭಾಷಾ ಪರೀಕ್ಷೆ 50 ಅಂಕದ್ದಾಗಿದ್ದು, ಉಳಿದೆಲ್ಲ ಪರೀಕ್ಷೆ ತಲಾ 60 ಅಂಕಗಳಿಗೆ ಇರುತ್ತದೆ. ಎಚ್ಚರ ವಹಿಸಿ: ಒಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಯ ಪ್ರವೇಶ ಪತ್ರದ ಸಂಖ್ಯೆ, ಹೆಸರು ಮತ್ತು ಪ್ರಶ್ನೆಪತ್ರಿಕೆಯ ವರ್ಷನ್ ಕೋಡ್ ಇರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ, ನೀಡಿರುವ ಒಎಂಆರ್ ಉತ್ತರ ಪತ್ರಿಕೆಯಲ್ಲಿ ಎಲ್ಲ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಶೇಡ್ ಮಾಡಬೇಕು ಎಂದು ಅಭ್ಯರ್ಥಿಗಳಿಗೆ ಪ್ರಾಧಿಕಾರ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ಅನ್ನು ಸಂಪರ್ಕಿಸಬಹುದಾಗಿದೆ.

ಮೈಸೂರಿನ 21 ಕೇಂದ್ರಗಳಲ್ಲಿ ಪರೀಕ್ಷೆ
ಮೈಸೂರು: ಮೈಸೂರಿನ 21 ಕೇಂದ್ರ ಗಳಲ್ಲಿ ಸಿಇಟಿ ನಡೆಯಲಿದ್ದು, ಒಟ್ಟು 10,463 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ನಾಳೆ(ಏ.29) ಬೆಳಿಗ್ಗೆ 10.30ರಿಂದ 11.50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತಶಾಸ್ತ್ರ, ಏ.30ರಂದು ಬೆಳಿಗ್ಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಕೇಂದ್ರಗಳು: ಮೈಸೂರು ನಗರದ 21 ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರ ವ್ಯವಸ್ಥೆ ಮಾಡ ಲಾಗಿದೆ ಎಂದು ಡಿಡಿಪಿಯು ದಯಾನಂದ್ ತಿಳಿಸಿದ್ದಾರೆ. ಸಯ್ಯಾಜಿರಾವ್ ರಸ್ತೆಯಲ್ಲಿರುವ ಡಿ.ಬನುಮಯ್ಯ ಪಿಯು ಕಾಲೇಜು, ನಜರ್‍ಬಾದ್ ಪೀಪಲ್ಸ್ ಪಾರ್ಕ್ ಬಾಲಕಿಯರ ಸರ್ಕಾರಿ ಕಾಲೇಜು, ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜು, ವಿಜಯ ವಿಠಲ ಕಾಲೇಜು, ಕೃಷ್ಣಮೂರ್ತಿಪುರಂನ ಎಂಎಂಕೆ ಅಂಡ್ ಎಸ್‍ಡಿಎಂ ಕಾಲೇಜು, ಶಾರದಾ ವಿಲಾಸ ಕಾಲೇಜು, ಜಯಲಕ್ಷ್ಮೀಪುರಂನ ಎಸ್‍ಬಿಆರ್‍ಆರ್ ಮಹಾಜನ ಕಾಲೇಜು, ಚಿನ್ಮಯ ಕಾಲೇಜು, ಲಕ್ಷ್ಮೀಪುರಂನ ಗೋಪಾಲ ಸ್ವಾಮಿ ಕಾಲೇಜು, ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಕಾಲೇಜು, ಮಹಾರಾಣಿ ಪಿಯು ಕಾಲೇಜು, ಸೀತಾವಿಲಾಸ ರಸ್ತೆಯ ಮರಿಮಲ್ಲಪ್ಪ ಕಾಲೇಜು, ಕುವೆಂಪುನಗರ ಅನಿಕೇತನ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ದಾರ್ಥನಗರ ತಿ.ನರಸೀಪುರ ಮುಖ್ಯರಸ್ತೆಯ ಟೆರಿಷಿಯನ್ ಕಾಲೇಜು, ಬದ್ರಿಪ್ರಸಾದ್‍ಜಿ ಕಾಲೇಜು, ಶೇಷಾದ್ರಿ ಅಯ್ಯರ್ ರಸ್ತೆಯ ವಿದ್ಯಾವರ್ಧಕ ಕಾಲೇಜು, ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು, ಗೋಕುಲಂ 3ನೇ ಹಂತದ ಕೆ.ಪುಟ್ಟಸ್ವಾಮಿ ಕಾಲೇಜು, ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಕಾಲೇಜು, ದಟ್ಟಗಳ್ಳಿ ಕನಕದಾಸನಗರದ ಲಕ್ಷ್ಮೀ ಹಯಗ್ರೀವ ಕಾಲೇಜು ಹಾಗೂ ಒಂಟಿಕೊಪ್ಪಲು ಸರ್ಕಾರಿ ಪಿಯು ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

Translate »