ಮೈಸೂರು: ಉತ್ತರಪ್ರದೇಶ ಮೂಲದ ಬಾಲಕನೋರ್ವ ನಾಪತ್ತೆಯಾದ ಬಗ್ಗೆ ಮೈಸೂರು ತಾಲೂಕಿನ ಕಡಕೊಳ ಗ್ರಾಮದಿಂದ ತಡವಾಗಿ ವರದಿ ಯಾಗಿದೆ. ಗ್ರಾಮದಲ್ಲಿ ಶೆಡ್ ನಿರ್ಮಿಸಿಕೊಂಡು ಹೂ ಗಿಡಗಳನ್ನು ಮಾರಾಟ ಮಾಡುತ್ತಿದ್ದ ಉತ್ತರಪ್ರದೇಶದ ಹುನ್ನಾವ್ ಜಿಲ್ಲೆ, ಸಫೀ ಪುರ್ ತಾಲೂಕಿನ ಮೆಹಮೂದ್‍ಪುರ್ ಗ್ರಾಮದ ಭಾನು ಎಂಬು ವರ ಜೊತೆಗಿದ್ದ ಬಾಲಕ ಲಲ್ಲೂ (18) ನಾಪತ್ತೆಯಾದವನು. ತಾನು ಮಾ.24ರಂದು ಸಣ್ಣ ಗಿಡಗಳನ್ನು ಮಾರಾಟ ಮಾಡಲು ನಂಜನಗೂಡಿಗೆ ತೆರಳಿ ವಾಪಸ್ ಆದಾಗ ಶೆಡ್‍ನಲ್ಲಿದ್ದ ಲಲ್ಲೂ ನಾಪತ್ತೆಯಾಗಿದ್ದ ಎಂದು ಭಾನು ಪೊಲೀಸ ರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ (ಗ್ರಾಮಾಂತರ) ಪೊಲೀಸರು, ಈ ಬಾಲಕನ ಬಗ್ಗೆ ಮಾಹಿತಿ ಇರುವವರು ಮೈಸೂರು ದಕ್ಷಿಣ ಪೊಲೀಸ್ ಠಾಣೆ ದೂ.ಸಂಖ್ಯೆ 0821-2444955 ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2444800ನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
