ಚಿಪ್ಪು ಹಂದಿ ಮಾರಾಟ: ವ್ಯಕ್ತಿ ಬಂಧನ
ಮೈಸೂರು

ಚಿಪ್ಪು ಹಂದಿ ಮಾರಾಟ: ವ್ಯಕ್ತಿ ಬಂಧನ

May 9, 2019

ಮೈಸೂರು: ಅಕ್ರಮ ವಾಗಿ ಕಾಡು ಚಿಪ್ಪು ಹಂದಿ (ಪೆಂಗೋಲಿ ಯನ್) ಮಾರಾಟ ಮಾಡುತ್ತಿದ್ಧ ವ್ಯಕ್ತಿಯನ್ನು ಅರಣ್ಯ ಸಂಚಾರ ದಳ(Forest mobile squad)ದ ಪೊಲೀಸರು ಬಂಧಿಸಿದ್ದಾರೆ. ಹಾಸನದ ಸಿದ್ದಯ್ಯ ನಗರ ನಿವಾಸಿ ಲೇಟ್ ಎಲ್ಲಯ್ಯ ಅವರ ಮಗ ಅಣ್ಣಪ್ಪ(30) ಬಂಧಿತ. ಆತನಿಂದ ಎರಡೂವರೆ ಕೆ.ಜಿ. ತೂಕದ ಕಾಡು ಚಿಪ್ಪುಹಂದಿ, ಎರಡು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿ ಗಳೊಂದಿಗೆ ಕಾರ್ಯಾಚರಣೆ ನಡೆಸಿದ ಮೈಸೂರು ಜಿಲ್ಲೆಯ ಅರಣ್ಯ ಸಂಚಾರಿ ದಳದ ಪ್ರಭಾರ ಸಬ್‍ಇನ್ಸ್‍ಸ್ಪೆಕ್ಟರ್ ಎಂ.ಬಿ. ರಮೇಶ್, ಕೆ.ಆರ್.ನಗರ ತಾಲೂಕು, ಮಂಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡು ಚಿಪ್ಪು ಹಂದಿಯೊಂದಿಗೆ ಆರೋಪಿ ಅಣ್ಣಪ್ಪನನ್ನು ಬಂಧಿಸಿದರು.

ಪೊಲೀಸರು ಕಾರ್ಯಾಚರಣೆ ನಡೆಸು ತ್ತಿದ್ದಂತೆಯೇ ಆರೋಪಿ ಜೊತೆ ಸಹಕರಿ ಸುತ್ತಿದ್ದ ದಿನೇಶ, ಜೋಯಿ ಹಾಗೂ ಸಲ್ಮಾನ್ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು, ತನಿಖೆಯನ್ನು ಕೆ.ಆರ್. ನಗರ ವಲಯ ಅರಣ್ಯಾಧಿಕಾರಿಯವರಿಗೆ ವಹಿಸಲಾಗಿದೆ. ಪತ್ತೆ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ವೆಂಕಟಾಚಲಯ್ಯ ಹೆಚ್.ನರಸಿಂಹಮೂರ್ತಿ ಟಿ.ಆರ್.ರಘು, ಚಲುವರಾಜು, ಎಲ್.ಮಂಜುನಾಥ ಹಾಗೂ ವಾಹನ ಚಾಲಕ ಪ್ರದೀಪ ಭಾಗವಹಿಸಿದ್ದರು.

Translate »