ಛಾಯಾಪತಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದ ಬಗ್ಗೆ ನಾಡೋಜ ಪ್ರೊ.ನಿಸಾರ್ ಅಹಮದ್, ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಬೇಸರ
ಮೈಸೂರು

ಛಾಯಾಪತಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದ ಬಗ್ಗೆ ನಾಡೋಜ ಪ್ರೊ.ನಿಸಾರ್ ಅಹಮದ್, ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಬೇಸರ

May 11, 2019

ಮೈಸೂರು: ಸಾವಿರಕ್ಕೂ ಹೆಚ್ಚಿನ ಕೃತಿಗಳ ಪ್ರಕಾಶಕರಾದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಟಿ.ಎಸ್.ಛಾಯಾಪತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯ ದಿರುವ ಬಗ್ಗೆ ಹಿರಿಯ ಸಾಹಿತಿ, ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಹಾಗೂ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಹೊಯ್ಸಳ ಕರ್ನಾಟಕ ಸಂಘದ ಸಭಾಂ ಗಣದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಟಿ.ಎಸ್.ಛಾಯಾ ಪತಿ-75 ಹುಟ್ಟುಹಬ್ಬದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಮಾತನಾಡಿ, ಸರ್ಕಾರಕ್ಕೆ ಏನಾಗಿದೆಯೋ ಗೊತ್ತಿಲ್ಲ. ಯಾರ್ಯಾರಿಗೋ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಾರೆ. ಛಾಯಾಪತಿಯವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಸರ್ಕಾರ ಗುರ್ತಿ ಸಲಿಲ್ಲವಲ್ಲ. ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದಾಗ ಪತ್ರಿಕೆಗಳಲ್ಲಿ ನೋಡುತ್ತೇನೆ. ಇವರ ಹೆಸರೇ ಇರುವು ದಿಲ್ಲ. ಸರ್ಕಾರ ಇಂಥವರನ್ನು ಗುರ್ತಿಸ ಬೇಕು ಎಂದು ಸಲಹೆ ನೀಡಿದರು.

ಟಿ.ಎಸ್.ಛಾಯಾಪತಿ ಮತ್ತು ನನ್ನ ಸ್ನೇಹ 45 ವರ್ಷಗಳಷ್ಟು ಹಳೆಯದು. ಅವರು ನನ್ನನ್ನು ಅಣ್ಣನಂತೆ ನೋಡಿ ಕೊಂಡಿದ್ದಾರೆ. ಸ್ನೇಹ, ಪ್ರೀತಿಗಿಂತ ಜಗತ್ತಿ ನಲ್ಲಿ ಯಾವುದೂ ಇಲ್ಲ. ಅಂತಹ ಸ್ನೇಹ, ಪ್ರೀತಿ, ವಿಶ್ವಾಸವನ್ನು ಛಾಯಾಪತಿ ಗಳಿಸಿ ಕೊಂಡಿದ್ದಾರೆ. ಅವರದ್ದು ಪ್ರತಿಭಾವಂತರ ವಂಶ. ಸಾಹಿತ್ಯ ಅಭಿರುಚಿ ಅವರಿಗೆ ವಂಶಪಾರಂ ಪರ್ಯವಾಗಿ ಬಂದದ್ದು ಎಂದು ಹೇಳಿದರು.

ಛಾಯಾಪತಿ ಅವರು ಪ್ರಕಾಶನದ ಜವಾಬ್ದಾರಿಯನ್ನು ತಮ್ಮ ಸುಪುತ್ರಿಗೆ ವಹಿಸಿಕೊಡುತ್ತಿದ್ದಾರೆ. ಆದರೂ ಅದರಲ್ಲಿ ನಿಮ್ಮ ಸ್ಪರ್ಶ ಇರಲೇಬೇಕು ಎಂದು ಪ್ರೊ. ನಿಸಾರ್ ಅಹಮದ್ ಸಲಹೆ ನೀಡಿದರು.

ನಿಸಾರರಿಗೆ ರಾಷ್ಟ್ರಕವಿ ಪುರಸ್ಕಾರ ನೀಡಬೇಕಿತ್ತು: ಅಧ್ಯಕ್ಷತೆ ವಹಿಸಿದ್ದ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ನಿಸಾರ್ ಅಹಮದ್ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ಬರಬೇಕಿತ್ತು. ನಾವೆ ಲ್ಲರೂ ನಿರೀಕ್ಷಿಸುತ್ತಿದ್ದೆವು. ಅದು ಶೀಘ್ರ ಬರಲಿ. ಅವರಿಗೆ ಪ್ರಶಸ್ತಿ ಬಂದರೆ ಕನ್ನಡಿ ಗರಿಗೆ ಇದೊಂದು ಹೆಮ್ಮೆ ಪಡುವ ವಿಚಾರವಾಗುತ್ತದೆ ಎಂದರು.

ಕಾರ್ಯಕ್ರಮ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೊರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್ ಆಗಮಿಸಿದ್ದರು. ಸಮಾರಂಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಾಹಿತಿ ಜಯಪ್ಪ ಹೊನ್ನಾಳಿ, ಕಸಾಪ ಪದಾಧಿ ಕಾರಿಗಳಾದ ರಾಜಶೇಖರ ಕದಂಬ, ಮೂಗೂರು ನಂಜುಂಡ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »