ಮೈಸೂರು ಮಾನಸಗಂಗೋತ್ರಿಯಲ್ಲಿ ಶ್ರೀ ಬಸವೇಶ್ವರ ಅಧ್ಯಯನ  ಕೇಂದ್ರ ಕಟ್ಟಡ ಕಾಮಗಾರಿಗೆ ಸುತ್ತೂರು ಶ್ರೀಗಳಿಂದ ಶಂಕುಸ್ಥಾಪನೆ
ಮೈಸೂರು

ಮೈಸೂರು ಮಾನಸಗಂಗೋತ್ರಿಯಲ್ಲಿ ಶ್ರೀ ಬಸವೇಶ್ವರ ಅಧ್ಯಯನ ಕೇಂದ್ರ ಕಟ್ಟಡ ಕಾಮಗಾರಿಗೆ ಸುತ್ತೂರು ಶ್ರೀಗಳಿಂದ ಶಂಕುಸ್ಥಾಪನೆ

May 12, 2019

ಮೈಸೂರು: ರಾಜ್ಯ ಸರ್ಕಾರದ ಅನುದಾನ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಮೈಸೂರು ವಿಶ್ವ ವಿದ್ಯಾನಿಲಯದ ಶ್ರೀ ಬಸವೇಶ್ವರ ಸಾಮಾ ಜಿಕ, ಪರಿಷ್ಕರಣಾ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ (ಶ್ರೀ ಬಸವೇಶ್ವರ ಅಧ್ಯ ಯನ ಕೇಂದ್ರ) ಕಟ್ಟಡ ಕಾಮಗಾರಿಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಮೈಸೂರಿನ ಮಾನಸಗಂಗೋತ್ರಿಯ ರೇಷ್ಮೆ ಕೃಷಿ ಅಧ್ಯಯನ ವಿಭಾಗದ ಹಿಂಭಾಗ ದಲ್ಲಿ 900 ಚದರ ಮೀ. ವಿಸ್ತೀರ್ಣದಲ್ಲಿ ಕೇಂದ್ರದ ಕಟ್ಟಡ ನಿರ್ಮಿಸಲಾಗುತ್ತಿದೆ. ನೆಲ ಅಂತಸ್ತಿನ ಉದ್ದೇಶಿತ ಕಟ್ಟಡದಲ್ಲಿ ಕಚೇರಿ, ಬೋರ್ಡ್ ರೂಂ, ಗ್ರಂಥಾಲಯ, ಅಧ್ಯ ಯನ ಕೊಠಡಿ, ಸೆಮಿನರ್ ಹಾಲ್, ಸಂಶೋ ಧನಾ ಕೊಠಡಿ ಹಾಗೂ ಶೌಚಾಲಯದ ಬ್ಲಾಕ್ ಒಳಗೊಂಡ ವ್ಯವಸ್ಥೆ ಇರಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, 12ನೇ ಶತಮಾನದ ಬಸವಣ್ಣರ ಬಗ್ಗೆ ಪ್ರಸ್ತುತವೂ ವ್ಯಾಪಕ ಸ್ಮರಣೆ ಮಾಡಲಾಗುತ್ತಿದೆ. ಅವರು ಸಮಾಜದ ಉನ್ನತ ಬದಲಾವಣೆಗಾಗಿ ತಮ್ಮ ಬದು ಕನ್ನು ಸವಾಲಾಗಿ ಸ್ವೀಕರಿಸಿದರು. ಬಹು ಮುಖ ವ್ಯಕ್ತಿತ್ವದೊಂದಿಗೆ ಸಮಾಜ ಪರಿ ವರ್ತನೆಯ ಆಯಾಮಗಳನ್ನು ಪ್ರಾಯೋ ಗಿಕವಾಗಿ ತೋರಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಬಸವಣ್ಣನವರು ನೈತಿಕತೆಗೆ ವಿಶೇಷ ಮಹತ್ವ ನೀಡಿದ್ದರು. ಅವರ ತತ್ವಾದರ್ಶ ಗಳ ಅಧ್ಯಯನಕ್ಕೆ ಮೈಸೂರು ವಿವಿಯಲ್ಲಿ ಕೇಂದ್ರ ಆರಂಭಿಸಿರುವುದು ಸ್ವಾಗತಾರ್ಹ. ಇದೀಗ ಕೇಂದ್ರಕ್ಕೆ ಸ್ವಂತ ಕಟ್ಟಡ ಕಲ್ಪಿಸಲಾಗು ತ್ತಿದ್ದು, ಕೇಂದ್ರದ ಮೂಲಕ ಬಸವಣ್ಣನವರ ಸಂದೇಶಗಳು ಸಮಾಜಕ್ಕೆ ತಲುಪುವಂತಾ ಗಲಿ. ವಿಶೇಷವಾಗಿ ಯುವ ಜನಾಂಗಕ್ಕೆ ಅವರ ಚಿಂತನೆಗಳು ಮುಟ್ಟುವ ಮೂಲಕ ಅವರ ಜ್ಞಾನ ವೃದ್ಧಿಯಾಗುವಂತಾಗಲಿದೆ ಎಂದು ಆಶಿಸಿದರು.

ಸಾನಿಧ್ಯ ವಹಿಸಿದ್ದ ವಿಜಯಪುರ ಜ್ಞಾನಾ ಯೋಗಾಶ್ರಮದ ಶ್ರೀಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಕೆಲವೇ ತಿಂಗಳಲ್ಲಿ ಇಲ್ಲಿ ಸುಂದರ-ಸಾರ್ಥಕ ಕಟ್ಟಡ ನಿರ್ಮಾಣ ವಾಗಲಿದೆ. ಬಸವಣ್ಣನವರ ಮೇರು ವ್ಯಕ್ತಿತ್ವ ವನ್ನು ಕೇವಲ ಶಬ್ದಗಳಲ್ಲಿ ವಣ ್ಸಲಾ ಗದು. ಅವರ ಜೀವನದ ಮುಖಗಳು ಅನೇಕ. ಧರ್ಮ ಹಾಗೂ ಸಮಾಜ ಸುಧಾರಣೆ ಸೇರಿ ದಂತೆ ಅನೇಕ ಆಯಾಮಗಳಲ್ಲಿ ಅವರ ಚಿಂತನೆಗಳನ್ನು ಕಾಣಬಹುದು. ಅಂತಹ ಮಹಾನುಭಾವರ ಚಿಂತನೆಗಳ ಅಧ್ಯಯನವು ಸಂಶೋಧನಾತ್ಮಕವಾಗಿ ಆಗಲು ಕೇಂದ್ರ ಸಹಕಾರಿಯಾಗಲಿದೆ ಎಂದು ನುಡಿದರು.

ನೈತಿಕತೆಯನ್ನು ಬಸವಣ್ಣ ಎತ್ತಿ ಹಿಡಿ ದವರು. ನೀತಿ ಎಂದರೆ ಒಳಶುಚಿ ಹಾಗೂ ಹೊರ ಶುಚಿ ಎಂದು ಬಣ ್ಣಸಿ ಅದೇ ದೇವ ನನ್ನು ವರಿಸುವ ಪರಿ ಎಂದು ಸಾರಿದವರು. ಮಾತು ಮತ್ತು ಮನಸು ಶುಚಿ ಇದ್ದರೆ ಪಡೆದ ಜ್ಞಾನಕ್ಕೊಂದು ಬೆಲೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಮಾತನಾಡಿ, 12ನೇ ಶತಮಾನದಲ್ಲಿ ಸಮಾಜ ಮತ್ತು ಧಾರ್ಮಿಕ ಸುಧಾರಣೆಗೆ ಉದಾತ್ತ ಚಿಂತನೆಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನೂ ಬಸವಣ್ಣ ಶ್ರೀಮಂತ ಗೊಳಿಸಿದರು. ಬಸವಣ್ಣನವರ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಶರಣರು ಸಮಾಜ ಪರಿ ವರ್ತನೆಗೆ ಶ್ರಮಿಸಿದ್ದಾರೆ ಎಂದರು.

ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಸವ ಪೀಠ 2012ರ ಮೇ 11ರಂದು ಕಾರ್ಯಾರಂಭ ಮಾಡಿತು. ಮಲೆಯೂರು ಗುರುಸ್ವಾಮಿ ಇದರ ಮೊದಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಆ ಬಳಿಕ 2013ರಿಂದ 2016ರವರೆಗೆ ಬರಗೂರು ರಾಮಚಂದ್ರಪ್ಪ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಡಾ.ಚಂದ್ರಶೇಖ ರಯ್ಯ ಸಂದರ್ಶಕ ಪ್ರಾಧ್ಯಾಪಕರಾಗಿದ್ದು, ಇಂದು ಶಂಕುಸ್ಥಾಪನೆ ನೆರವೇರಿಸಿದ ಸುತ್ತೂರು ಶ್ರೀಗಳು ಕಟ್ಟಡದ ಉದ್ಘಾಟನೆಯನ್ನೂ ನೆರವೇರಿಸಬೇಕು ಎಂದು ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ವಿವಿ ಕುಲಸಚಿವ (ಆಡಳಿತ) ಪ್ರೊ.ಲಿಂಗ ರಾಜ ಗಾಂಧಿ, ಬಸವಣ್ಣನವರ ತತ್ವ, ಸಿದ್ಧಾಂತ ಹಾಗೂ ಸಮಾನತೆ ಸಂದೇಶ ಸೇರಿದಂತೆ ಅವರ ವಿಚಾರಧಾರೆ ಪ್ರಚುರಪಡಿಸುವ ನಿಟ್ಟಿ ನಲ್ಲಿ ಮೈಸೂರು ವಿವಿಯಲ್ಲಿ ಬಸವ ಪೀಠ ಆರಂಭವಾಯಿತು. ಇದೀಗ ಸ್ವಂತ ಕಟ್ಟಡದಲ್ಲಿ ಮಹಾನ್ ಮಾನವತವಾದಿಯ ವಿಚಾರ ಪ್ರಚುರಪಡಿಸಲು ವೇದಿಕೆ ಸಜ್ಜಾಗುತ್ತಿದೆ ಎಂದರು. ಲೇಖಕ ಮಲೆಯೂರು ಗುರು ಸ್ವಾಮಿ, ಶ್ರೀ ಬಸವೇಶ್ವರ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ. ಚಂದ್ರಶೇಖ ರಯ್ಯ ಸೇರಿದಂತೆ ಮೈಸೂರು ವಿವಿ ಬೋಧಕ ಮತ್ತು ಬೋಧಕೇತರ ವರ್ಗದವರು ಇದ್ದರು.

Translate »