ಸರಗಳ್ಳತನದ ಬಗ್ಗೆ ಜಾಗೃತಿ
ಮೈಸೂರು

ಸರಗಳ್ಳತನದ ಬಗ್ಗೆ ಜಾಗೃತಿ

May 9, 2019

ಮೈಸೂರು: ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನದ ಹಿನ್ನಲೆ ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ನೇತೃತ್ವ ದಲ್ಲಿ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜನ ಜಾಗೃತಿ ಮೂಡಿಸಲಾಯಿತು.

ಬೆಲೆ ಬಾಳುವ ಒಡವೆಗಳನ್ನು ಧರಿಸಿ ಒಂಟಿಯಾಗಿ ತಿರುಗಾಡಬೇಡಿ, ಚಿನ್ನದ ಆಭರಣಗಳನ್ನು ಧರಿಸಿ ತಿರುಗಾಡುವ ಸಂದರ್ಭದಲ್ಲಿ ಬಟ್ಟೆಯಿಂದ ಮರೆಮಾಡಿ ಕೊಳ್ಳಿ, ನಗ-ನಾಣ್ಯಗಳನ್ನು ಪರ್ಸ್, ವ್ಯಾನಿಟಿ ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗುವಾಗ ಜಾಗೃತರಾಗಿರಿ ಎಂಬಿ ತ್ಯಾದಿ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿ ಸುವ ಮೂಲಕ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಒಂಟಿಯಾಗಿ ತಿರುಗಾಡಬೇಡಿ, ಪಾರ್ಕ್ ನಲ್ಲಿ ವಾಕಿಂಗ್ ಮಾಡುವಾಗ ಚಿನ್ನಾ ಭರಣಗಳನ್ನು ಬಟ್ಟೆಯಿಂದ ಮರೆ ಮಾಡಿಕೊಳ್ಳಿ, ಸುರಕ್ಷತೆಯ ದೃಷ್ಟಿಯಿಂದ ಯಾರ ಮೇಲಾದರು ಅನುಮಾನ ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಅಪರಾಧ ತಡೆ ಪೊಲೀಸರಿಗಷ್ಟೆ ಜವಾಬ್ದಾರಿ ಎಂದು ಭಾವಿಸದೆ ಅವ ರೊಂದಿಗೆ ಸಹಕರಿಸಬೇಕು ಎಂದರು.

ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಎಎಸ್‍ಐ ಎಂ.ಪ್ರಭುದೇವ್ ಮಾತನಾಡಿ, ನಗರದಲ್ಲಿರುವ ಸರಗಳ್ಳರನ್ನು ಹಿಡಿಯಲು ಸಾರ್ವಜನಿಕರ ಸಹಾಯ ಅಗತ್ಯವಾಗಿದೆ. ಅಪರಿಚಿತರು ಪರಿಚಿತರಂತೆ ವರ್ತಿಸು ತ್ತಾರೆ. ಅವರಿಂದ ದೂರವಿರಿ. ಅನುಮಾನ ಬಂದಲ್ಲಿ ಅವರ ವಾಹನದ ನಂಬರ್ ಬರೆದುಕೊಂಡು ತಕ್ಷಣ ಕರಪತ್ರದಲ್ಲಿರುವ ಪೊಲೀಸ್ ಠಾಣೆಯ ನಂಬರ್‍ಗೆ ಕರೆ ಮಾಡಿ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ಮುಖಂಡರಾದ ಭರತ್, ಸುರೇಂದ್ರ, ಸುದರ್ಶನ್, ರಾಜೇಂದ್ರ, ಪ್ರಮೋದ್, ನವೀನ್, ಚರಣ್, ಸಚಿನ್, ಪೊಲೀಸ್ ಪೇದೆಗಳಾದ ಎಸ್.ಎಂ. ಮಹೇಶ್, ಮಲ್ಲಿಕಾರ್ಜುನ ಸ್ವಾಮಿ, ಕುಮಾರ್ ಉಪಸ್ಥಿತರಿದ್ದರು.

Translate »