ಸಾಲ ಮರುಪಾವತಿಸದ ವಾಣಿಜ್ಯ ಸಂಕೀರ್ಣ ಕಟ್ಟಡ ಬ್ಯಾಂಕ್ ವಶಕ್ಕೆ
ಮೈಸೂರು

ಸಾಲ ಮರುಪಾವತಿಸದ ವಾಣಿಜ್ಯ ಸಂಕೀರ್ಣ ಕಟ್ಟಡ ಬ್ಯಾಂಕ್ ವಶಕ್ಕೆ

April 30, 2019

ಮೈಸೂರು: ಬೇಕ್ ಪಾಯಿಂಟ್ ಎಂದೇ ಹೆಸರಾಗಿದ್ದ ಮೈಸೂ ರಿನ ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯ ಜಂಕ್ಷನ್‍ನಲ್ಲಿರುವ 4 ಅಂತಸ್ತಿನ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಡೆಬ್ಟ್ ರಿಕವರಿ ಟ್ರಿಬ್ಯೂನಲ್ (ಡಿಆರ್‍ಟಿ), ಇದೀಗ ವಿಜಯಾ ಬ್ಯಾಂಕ್‍ನ ಸುಪರ್ದಿಗೆ ಅದನ್ನು ನೀಡಿದೆ.

ಇದರಿಂದ ವಾಣಿಜ್ಯ ಸಂಕೀರ್ಣ ಕಟ್ಟ ಡದ ಪ್ರಮುಖ ಮಳಿಗೆಯಾದ ಮೋಹನ್ ಭಂಡಾರ್ ಸೂಪರ್ ಮಾರ್ಕೆಟ್, ಬೇಕ್ ಪಾಯಿಂಟ್ ಬೇಕರಿ ಸೇರಿದಂತೆ ಇಲ್ಲಿನ ಎಲ್ಲಾ ಮಳಿಗೆಗಳನ್ನು ಖಾಲಿ ಮಾಡುವ ಅನಿವಾರ್ಯತೆ ಎದುರಾಗಿದೆ. ಕುವೆಂಪು ನಗರದ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಈ ವಾಣಿಜ್ಯ ಕಟ್ಟಡ ಮಾಲೀಕ ನಾಗ ರಾಜು 1.91 ಕೋಟಿ ರೂ. ಸಾಲ ಪಡೆದಿ ದ್ದರು. ಬಡ್ಡಿ ಸೇರಿದಂತೆ ಒಟ್ಟು 33 ಕೋಟಿ ರೂ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ವಾಣಿಜ್ಯ ಸಂಕೀರ್ಣದ ಮಳಿಗೆಗಳಿಗೆ ಬೀಗ ಜಡಿಯಲಾಗಿತ್ತು.

ಡಿಆರ್‍ಟಿ-2 (ಸಾಲ ವಸೂಲಾತಿ ನ್ಯಾಯಪೀಠ) ಆದೇಶದಂತೆ ನ್ಯಾಯಪೀಠ ನಿಯೋಜಿಸಿದ್ದ ವಕೀಲ ಆಯುಕ್ತರ ನೇತೃತ್ವ ಹಾಗೂ ವಿಜಯಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಾಣಿಜ್ಯ ಸಂಕೀರ್ಣದ ಮಳಿಗೆಗಳಿಗೆ 2018ರ ಜು.4ರಂದು ಬೀಗಮುದ್ರೆ ಹಾಕಲಾಗಿತ್ತು. ಪರಿಣಾಮ ಮಳಿಗೆಗಳನ್ನು ಬಾಡಿಗೆಗೆ ಪಡೆದು ವ್ಯಾಪಾರ-ವಹಿವಾಟು ನಡೆಸುತ್ತಿದ್ದವರು ಸಂಕಷ್ಟಕ್ಕೆ ಸಿಲುಕಬೇಕಾಯಿತು.

ಈ ನಡುವೆ ಮೋಹನ್ ಭಂಡಾರ್ ಸೂಪರ್ ಮಾರ್ಕೆಟ್ ಮಾಲೀಕರು ಹೈ ಕೋರ್ಟ್ ಮೊರೆ ಹೋಗಿ 2018ರ ಆಗಸ್ಟ್ 18ರಿಂದ ಮಳಿಗೆಯ ವ್ಯಾಪಾರ ವಹಿವಾಟು ಮತ್ತೆ ಆರಂಭಿಸುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಮೋಹನ್ ಭಂಡಾರ್ ಅವರ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತು. ಹೀಗಾಗಿ ಮತ್ತೆ ಮಳಿಗೆ ಬಂದ್ ಮಾಡುವ ಸಂಕಷ್ಟ ಎದುರಿಸಬೇಕಾ ಯಿತು. ಇದೀಗ ತನ್ನ ವಶದಲ್ಲಿದ್ದ ಕಟ್ಟಡ ವನ್ನು ಡಿಆರ್‍ಟಿ ವಿಜಯಾ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿದೆ) ಸುಪರ್ದಿಗೆ ನೀಡಿದೆ.

ಈ ಸಂಬಂಧ ಮೈಸೂರು ಮಿತ್ರನೊಂ ದಿಗೆ ಮಾತನಾಡಿದ ಮೋಹನ್ ಭಂಡಾರ್ ಮಳಿಗೆ ಮಾಲೀಕ ಸಂದೀಪ್, ಹೈಕೋರ್ಟ್ ನಲ್ಲಿ ನಮ್ಮ ಮೇಲ್ಮನವಿ ತಿರಸ್ಕøತಗೊಂ ಡಿತು. ಹೀಗಾಗಿ ಮಳಿಗೆ ಖಾಲಿ ಮಾಡು ತ್ತಿದ್ದು, ಶೀಘ್ರದಲ್ಲಿ ಸೂಕ್ತ ಸ್ಥಳದಲ್ಲಿ ಮಳಿಗೆ ಮತ್ತೆ ಆರಂಭಿಸಲಿದ್ದೇವೆ ಎಂದು ತಿಳಿಸಿದರು.

ವಿಜಯಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಮುಖ್ಯ ವ್ಯವಸ್ಥಾಪಕ ಲೋಕೇಶ್ ಮಾತನಾಡಿ, ಬಾಡಿಗೆದಾರರೊಬ್ಬರು ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕøತಗೊಂಡು ತೀರ್ಪು ಬ್ಯಾಂಕ್ ಪರವಾಗಿ ಬಂದಿತು. ಕಟ್ಟಡ ಸ್ವಾಧೀನಪಡಿಸಿಕೊಂಡಿದ್ದ ಡಿಆರ್‍ಟಿ ಇದೀಗ ಬ್ಯಾಂಕ್ ಸುಪರ್ದಿಗೆ ನೀಡಿದೆ. ಸದರಿ ಕಟ್ಟಡ ದಲ್ಲಿ ಬ್ಯಾಂಕ್ ಕಾರ್ಯಚಟುವಟಿಕೆ ಆರಂ ಭಿಸುವ ಉದ್ದೇಶ ಹೊಂದಲಾಗಿದೆ. ಆದರೆ ಆ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ ಎಂದು ವಿವರಿಸಿದರು.

Translate »