ಮೈಸೂರು: ಸಾವ ಯವ ಕೃಷಿಗೆ ಪ್ರತ್ಯೇಕ ಮಾರುಕಟ್ಟೆ ಒದಗಿ ಸುವ ಹಾಗೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ನಿಸರ್ಗ ಟ್ರಸ್ಟ್‍ನ ಸಾವಯವ ರೈತ ಸಂತೆ ಯಲ್ಲಿ ಶನಿವಾರ ಗ್ರಾಹಕರು ತರಕಾರಿ ಸೇರಿ ದಂತೆ ಸಿರಿಧಾನ್ಯಗಳಿಂದ ತಯಾರಾದ ತಿಂಡಿ ತಿನಿಸುಗಳನ್ನು ಖರೀದಿಸಿದರು.
ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ಹ್ಯಾಪಿಮ್ಯಾನ್ ಉದ್ಯಾನವನದ ಬಳಿ ಟ್ರಸ್ಟ್‍ನ ಮಾರಾಟ ಕೇಂದ್ರದ ಎದುರು ಪ್ರತಿ ತಿಂಗಳ ಎರಡನೇ ಶನಿವಾರ ರೈತ ಸಂತೆ ಹಮ್ಮಿಕೊಳ್ಳುತ್ತ ಬರಲಾಗಿದ್ದು, ಅದೇ ರೀತಿ ಇಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆದ ರೈತ ಸಂತೆಯಲ್ಲಿ ಸಾವಯವ ಧವಸ-ಧಾನ್ಯ, ತರಕಾರಿ, ರಸಾಯನಿಕ ರಹಿತ ಸೋಪು, ಕೇಶ ತೈಲ, ಹಲ್ಲುಪುಡಿ ಸೇರಿದಂತೆ ನಾನಾ ಪದಾರ್ಥಗಳ ಮಾರಾಟ ಜೋರಾಗಿತ್ತು.
ವಿವಿಧ ತರಕಾರಿಗಳು ಮಾತ್ರವಲ್ಲದೆ, ಬೆಲ್ಲ, ಅಡುಗೆ ಎಣ್ಣೆ, ತೆಂಗಿನ ಎಣ್ಣೆ ಸೇರಿ ದಂತೆ ನಾನಾ ಪದಾರ್ಥಗಳು ಇಂದಿಲ್ಲಿ ಮಾರಾಟಗೊಂಡವು. ಬಾಳೆ ದಿಂಡು, ಸೊಪ್ಪು ಸೇರಿದಂತೆ ವಿವಿಧ ಪದಾರ್ಥ ಗಳು ಸಂತೆಯಲ್ಲಿ ಕಂಡು ಬಂದವು. ಸಾವ ಯವ ಪದ್ಧತಿ ಅಳವಡಿಸಿಕೊಂಡ ಮೈಸೂರು, ಮಂಡ್ಯ ಹಾಗೂ ಚಾಮ ರಾಜನಗರ ಜಿಲ್ಲೆಗಳ ರೈತರ ಪೈಕಿ ಇಂದು ಸುಮಾರು 10ಕ್ಕೂ ಹೆಚ್ಚು ರೈತರು ಸಂತೆ ಯಲ್ಲಿ ಭಾಗವಹಿಸಿ, ಸಾವಯವ ಕೃಷಿ ಪದ್ಧತಿಯ ವಿಶೇಷ ತಿಳಿಸಿದರಲ್ಲದೆ, ಇದ ರಿಂದ ಆಗುವ ಪ್ರಯೋಜನಗಳನ್ನು ಗ್ರಾಹ ಕರಿಗೆ ತಿಳಿಸಿ, ವಹಿವಾಟು ನಡೆಸಿದರು.
ಚಾಮರಾಜನಗರ ಜಿಲ್ಲೆ ಆಲೂರಿನ ಆರೋಗ್ಯ ಬುತ್ತಿ ಸ್ವಸಹಾಯ ರೈತರ ಗುಂಪಿನ ಉತ್ಪನ್ನಗಳಾದ 7 ವಿಧದ ಸಾಬೂನು, ಹುಲ್ಲುಪುಡಿ, ಶಾಂಪು ಸೇರಿದಂತೆ ಇನ್ನಿತರ ಪದಾರ್ಥಗಳು ಮಾರಾಟಗೊಂಡವು. ಚಾಮರಾಜನಗರದ ಡಾ.ಗುರುಪ್ರಸಾದ್ ತಾವು ಬೆಳೆದ ಪರಂಗಿ ಹಣ್ಣು (ಕೆಜಿಗೆ 30 ರೂ.), ಹೀರೇಕಾಯಿ (ಕೆಜಿಗೆ 30 ರೂ.), ಮಾವಿನ ಹಣ್ಣು (ಕೆಜಿಗೆ 60) ಸೇರಿದಂತೆ ಸೊಪ್ಪು ಹಾಗೂ ತರಕಾರಿಗಳನ್ನು ಮಾರಾಟ ಮಾಡಿದರು.
ವಾಟರ್ ಆಪಲ್: ಸಂತೆಯಲ್ಲಿ ರೈತ ಹೊನ್ನೂರು ಪ್ರಕಾಶ್ ಅವರು ಬೆಳೆದ ವಾಟರ್ ಆಪಲ್ ಹಣ್ಣುಗಳು ಗಮನ ಸೆಳೆದವು. ಕೆಜಿ 50 ರೂ.ನಂತೆ ಮಾರಾಟ ಮಾಡುತ್ತಿದ್ದ ಈ ಹಣ್ಣುಗಳು ಅಪರೂಪ ಎನ್ನುವ ಹೊನ್ನೂರು ಪ್ರಕಾಶ್, ಚಾಮರಾಜನಗರದ ತಮ್ಮ ಜಮೀನಿನಲ್ಲಿ ಕೇವಲ ನಾಲ್ಕೈದು ಮರಗಳು ಮಾತ್ರವೇ ಇವೆ. ಹೆಚ್ಚಿನ ನೀರಿನಾಂಶ ಇರುವ ಈ ಹಣ್ಣು ಬೇಸಿಗೆ ಕಾಲದಲ್ಲಿ ಕೊಯ್ಲಿಗೆ ಬರುತ್ತವೆ. ಹೆಚ್ಚು ನೀರು ಅಪೇಕ್ಷಿಸದ ಇದನ್ನು ತೋಟಗಾರಿಕೆ ಬೆಳೆಯಾಗಿ ಅಳವಡಿಸಿಕೊಂಡು ರೈತರು ಲಾಭ ಗಳಿಸಬಹುದು ಎಂದು ತಿಳಿಸಿದರು. ನಿಸರ್ಗ ಟ್ರಸ್ಟ್ ಅಧ್ಯಕ್ಷ ಬಸವರಾಜು ಕುಕ್ಕರಹಳ್ಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.