ಮೈಸೂರು ಹೃದಯ ಭಾಗದ ರಾಜಮಾರ್ಗದಲ್ಲೇ ಹೇಸಿಗೆ ಪರಿಸ್ಥಿತಿ
ಮೈಸೂರು

ಮೈಸೂರು ಹೃದಯ ಭಾಗದ ರಾಜಮಾರ್ಗದಲ್ಲೇ ಹೇಸಿಗೆ ಪರಿಸ್ಥಿತಿ

May 20, 2019

ಮೈಸೂರು: ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರ ವಾದ ಕೆ.ಟಿ.ಸ್ಟ್ರೀಟ್‍ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ರಘುಲಾಲ್ ಕಂಪನಿ ಮೆಡಿ ಕಲ್ಸ್ ಮುಂಭಾಗದಲ್ಲಿರುವ ಖಾಲಿ ನಿವೇಶನದ ಸುತ್ತ ಭದ್ರತೆಗಾಗಿ ಶೀಟ್‍ಗಳನ್ನು ಅಳವಡಿಸಲಾಗಿದೆ. ಆದರೆ ಇದು ಅವಿ ವೇಕಿಗಳಿಗೆ ಸಹಾಯ ಮಾಡಿಕೊಟ್ಟಂತಾಗಿದೆ. ಖಾಲಿ ನಿವೇಶನ ಹಾಗೂ ಮದ್ಯ ದಂಗಡಿ ನಡುವೆ ಸಣ್ಣ ಗಲ್ಲಿಯಿದೆ. ಇಲ್ಲಿ ಗಲೀಜು ಮಾಡುತ್ತಾರೆಂದು ಪಾಲಿಕೆ ಯವರು ಬ್ಯಾರಿಕೇಡ್ ಅಳವಡಿಸಿದ್ದರು. ಆದರೂ ಯಾವುದೇ ಪ್ರಯೋಜನವಾ ಗಿಲ್ಲ. ಅಕ್ಕಪಕ್ಕದಲ್ಲಿರುವ ಮದ್ಯದಂಗಡಿಗೆ ಬರುವವರಲ್ಲಿ ಕೆಲವರು ಬ್ಯಾರಿಕೇಡ್ ಸರಿಸಿ, ಪಾನಗೋಷ್ಟಿಗೆ ಬಳಸಿಕೊಳ್ಳುತ್ತಿ ದ್ದಾರೆ. ಮೂತ್ರ ವಿಸರ್ಜನೆಯೂ ಅಲ್ಲೇ ಆಗುತ್ತಿದೆ. ಮದ್ಯದ ಬಾಟಲ್, ಪ್ಯಾಕೇಟ್, ಪ್ಲಾಸ್ಟಿಕ್ ಲೋಟಗಳು ರಾಶಿ ಬಿದ್ದಿವೆ. ಮೂತ್ರದ ದುರ್ವಾಸನೆಯಿಂದ ಸಾರ್ವ ಜನಿಕರು ರೋಸಿ ಹೋಗಿದ್ದಾರೆ.

ನಿವೇಶನದ ರಕ್ಷಣೆಗೆ ಸುತ್ತಲೂ ಶೀಟ್ ಅಳವಡಿಸಿಕೊಳ್ಳಲಾಗಿದೆ. ಆದರೆ ಅದರ ಸುತ್ತಲಿನ ಸ್ವಚ್ಛತೆ ನಿರ್ವಹಣೆ ಮಾಡು ವುದು ಯಾರು?, ಶೀಟ್ ಮರೆಯಲ್ಲಿ ನಡೆ ಯುವ ಅನುಚಿತ ಕೆಲಸಗಳಿಗೆ ಕಡಿವಾಣ ಹಾಕುವವರು ಯಾರು? ಎಂದು ಸಾರ್ವ ಜನಿಕರು ಪ್ರಶ್ನಿಸಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಿದ್ದರೆ ಅದು ನಿವಾರಣೆ ಆಗುವವರೆಗೂ ಖಾಲಿ ನಿವೇಶನದ ಸುತ್ತಲಿನ ಸ್ವಚ್ಛತೆ ಕಾಪಾಡಿ ಕೊಳ್ಳುವಂತೆ ಸಂಬಂಧಪಟ್ಟವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ಇಲ್ಲವೇ ನಗರಪಾಲಿಕೆಯೇ ಈ ಬಗ್ಗೆ ಪರಿಣಾಮ ಕಾರಿ ಕ್ರಮ ಕೈಗೊಳ್ಳಬೇಕು. ಯಾರದೋ ನಿರ್ಲಕ್ಷ್ಯಕ್ಕೆ ಎಲ್ಲರೂ ತೊಂದರೆ ಅನು ಭವಿಸುವುದು ಎಷ್ಟು ಸರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹೋಟೆಲ್‍ವೊಂದರ ಕೊಳಚೆ ನೀರನ್ನು ಯುಜಿಡಿಗೆ ಹರಿಸಿರುವುದರಿಂದ ಮಕ್ಕಾಜಿ ಚೌಕದ ಬಳಿ ಮ್ಯಾನ್‍ಹೋಲ್ ಉಕ್ಕಿ ಹರಿ ಯುತ್ತಿದೆ. ಇನ್ನು ಮೊಬೈಲ್, ವಿದ್ಯುತ್ ಉಪಕರಣಗಳು, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳಿರುವ ಕೆ.ಟಿ.ಸ್ಟ್ರೀಟ್‍ನ ಎಲ್ಲೆಂದರಲ್ಲಿ ಕಸದ ರಾಶಿ ಕಾಣಿಸುತ್ತದೆ. ಹರಿದ ರಟ್ಟಿನ ಬಾಕ್ಸ್‍ಗಳು, ಪ್ಲಾಸ್ಟಿಕ್ ಕವರ್ ಇನ್ನಿತರ ತ್ಯಾಜ್ಯವನ್ನು ಕೆಲ ಮಳಿಗೆಯವರು ರಸ್ತೆ ಪಕ್ಕದಲ್ಲೇ ಹಾಕುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ ಪಕ್ಕದಲ್ಲಿರುವ ಕಸ ರಸ್ತೆಯನ್ನೆಲ್ಲಾ ಆವರಿ ಸುತ್ತಿದೆ. ಈ ಬಗ್ಗೆ ನಗರಪಾಲಿಕೆ ಗಮನ ಹರಿಸಬೇಕೆಂದು ಜನ ಒತ್ತಾಯಿಸಿದ್ದಾರೆ.

Translate »