ಮೈಸೂರು: ವಿಪ್ರ ಜಾಗೃತಿ ವೇದಿಕೆ ವತಿಯಿಂದ ಶಂಕರ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ರಥೋತ್ಸವ ವಿಜೃಂ ಭಣೆಯಿಂದ ನಡೆಯಿತು. ವಿದ್ಯಾರಣ್ಯಪುರಂನ ಆವತಿ ಶಂಕರಮಠದಿಂದ ಪ್ರಾರಂಭವಾದ ರಥೋತ್ಸವ ವಿದ್ಯಾರಣ್ಯ ಪುರಂನ ನಾಲ್ಕು ಮತ್ತು ಎರಡನೇ ಮುಖ್ಯ ರಸ್ತೆಯ ಮೂಲಕ ಚಾಮುಂಡಿಪುರಂ ವೃತ್ತದಿಂದ ಅಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ತಳಿರು-ತೋರಣಗಳಿಂದ ಅಲಂಕೃತ ಗೊಂಡಿದ್ದ ಸಾರೋಟಿನಲ್ಲಿ ಶಂಕರಾ ಚಾರ್ಯರ ಚಿತ್ರಪಟ, ಭಜನೆ, ಮಂಗಳ ವಾದ್ಯ, ಮಂತ್ರ ಘೋಷಣೆಯೊಂದಿಗೆ ಸಾಗಿದ ರಥೋತ್ಸವ ಮೆರಗು ನೀಡಿತು.
ಇದೇ ವೇಳೆ ಶಂಕರಾಚಾರ್ಯರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಅವನತಿ ಯತ್ತ ಸಾಗಿದ್ದ ಭಾರತೀಯ ಸಂಸ್ಕøತಿ ಯನ್ನು ಶಂಕರಾಚಾರ್ಯರು ಮತ್ತೆ ಬೆಳೆಸಿ ದರು. ಸಮಾಜದಲ್ಲಿದ್ದ ಅಂಕು-ಡೊಂಕು ಗಳನ್ನು ಸವಾಲುಗಳನ್ನು ಎದುರಿಸಿ ಎಲ್ಲರು ಒಂದಾಗಿ ಬದುಕುವಂತಹ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾದರು ಎಂದರು.
ಇಂದು ವಿಶ್ವವೇ ಶಂಕರರ ವಿಚಾರಧಾರೆ ಯನ್ನು ಅನುಸರಿಸುತ್ತಿದೆ. ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಯಾವ ರೀತಿಯ ಜೀವನವನ್ನು ಸಾಗಿಸಬೇಕು ಎಂಬುದರ ಪರಿಕಲ್ಪನೆಯನ್ನು ಶಂಕರಾ ಚಾರ್ಯರು ನೀಡಿದ್ದಾರೆ. ಎಲ್ಲರೂ ಒಂದೇ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ವಿಪ್ರ ಜಾಗೃತಿ ವೇದಿಕೆ ಅಧ್ಯಕ್ಷ ಭವಾನಿ ಶಂಕರ್, ಕಾರ್ಯದರ್ಶಿ ಮುಳ್ಳೂರು ಸುರೇಶ್, ಹಿರಿಯ ವಿಪ್ರ ಮುಖಂಡ ಕೆ. ರಘುರಾಂ ವಾಜಪೇಯಿ, ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯ ಮೂರ್ತಿ, ಜೆ.ರಮೇಶ್, ವಸಂತಕುಮಾರ್, ನಂ.ಶ್ರೀಕಂಠಕುಮಾರ್, ಬಾಲಕೃಷ್ಣ, ಸುಬ್ಬರಾವ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ವಿಕ್ರಂ ಅಯ್ಯಂಗಾರ್, ಜಿ.ಶ್ರೀಕಾಂತ್, ಲತಾ ಮೋಹನ್, ಪ್ರಭಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.