ವಿಶ್ವಯೋಗ ದಿನಾಚರಣೆಯಂತೆ ವಿಶ್ವ ನೃತ್ಯ ದಿನ ಆಚರಿಸುವುದು ಅವಶ್ಯ
ಮೈಸೂರು

ವಿಶ್ವಯೋಗ ದಿನಾಚರಣೆಯಂತೆ ವಿಶ್ವ ನೃತ್ಯ ದಿನ ಆಚರಿಸುವುದು ಅವಶ್ಯ

April 30, 2019

ಮೈಸೂರು: ವಿಶ್ವ ನೃತ್ಯ ದಿನವನ್ನು ವಿಶ್ವಯೋಗ ದಿನಾಚರಣೆ ಮಾದರಿಯಲ್ಲೇ ಆಚರಿಸುವ ಮೂಲಕ ನೃತ್ಯ ಕಲೆಯನ್ನು ಮತ್ತಷ್ಟು ಜನಪ್ರಿಯ ಗೊಳಿಸಬೇಕಿದೆ ಎಂದು ನೂಪುರ ಕಲಾ ವಿದರ ಸಾಂಸ್ಕøತಿಕ ಟ್ರಸ್ಟ್‍ನ ನಿರ್ದೇಶಕ ಡಾ.ಕೆ.ರಾಮಮೂರ್ತಿರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಲಕ್ಷ್ಮೀಪುರಂನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದ ಆವರಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ `ವಿಶ್ವ ನೃತ್ಯ ದಿನೋತ್ಸವ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಯೋಗ ಕಲೆಯನ್ನು ಪ್ರತಿ ವರ್ಷ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತಿದೆ. ಹಾಗೆಯೇ ವಿಶ್ವ ನೃತ್ಯ ದಿನವನ್ನು ಪ್ರತಿ ಮನೆ-ಮನದಲ್ಲಿ ಆಚರಿಸುವಂತಾಗಬೇಕು ಎಂದರು.

ಈ ವೇದಿಕೆ ಮೂಲಕ ನೃತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತರಬೇಕು. ಆ ಮೂಲಕ ನಮ್ಮ ಬೇಡಿಕೆ ಗಳನ್ನು ಈಡೇರಿಸಿಕೊಳ್ಳಬೇಕು. ರಂಗಾ ಯಣ ಮಾದರಿಯಲ್ಲಿ ನೃತ್ಯಾಲಯ, ಸಹಾಯಧನ ಮತ್ತಿತರೆ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ನೃತ್ಯ ಕಲೆಯನ್ನು ಮತ್ತಷ್ಟು ಶ್ರೀಮಂತಗೊಳಿಸ ಬೇಕಿದೆ ಎಂದು ಅವರು ಹೇಳಿದರು.

ಕೊಲ್ಕತ್ತಾದ ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯದ ಭಾರತೀಯ ನೃತ್ಯ ವಿಭಾಗದ ಮುಖ್ಯಸ್ಥೆ ಡಾ.ಶೃತಿ ಬಂದೋಪಾಧ್ಯಾಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೃತ್ಯದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಸಾಮಾಜಿಕ ಮೌಲ್ಯ, ಮಾನವೀಯ ಗುಣಗಳನ್ನು ಬಿತ್ತಬೇಕು. ಪ್ರತಿ ಕಲೆಯೂ ಸಮಾಜಪರವಾಗಿರಬೇಕು. ಆಗ ಮಾತ್ರ ಕಲೆಗೆ ಮಹತ್ವ ಬರಲಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ನೃತ್ಯ ಸಂಸ್ಥೆ(ಐಟಿಐ)ಯು ಏ.19 ಅನ್ನು ವಿಶ್ವ ನೃತ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಆಧುನಿಕ ನೃತ್ಯ ಪ್ರಕಾರವನ್ನು ಜಗತ್ತಿಗೆ ಪರಿಚಯಿಸಿದ ಜೀನ್ ಜಾರ್ಜ್‍ನೊವರೆ ಅವರ ಸವಿ ನೆನಪಿಗಾಗಿ ಈ ದಿನವನ್ನು ಆಚರಿಸಲಾಗು ತ್ತಿದೆ ಎಂದು ಹೇಳಿದರು.

ಸಂಗೀತ ವಿವಿ ಹಂಗಾಮಿ ಕುಲಪತಿ ಪೆÇ್ರ.ನಾಗೇಶ್ ವಿ.ಬೆಟ್ಟಕೋಟೆ, ಕುಲ ಸಚಿವ(ಪರೀಕ್ಷಾಂಗ) ಪೆÇ್ರ.ಆರ್.ರಾಜೇಶ್, ಹಣಕಾಸು ಅಧಿಕಾರಿ ಹೆಚ್.ಎನ್. ಗಾಯತ್ರಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ 2018-19ನೇ ಸಾಲಿನ ವಾರ್ಷಿಕ ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಗಳು, ದಕ್ಷಿಣ ವಲಯ ಸಾಂಸ್ಕøತಿಕ ಸ್ಪರ್ಧೆಗಳ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು.

ನಂತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಮೈಸೂರಿನ ಪ್ರತಿಷ್ಠಿತ ನೃತ್ಯ ಸಂಸ್ಥೆಗಳಾದ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ಕಲಾವಿದರು, ಭರತಾಂಜಲಿ ಕೇಂದ್ರದ ಡಾ.ಶೀಲಾ ಶ್ರೀಧರ್ ಮತ್ತು ಶಿಷ್ಯ ವೃಂದ, ನಾಟ್ಯಾ ಕುಟೀರದ ಕಲಾಮಂಡಲಂ ಸುಚಿತ್ರಾ ಅನಿಲ್ ಕುಮಾರ್ ಶಿಷ್ಯವೃಂದÀ, ಗುರುದೇವ ಅಕಾಡೆಮಿಯ ಡಾ.ಚೇತನಾ ರಾಧಾಕೃಷ್ಣ ಮತ್ತು ವೃಂದÀ ಹಾಗೂ ಶ್ರೀ ನೃತ್ಯ ನಿಕೇತನದ ಪ್ರಸನ್ನ ಲಕ್ಷ್ಮಿ ಮತ್ತು ವೃಂದದಿಂದ ವೈವಿದ್ಯಮಯ ಶಾಸ್ತ್ರೀಯ, ಜಾನಪದ, ಬುಡಕಟ್ಟು ಮತ್ತು ಪಾಶ್ಚಾತ್ಯ ನೃತ್ಯಗಳ ಸಂಭ್ರಮ ಮೇಳೈಸಿದವು.

Translate »